ವೀರಾಜಪೇಟೆ, ಮೇ ೧೮: ವೀರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ವೀರಾಜಪೇಟೆ ರೋಟರಿ ಶಾಲಾ ಸಭಾಂಗಣದಲ್ಲಿ ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ನ ಉಚಿತ ತಪಾಸಣಾ ಶಿಬಿರ ನಡೆಯಿತು.
ಬೆಂಗಳೂರು ಗ್ಲೋಬಲ್ ಫೌಂಡೇಶನ್ ಟ್ರಸ್ಟಿ ಕರ್ನಲ್ ಸಿ.ಎ. ಅಯ್ಯಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನನಗೆ ೨೦೧೯ರಲ್ಲಿ ಕ್ಯಾನ್ಸರ್ ಇದೆ ಎಂದು ಧೃಡಪಟ್ಟಿತ್ತು. ಆದರೆ ಧೃತಿಗೆಡದೆ ವೈದ್ಯರನ್ನು ಸಂಪರ್ಕ ಮಾಡಿ ಸೂಕ್ತ ರೀತಿಯಲ್ಲಿ ಅವರುಗಳಿಂದ ಚಿಕಿತ್ಸೆ ಪಡೆದು ಕ್ಯಾನ್ಸರ್ನಿಂದ ಮುಕ್ತಿ ಪಡೆದಿದ್ದೇನೆ. ಈಗ ಆರೋಗ್ಯ ಸುಧಾರಿಸಿ ಎಲ್ಲರಂತಿದ್ದೇನೆ. ಬೆಂಗಳೂರು ಗ್ಲೋಬಲ್ ಟ್ರಸ್ಟ್ ಮೂಲಕ ರಾಜ್ಯದ ಸುಮಾರು ೩೨,೦೦೦ ಕುಟುಂಬದ ಸದಸ್ಯರು ಅಂದರೆ ಸುಮಾರು ಒಂದು ಲಕ್ಷ ಮಂದಿಯ ಚಿಕಿತ್ಸೆಗೆ ಸಂಸ್ಥೆ ನೆರವಾಗಿದೆ ಎಂದು ತಿಳಿಸಿದರು.
ಪ್ರಖ್ಯಾತ ಕ್ಯಾನ್ಸರ್ ವೈದ್ಯ ಎಸ್.ಕೆ. ರಘುರಾಮ ಮಾತನಾಡಿ, ಪ್ರತಿ ಮನುಷ್ಯರಲ್ಲಿ ನಲವತ್ತು ವರ್ಷ ಕಳೆದ ನಂತರ ಮೂತ್ರ ವಿಸರ್ಜನೆ ಮೊದಲ ರೀತಿಯಲ್ಲಿ ಇರುವುದಿಲ್ಲ. ದಿನದಿಂದ ದಿನಕ್ಕೆ ಅದರ ವೇಗ ಕಡಿಮೆಯಾಗುತ್ತದೆ. ಆದುದರಿಂದ ಪ್ರತಿಯೊಬ್ಬ ಪುರುಷರು ಕೂಡ ವರ್ಷಕ್ಕೆ ಒಂದು ಬಾರಿ ರಕ್ತ ಪರೀಕ್ಷೆ ಮಾಡಿಸಿ ಪಿಎಸ್ಎ ರಿಪೋರ್ಟ್ ಪಡೆದು ತಜ್ಞ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುವಂತೆ ಮಾಹಿತಿ ನೀಡಿದರು.
ವೈದ್ಯ ಬೆಳ್ಯಪ್ಪ ಮಾತನಾಡಿ, ಸ್ತಿçÃಯರಲ್ಲಿ ಸ್ತನಗಳಲ್ಲಿ ಸಣ್ಣಪುಟ್ಟ ನೋವುಗಳು ಕಂಡು ಬಂದಲ್ಲಿ ನಲವತ್ತು ವರ್ಷ ಕಳೆದ ನಂತರ ಮ್ಯಾನೊಗ್ರಾಮ್ ಎಕ್ಸ್ರೇ ಮಾಡಿಸಿಕೊಳ್ಳಬೇಕು ಮತ್ತು ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ನ ಅದ್ಯಕ್ಷ ಎಂ.ಎA. ಬನ್ಸಿ ಪೂವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ಯಾನ್ಸರ್ ಕಾಯಿಲೆ ಇದೆ ಎಂದರೆ ಯಾರು ಕೂಡ ಹೆದರಬಾರದು, ಕ್ಯಾನ್ಸರ್ ಕಾಯಿಲೆಗೆ ಅಗತ್ಯವಾದ ಎಲ್ಲ ಔಷಧಿಗಳನ್ನು ಕಂಡುಹಿಡಿದಿದ್ದಾರೆ. ಇಂದು ನಮ್ಮ ಸಂಸ್ಥೆ ವತಿಯಿಂದ ಕ್ಯಾನ್ಸರ್ ತಪಾಸಣೆ ಅಥವಾ ಚಿಕಿತ್ಸೆಗಾಗಿ ಶಿಬಿರಕ್ಕೆ ಬರುವವರು ಅವರಿಗೆ ಸಂಬAಧಿಸಿದ ವೈದ್ಯಕೀಯ ಮಾಹಿತಿ ಕಡತ ತರುವಂತೆ ಕೋರಿದ್ದೇವು, ಅದೇ ಪ್ರಕಾರ ಐವತ್ತಕ್ಕೂ ಹೆಚ್ಚು ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ರಘುನಾಥ್, ಎಂ.ಎಸ್. ಬೆಳ್ಯಪ್ಪ, ಡಾ. ದೀಪಕ್, ಡಾ. ಸುನಿತಾ, ಡಾ. ಸಾಗರಿಕ ನಿತ್ಯನಂದ ಅವರು ತಪಾಸಣೆ ನಡೆಸಿ ಚಿಕಿತ್ಸಾ ಸಲಹೆ ನೀಡಿದರು.
ಶಿಬಿರದಲ್ಲಿ ವಕೀಲ ಮಾದಪ್ಪ, ನಿವೃತ್ತ ಯೋಧರ ಸಂಘದ ವೀರಾಜಪೇಟೆ ತಾಲೂಕಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ರೋಟರಿ ಕ್ಲಬ್ನ ಹಿರಿಯ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸದಸ್ಯರು ರೋಟರಿ ಶಾಲೆಯ ಎಲ್ಲಾ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದರು.