ವೀರಾಜಪೇಟೆ, ಮೇ ೧೮: ತೆಕ್ಕ್ ಮೊಗದ ದೇವಿ ಎಂದು ಖ್ಯಾತಿಗೊಂಡ ಬಿಳುಗುಂದ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಬೋಡ್‌ನಮ್ಮೆ ಶ್ರದ್ದಾ ಭಕ್ತಿಯಿಂದ ಜರುಗಿತು.
ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳುಗುಂದ, ನಲ್ವತೋಕ್ಲು, ಮತ್ತು ಹೊಸಕೋಟೆ ಗ್ರಾಮಗಳ ಆರಾಧ್ಯ ದೇವಿಯಾದ ಶ್ರೀ ಭದ್ರಕಾಳಿ ದೇಗುಲದ ವಾರ್ಷಿಕ ಬೋಡ್ ನಮ್ಮೆ ಮೂರು ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳಿಂದ ಸಂಪನ್ನ ಗೊಂಡಿತು. ಮೇ ತಿಂಗಳ ೭ ರಂದು ಕಟ್ಟು ಬೀಳುವುದು ತಾ. ೧೩ ರಂದು ಪಟ್ಟಣಿ ನಂತರ ರಾತ್ರಿ ದೇವ ಬನದಿಂದ ದೇವಿಯನ್ನು ದೇವಾಲಯಕ್ಕೆ ಕರೆತರಲಾಯಿತು. ರಾತ್ರಿ ಸಾಂಪ್ರದಾಯಿಕವಾದ ಬೋಡ್ ಕಳಿ (ದೇವಿಗೆ ಪ್ರಿಯವಾದ ವಿವಿಧ ವೇಶಭೂಷಣ) ಧರಿಸಿ ಗ್ರಾಮ ಸಂಚಾರಕ್ಕೆ ತೆರಳಲಾಯಿತು. ತಾ. ೧೪ ರಂದು ಸಂಜೆ ನಲ್ವತೊಕ್ಲು ಹೊಸಕೋಟೆ ಭಾಗದಿಂದ ತಂಗಿ ತೆರೆ ಮತ್ತು ಬಿಳುಗುಂದ ಭಾಗದಿಂದ ಅಕ್ಕ ತೆರೆಗಳು (ತಟ್ಟ್ ತೆರೆಗೆ ದೇವಿಯ ಮುಖವಾಡ ಅಳವಡಿಸಿದ ತೆರೆಗಳು) ಆಗಮನವಾಯಿತು. ತೆರೆಗಳೊಂದಿಗೆ ಕರಿಚೌಂಡಿ ಮತ್ತು ಪೊವ್ವದಿ ದರ್ಶನಗಳು ನಡೆಯಿತು. ಬೋಡ್ ಕಳಿ ಧರಿಸಿರುವ ಅಸಂಖ್ಯಾತ ಭಕ್ತರು ವಿವಿಧ ಬಗೆಯ ವೇಶಭೂಷಣಗಳೊಂದಿಗೆ ದೇಗುಲಕ್ಕೆ ಆಗಮಿಸಿ ಗರ್ಭ ಗುಡಿಯ ಪ್ರದಕ್ಷಿಣೆಯೊಂದಿಗೆ ದೇವಿಯನ್ನು ಸ್ತುತಿಸಿ ಮನೆಗಳಿಗೆ ಹಿಂದಿರುಗಿದರು. ತಾ ೧೫ ರಂದು ಈಶ್ವರ ದೇವರನ್ನು ನೆನೆದು ಕುದುರೆಯನ್ನು ತರಲಾಯಿತು. ತದ ನಂತರದಲ್ಲಿ ಚೂಳೆಕಳಿ ನಡೆಯಿತು. ಬೋಡ್ ನಮ್ಮೆಯಲ್ಲಿ ಪೌರಾಣಿಕ, ಆಧುನಿಕ, ಐತಿಹಾಸಿಕ ಹಿನೆÀ್ನಲೆಗಳನ್ನು ಆಧರಿಸಿ ವೇಶ ಧರಿಸಿ ಮನೆ ಮನೆಗೆ ತೆರಳಿ ಕಾಣಿಕೆಯನ್ನು ಸಂಗ್ರಹಿಸಲಾಗಿ ದೇವಿಗೆ ಅರ್ಪಣೆ ಮಾಡುವುದು ಪದ್ಧತಿಯಾಗಿದೆ.
ಪ್ರಮುಖವಾಗಿ ಡೋಲ್ ಭಾರಿಸಿಕೊಂಡು ದೇವಿಯನ್ನು ಸ್ತುತಿಸಿ ಮತ್ತು ಮನೆಯ ಮಂದಿಯ ಹೆಸರುಗಳ ಮೇಲೆ ಹಾಡುವುದು ಸಾಂಪ್ರ ದಾಯಕವಾಗಿ ನಡೆದುಬಂದಿದೆ.
ಗ್ರಾಮದ ದೇವ ತಕ್ಕ, ಊರು ತಕ್ಕ ಮತ್ತು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ದೇಗುಲದ ಆರ್ಚಕರು, ಮೂರು ಗ್ರಾಮಗಳ ಗ್ರಾಮಸ್ಥರು, ನೆರೆಯ ಗ್ರಾಮಸ್ಥರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದು ದೇವಿಯ ಆಶೀರ್ವಾದ ಪಡೆದÀರು.
- ಕಿಶೋರ್ ಕುಮಾರ್ ಶೆಟ್ಟಿ