ಮಡಿಕೇರಿ, ಮೇ ೧೮: ಇತ್ತೀಚೆಗೆ ಯು.ಎ.ಇ ನಲ್ಲಿ ಸಮಾಪ್ತಿಗೊಂಡ ಮಿಸಸ್ ಇಂಡಿಯಾ ವರ್ಲ್ಡ್ವೈಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂಲತಃ ಕೊಡಗಿನವರಾದ ತೃಪ್ತಿ ನಂಜಪ್ಪ ಅವರು, ಸ್ಪರ್ಧೆಯ ಡೆನ್ಮಾರ್ಕ್ ರಾಷ್ಟçದ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಹಾಗೂ ಟಾಪ್-೨೦ ಸ್ಪರ್ಧಾಳುಗಳಲ್ಲಿ ಸ್ಥಾನ ಗಳಿಸಿದ್ದಾರೆ.

ವಿಶ್ವದ ವಿವಿಧ ರಾಷ್ಟçಗಳಲ್ಲಿ ನೆಲೆಸಿರುವ ಭಾರತೀಯರಿಗಾಗಿರುವ ಈ ‘ಬ್ಯೂಟಿ ಪೇಜಂಟ್’ ಸ್ಪರ್ಧೆಯ ೧೩ನೇ ಆವೃತ್ತಿಯು ಈ ತಿಂಗಳ ಮೊದಲ ವಾರ ಯು.ಎ.ಇ ನಲ್ಲಿ ನೆರವೇರಿತು. ಮಹಿಳೆಯರ ಸಬಲೀಕರಣ, ವಿವಿಧ ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ಕ್ರೋಢೀಕರಣಕ್ಕೆ ಈ ಬ್ಯೂಟಿ ಪೇಜಂಟ್ ಹೆಸರುವಾಸಿಯಾಗಿದ್ದು, ಮೂಲತಃ ಕೊಡಗಿನವರಾದ ತೃಪ್ತಿ ಅವರು ಇದರಲ್ಲಿ ಭಾಗವಹಿಸಿ ಸಾಧನೆಗೈದಿದ್ದಾರೆ. ಡೆನ್ಮಾರ್ಕ್ ರಾಷ್ಟçದಲ್ಲಿ ಸಂಸ್ಥೆಯೊAದರ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ತೃಪ್ತಿ ಅವರು, ಈ ಸ್ಪರ್ಧೆಯ ಭಾಗವಾದ ವಿವಿಧ ಸಾಮಾಜಿಕ ಕಾರ್ಯಗಳ ಅರಿವು ಸಂಬAಧ ರೂ. ೩.೮೬ ಲಕ್ಷದಷ್ಟು ಹಣವನ್ನು ದೇಣಿಗೆಯ ರೂಪದಲ್ಲಿ ಕ್ರೋಢೀಕರಿಸಿ ಮಾದರಿಯಾಗಿದ್ದಾರೆ.

ತೃಪ್ತಿ ಅವರು ಮೂಲತಃ ಹೈಸೊಡ್ಲೂರು ಗ್ರಾಮದವರಾದ ಇದೀಗ ಪುಣೆಯಲ್ಲಿ ನೆಲೆಸಿರುವ ಮಂಡAಗಡ ಜಿ. ನಂಜಪ್ಪ - ರೀನಾ ನಂಜಪ್ಪ.