ಸಿದ್ದಾಪುರ, ಮೇ ೧೬: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಡ್ರಿಂಕ್ ಅಂಡ್ ಡ್ರೆöÊವ್’ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬAಧಿಸಿದAತೆ ಹಲವು ವಾಹನ ಚಾಲಕರ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ಕಳೆದೆರಡು ದಿನಗಳಿಂದ ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸಿ ನಾಲ್ಕು ಡ್ರಿಂಕ್ ಅಂಡ್ ಡ್ರೆöÊವ್ ಪ್ರಕರಣ ಪತ್ತೆ ಆಗಿರುತ್ತವೆ. ಅಲ್ಲದೆ ದಾಖಲೆ ರಹಿತ ವಾಹನ ಚಾಲನೆ, ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆಗೆ ಸಂಬAಧಿಸಿದ ಸಿದ್ದಾಪುರ ಪೊಲೀಸರು ೫೦ಕ್ಕೂ ಅಧಿಕ ವಾಹನಗಳಿಗೆ ದಂಡ ವಿಧಿಸಿದ್ದಾರೆ.