ಸಿದ್ದಾಪುರ, ಮೇ ೧೭: ಮಾಲ್ದಾರೆ ಸಮೀಪದ ಬಾಡಗ - ಬಾಣಂಗಾಲ ಗ್ರಾಮದಲ್ಲಿ ಕಾಡಾನೆಗಳು ಹಾಡಹಗಲೇ ಕಾಫಿ ತೋಟದೊಳಗೆ ನುಗ್ಗಿದ ಹಿನ್ನೆಲೆಯಲ್ಲಿ ಕಾರ್ಮಿಕರು ಭಯಭೀತರಾಗಿ ಸ್ಥಳದಿಂದ ದಿಕ್ಕ ಪಾಲಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರದಂದು ಬಾಡಗ - ಬಾಣಂಗಾಲ ಗ್ರಾಮದ ಬಿದ್ದಪ್ಪ ಎಂಬವರ ಕಾಫಿ ತೋಟದೊಳಗೆ ಕಾಡಾನೆಗಳು ಹಗಲಿನ ಸಮಯದಲ್ಲಿ ಲಗ್ಗೆಯಿಟ್ಟ ಪರಿಣಾಮ ಕಾರ್ಮಿಕರು ಕಾಡಾನೆಗಳನ್ನು ಕಂಡು ಬೆದರಿದ್ದಾರೆ. ಗ್ರಾಮದ ಸ್ಮಶಾನದ ಪಕ್ಕದ ಇಬ್ಬರನ್ನು ಕಾಡಾನೆ ಬೆನ್ನಟ್ಟಿದೆ. ಓಡಿ ಕಾಡಾನೆ ದಾಳಿಯಿಂದ ಇಬ್ಬರೂ ಪಾರಾಗಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿ ಫÀಸಲುಗಳನ್ನು ನಾಶಗೊಳಿಸುತ್ತಿದೆ. ಕಳೆದೆರಡು ದಿನಗಳ ಹಿಂದೆಷ್ಟೇ ಉಪಟಳ ನೀಡುತ್ತಿದ್ದ ಪುಂಡಾನೆಯೊAದನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು ಆದರೆ ಈ ಭಾಗದಲ್ಲಿ ೩೦ಕ್ಕೂ ಅಧಿಕ ಕಾಡಾನೆಗಳು ಮರಿ ಆನೆಗಳೊಂದಿಗೆ ಕಾಫಿ ತೋಟಗಳಲ್ಲಿ ಇರುವುದಾಗಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.