ಮಡಿಕೇರಿ, ಮೇ ೧೮: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ೭ನೇ ವರ್ಷದ ಅರೆಭಾಷೆ ಗೌಡ ಕುಟುಂಬಗಳ ನಡುವಿನ ಗೌಡ ಫುಟ್ಬಾಲ್ ಕಪ್‌ಗೆ ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್ ಪಂದ್ಯಾಟ ಉದ್ಘಾಟಿಸಿದರು. ಇದಕ್ಕೂ ಮುನ್ನ ಪಂದ್ಯಾಟದ ಯಶಸ್ವಿಗೆ ಗಣಪತಿ ಹೋಮ ನಡೆಸಲಾಯಿತು.
ಫಲಿತಾಂಶ : ಪೊನ್ನಚ್ಚನ ಹಾಗೂ ತೋಟಂಬೈಲು ನಡುವಿನ ಪಂದ್ಯದಲ್ಲಿ ತಲಾ ೨ ಗೋಲುಗಳು ದಾಖಲಾದ ಹಿನ್ನೆಲೆ ಟೈ ಬ್ರೇಕರ್ ಮೊರೆ ಹೋಗಲಾಯಿತು. ಇದರಲ್ಲಿ ೫-೩ ಅಂತರದಲ್ಲಿ ತೋಟಂಬೈಲು ಜಯ ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡಿತು.
೪-೨ ಗೋಲುಗಳ ಅಂತರದಲ್ಲಿ ಕುಂಬನ ವಿರುದ್ಧ ಉಳುವಾರನ ಜಯ ಸಾಧಿಸಿತು. ಮಂಞAಡ್ರ ಬಾರಿಕೆ ವಿರುದ್ಧ ೧-೦ ಗೋಲಿನಿಂದ ಗೆಲುವಿನ ನಗೆ ಬೀರಿತು. ಉಡುದೋಳಿರ ೫-೦ ಗೋಲುಗಳಿಂದ ಕೊಂಬAಡ ವಿರುದ್ಧ ಜಯಸಾಧಿಸಿತು. ೪-೨ ಗೋಲು ಗಳಿಂದ ಇಟ್ಟಣಿಕೆ ವಿರುದ್ಧ ಮುಕ್ಕಾಟಿ (ಬಿ) ಜಯಶಾಲಿಯಾಯಿತು.
೯ ಗೋಲುಗಳಿಂದ ಚಂಡೀರ ಬೈಮನ ವಿರುದ್ಧ ಭರ್ಜರಿ ಜಯ ಸಾಧಿಸಿತು. ಪೊನ್ನಚ್ಚನ ೪-೦ ಗೋಲುಗಳಿಂದ ಉಳುವಾರನ ವಿರುದ್ಧ ಗೆದ್ದಿತು. ಮಂಞAಡ್ರ ವಿರುದ್ಧ ಉಡುದೋಳಿರ ೧ ಗೋಲುಗಳಿಂದ ಗೆದ್ದರೆ, ೪ ಗೋಲುಗಳ ಅಂತರದಿAದ ಚಂಡೀರ ತಂಡ ಮುಕ್ಕಾಟಿ (ಬಿ) ವಿರುದ್ಧ ಜಯ ಸಾಧಿಸಿತು. ಇಂದಿನ ಪಂದ್ಯಗಳು
ಕೋಡಿ-ತೇನನ
ಹೊಸೊಕ್ಲು v/s ಮುಕ್ಕಾಟಿ (ಎ)
ಪೊಡನೋಳನ v/s ಅಯ್ಯಂಡ್ರ
ಚೆಟ್ಟಿಮಾಡ (ಬಿ) v/s ದೇವಜನ
ಕಲ್ಲುಮುಟ್ಲು v/s ಮುಕ್ಕಾಟಿ (ಕಡಿಯತ್ತೂರು)
ಚೆಟ್ಟಡ್ಕ v/s ದಂಬೆಕೋಡಿ
ಬೈಲೋಳಿ v/s ಕಡ್ಲೇರ
ಕೂಡಕಂಡಿv/sಪೂಳಕAಡ