ಮೇ ೧೭ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ (Woಡಿಟಜ ಊಥಿಠಿeಡಿಣeಟಿsioಟಿ ಆಚಿಥಿ). ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖವಾಗಿರುವ ರಕ್ತದೊತ್ತಡ ಸಮಸ್ಯೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು, ಈ ದಿನಾಚರಣೆಯ ಪ್ರಮುಖ ಉದ್ದೇಶ.

‘ನಿಯಮಿತ ಕಾಲಕ್ಕೆ ಅನುಗುಣವಾಗಿ ರಕ್ತದೊತ್ತಡ ಸರಿಯಾಗಿ ತಪಾಸಣೆ ಮಾಡಿಕೊಳ್ಳಿ. ರಕ್ತದೊತ್ತಡ ನಿಯಂತ್ರಣದಲ್ಲಿರಿಸಿ ಜೀವಿತಾವಧಿ ಹೆಚ್ಚಿಸಿಕೊಳ್ಳಿ, ಎಂಬುದು ಈ ಬಾರಿ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯ ಧ್ಯೇಯ ವಾಕ್ಯ.

ಯಾವ ರೋಗ ಲಕ್ಷಣಗಳೂ ಇಲ್ಲದೆ, ಮಾರಣಾಂತಿಕವಾಗಬಲ್ಲ ಅಧಿಕ ರಕ್ತದೊತ್ತಡದ ಸಮಸ್ಯೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡ ರಾಷ್ಟçಗಳು ಮತ್ತು ಮಧ್ಯಮ ಆದಾಯವಿರುವ ರಾಷ್ಟçಗಳಲ್ಲಿ ಹೆಚ್ಚು.

ವಿಶ್ವದಲ್ಲಿ ಸುಮಾರು ೧೩೦ ಕೋಟಿ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದು, ವಾರ್ಷಿಕ ೧ ಕೋಟಿ ಜನರು ಇದರಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ. ಇದರಿಂದ ಈ ಸಮಸ್ಯೆಯ ಗಂಭೀರತೆ ಸ್ಪಷ್ಟವಾಗುತ್ತದೆ.

ಭಾರತದಲ್ಲಿ ಅಧಿಕ ರಕ್ತದೊತ್ತಡದಿಂದ, ಪ್ರತಿವರ್ಷ ಸುಮಾರು ೧೬ ಲಕ್ಷ ಜನರು ಪ್ರಾಣ ಕಳೆದುಕೊಂಡರೆ, ಇದರಿಂದ ಸುಮಾರು ೩ ಕೋಟಿ ಜನರು ಅಂಗವೈಕಲ್ಯಕ್ಕೀಡಾಗಿದ್ದಾರೆ. ಅಧಿಕ ರಕ್ತದೊತ್ತಡದಿಂದ ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯು, ಮಧುಮೇಹದಂತಹ ಸಮಸ್ಯೆಗಳು ಎದುರಾಗುತ್ತವೆ.

ಸುಮಾರು ೩೦ ರಿಂದ ೮೦ ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಈ ಸಮಸ್ಯೆ ಸಾಮಾನ್ಯ ಎನ್ನುವ ಪರಿಸ್ಥಿತಿ ಎದುರಾಗಿರುವುದರಿಂದ, ವರ್ಷಕ್ಕೆ ೨ ಬಾರಿಯಾದರೂ ರಕ್ತದೊತ್ತಡ ತಪಾಸಣೆಯನ್ನು ವೈದ್ಯರಿಂದ ಮಾಡಿಸಿಕೊಳ್ಳುವುದು ಕ್ಷೇಮ.

ಆಹಾರದಲ್ಲಿ ಉಪ್ಪು ನಿಯಮಿತವಾಗಿ ಬಳಸುವುದು, ಜಂಕ್‌ಫುಡ್, ಫಾಸ್ಟ್ಫುಡ್, ಎಣ್ಣೆಯಿಂದ ಹುರಿದ ಬೊಜ್ಜಿನ ಪದಾರ್ಥಗಳು, ಕುರುಕುಲು ತಿಂಡಿ ಸೇವನೆ ನಿಯಂತ್ರಿಸಬೇಕು. ತಾಜಾ ಕಾಯಿಪಲ್ಲೆ, ಹಣ್ಣುಗಳ ಸೇವನೆ ಸೂಕ್ತ.

ಒತ್ತಡ ನಿಯಂತ್ರಿಸುವುದನ್ನು ಕರಗತ ಮಾಡಿಕೊಳ್ಳಬೇಕು. ಉದ್ವೇಗ, ಕೋಪ ದೂರಾಗಿಸಿ, ಹುಸಿನಗು, ಮುಗುಳ್ನಗು ನಮ್ಮ ಪರಿಚಯ ಎಂಬAತೆ, ಮನಸ್ಸು ಸದಾ ಪ್ರಶಾಂತ ಚಿತ್ತವಾಗಿರುವಂತೆ ಜೀವನಶೈಲಿ ಬದಲಾಗಬೇಕು. ರಾತ್ರಿ ಹಾಯಾದ ನಿದ್ರೆ ನಮ್ಮದಾಗಬೇಕು.

ದೇಹದ ಅಂಗಾAಗಗಳಿಗೆ ಹೃದಯದಿಂದ ಶುದ್ಧ ರಕ್ತ ಪಂಪ್ ಮಾಡಲು ನಿಯಮಿತ ಮಿತಿಯಲ್ಲಿ ಒತ್ತಡ ಇರಬೇಕು. ಈ ಒತ್ತಡನ ಮಿತಿ ಏರಿಕೆಯಾದಾಗ, ಅಧಿಕ ರಕ್ತದೊತ್ತಡ ಸಮಸ್ಯೆ ಎದುರಾಗುತ್ತದೆ. ಆರಂಭದಲ್ಲಿ ರೋಗ ಲಕ್ಷಣ ರಹಿತವಾಗಿದ್ದು, ನಂತರ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡದಿಂದ ತಲೆನೋವು, ವಾಕರಿಕೆ, ಮೂಗಿನಲ್ಲಿ ರಕ್ತ ಸೋರುವುದು, ವಾಂತಿ, ತಲೆ ತಿರುಗುವಿಕೆ, ದೇಹದ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದು, ಉಸಿರಾಟ ಸಮಸ್ಯೆ, ದೃಷ್ಟಿಮಂದ, ಆಯಾಸ, ಸ್ಮರಣಶಕ್ತಿಯ ಸಮಸ್ಯೆ, ಬುದ್ಧಿಮಾಂದ್ಯತೆಯೂ ಎದುರಾಗಬಹುದು. ದಿನನಿತ್ಯದ ಕೆಲಸದ ಒತ್ತಡದಿಂದ ದಣಿವು, ಆಯಾಸ ಎಂಬ ಉಪೇಕ್ಷೆ ಸಲ್ಲದು.

ಉತ್ತಮ ಗುಣಮಟ್ಟದ ಆಹಾರ ಸೇವನೆ, ಒತ್ತಡ ರಹಿತ ಜೀವನ ಶೈಲಿಯಿಂದ ರಕ್ತದೊತ್ತಡ (೯೦-೧೪೦) ನಿಯಂತ್ರಣದಲ್ಲಿರಿಸಿ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಮಹತ್ವದ್ದು. ಅಗತ್ಯ ಸಂದರ್ಭಗಳಲ್ಲಿ ವೈದ್ಯರಿಂದ ತಪಾಸಣೆ ಜೊತೆಗೆ ಅವರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುವುದು ಸೂಕ್ತ. ನಮ್ಮ ದೇಶದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ರಕ್ತದೊತ್ತಡ ನಿಯಂತ್ರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವವರ ಸಂಖ್ಯೆ ಕೇವಲ ಶೇ. ೧೨ ರಷ್ಟಿದೆ.

ಈ ಹಿನ್ನೆಲೆಯಲ್ಲಿ Siಟeಟಿಣ ಏiಟಟeಡಿ ಆಗಿರುವ ಅಧಿಕ ರಕ್ತದೊತ್ತಡ ಕುರಿತು ಅರಿವು ಮೂಡಿಸಿಕೊಂಡು, ರಕ್ತದೊತ್ತಡ ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಸಮಾಜ ನಿರ್ಮಿಸೋಣ.

- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ,

ಮಡಿಕೇರಿ. ಮೊ. ೯೮೪೫೪೯೯೧೧೨.