ಸೋಮವಾರಪೇಟೆ, ಮೇ ೧೬: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ರೋಟರಿ ಜಿಲ್ಲಾ ಗವರ್ನರ್ ಡಿ.ಜಿ. ಕೇಶವ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸೋಮವಾರಪೇಟೆ ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿರುವ ಬಜೆಗುಂಡಿ ಗ್ರಾಮದಲ್ಲಿ ಪ್ರತಿದಿನ ನೂರಾರು ಮಂದಿ ಪ್ರಯಾಣಿಕರು ಸರ್ಕಾರಿ ಹಾಗೂ ಖಾಸಗಿ ಬಸ್ಗಳಿಗೆ ಕಾಯುತ್ತಿದ್ದು, ಈವರೆಗೆ ಸೂಕ್ತ ನಿಲ್ದಾಣ ಇರಲಿಲ್ಲ. ಮಳೆ, ಬಿಸಿಲಿನಲ್ಲಿ ನಿಂತುಕೊAಡೇ ಬಸ್ಗಳಿಗೆ ಕಾಯುವ ಸ್ಥಿತಿಯಿತ್ತು. ಇದನ್ನು ಮನಗಂಡ ಸೋಮವಾರಪೇಟೆ ರೋಟರಿ ಸಂಸ್ಥೆ, ನೂತನವಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ರೋಟರಿ ಅಧ್ಯಕ್ಷ ನಂಗಾರು ವಸಂತ್, ಕಾರ್ಯದರ್ಶಿ ಚೇತನ್, ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ಪದಾಧಿಕಾರಿಗಳಾದ ಉಲ್ಲಾಸ್ ಕೃಷ್ಣ, ರೋಟರಿ ನಿಯೋಜಿತ ಅಧ್ಯಕ್ಷ ಜೆ.ಕೆ. ಹೊನ್ನಪ್ಪ, ಕಾರ್ಯದರ್ಶಿ ಬಿದ್ದಪ್ಪ, ಮಾಜಿ ಅಧ್ಯಕ್ಷ ಪಿ.ಕೆ. ರವಿ, ಪ್ರಮುಖರಾದ ಬಿ.ಎಸ್. ಸುಂದರ್, ಪ್ರಕಾಶ್ ಕುಮಾರ್, ಹೃಷಿಕೇಶ್, ರೋಟರಿ ಮಹಿಳಾ ಘಟಕದ ಪದಾಧಿಕಾರಿಗಳು, ಗ್ರಾ.ಪಂ. ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.