ವೀರಾಜಪೇಟೆ, ಮೇ ೧೬: ಪ್ರಾಶರ್ ಸೆನ್ಸರ್ ಟೆಕ್ನಾಲಜಿ ಮತ್ತು ಹಾಕಿ ಕರ್ನಾಟಕದ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹಾಕಿ ಕ್ರೀಡೆಯ ಬಗ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಕಿ ಕಿಟ್ (ಹಾಕಿ ಸ್ಟಿಕ್ಸ್, ಬಾಲ್ಸ್, ಬಿಪ್ಸ್, ಶಿನ್ ಗಾರ್ಡ್ನ್ನು) ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಮುಖರು ಮತ್ತು ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಕರಿನೆರವಂಡ ಸೋಮಣ್ಣ ಮತ್ತು ರಘುನಾಥ್ ವಿ.ಆರ್. ವಿತರಿಸಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ., ದೈಹಿಕ ಶಿಕ್ಷಣ ನಿರ್ದೇಶಕರಾದ ರಾಖಿ ಪೂವಣ್ಣ. ಎಂ. ಮತ್ತು ವಿದ್ಯಾರ್ಥಿಗಳು ಇದ್ದರು.