ಮಡಿಕೇರಿ, ಮೇ ೧೭ : ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕೊಡವ ಕೇರಿಯ ೧೭ನೇ ವಾರ್ಷಿಕ ಮಹಾಸಭೆಯು ನಗರದ ಬಾಲಭವನದಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇರಿಯ ಸದಸ್ಯರು ಹಾಗೂ ‘ಂಃBಔಖಿಖಿ’ ಲ್ಯಾಬರೇಟರೀಸ್ (ಸೇಲ್ಸ್)ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಕೀಪಾಡಂಡ ಬಿ. ಮೊಣ್ಣಪ್ಪ, ಇಂದಿನ ಯುವ ಪೀಳಿಗೆಗೆ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಬೇಕು. ಆ ಮೂಲಕ ಶೈಕ್ಷಣಿಕ ಪ್ರಗತಿಯೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೇರಿಯ ಅಧ್ಯಕ್ಷ ಚೋಳಪಂಡ ಎಂ.ವಿಜಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾದ ಪೂಳಂಡ ಮಧು ಬೋಪಣ್ಣ, ನಿರ್ದೇಶಕರಾದ ಚಾಮೇರ ಚೀಯಣ್ಣ, ಕೊಚ್ಚೆರ ಕವನ್, ಪುದಿಯತಂಡ ಅಪ್ಪಯ್ಯ, ಮತ್ರಂಡ ಅಕ್ಷಿತ ಪುನೀತ್ ಪಾಲ್ಗೊಂಡಿದ್ದರು.
ಚೊಟ್ಟAಡ ದೇಚಮ್ಮ ಪ್ರದೀಪ್ ಪ್ರಾರ್ಥಿಸಿದರು. ಬೊಳ್ಳಜ್ಜಿರ ಯಮುನಾ ಅಯ್ಯಪ್ಪ ಅತಿಥಿ ಪರಿಚಯ ಮತ್ತು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಂದನೆರವAಡ ಸಂಜು ಅಚ್ಚಯ್ಯ ಕಳೆದ ವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು. ಚೊಟ್ಟಂಡ ದಿವ್ಯಾ ಪ್ರದೀಪ್ ಸ್ವಾಗತಿಸಿ, ವಂದಿಸಿದರು.
ಮಹಾಸಭೆಯ ಬಳಿಕ ಕೇರಿಯ ಸದಸ್ಯರು ಹಾಗೂ ಮಕ್ಕಳು ವಿವಿಧ ಆಟೋಟ ಸ್ಪರ್ಧೆ ಮತ್ತು ವಾಲಗತಾಟ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.