ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಮೇ ೧೮: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಅಡಕಮಾರನಹಳ್ಳಿಯ ತುಮಕೂರು ರಸ್ತೆ ಮಾದಾವರ ಫ್ಲೆöÊಓವರ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಅವಘಡಕ್ಕೀಡಾಗಿದೆ. ಚಾಲಕ ಮತ್ತು ನಿರ್ವಾಹಕ ಸೇರಿದಂತೆ ೮ ಮಂದಿ ಗಾಯಗೊಂಡಿದ್ದಾರೆ.

ಸೋಮವಾರಪೇಟೆಯಿAದ ಬೆಳಿಗ್ಗೆ ೫.೪೫ ಗಂಟೆಗೆ ಹೊರಟಿದ್ದ ಈ ಬಸ್ ಚನ್ನರಾಯಪಟ್ಟಣ ಮಾರ್ಗವಾಗಿ ಬೆಂಗಳೂರು ನಿಲ್ದಾಣಕ್ಕೆ ೧೧.೧೫ ಗಂಟೆಗೆ ತಲುಪಬೇಕಿತ್ತು. ಆದರೆ ಮಾದಾವರ ಫ್ಲೆöÊಓವರ್ ಬಳಿ ಎದುರಿಗೆ ಹೋಗುತ್ತಿದ್ದ ಕಾರೊಂದು ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕಲು ಬಲಕ್ಕೆ ತಿರುಗಿಸಿದಾಗ ಹಿಂದೆ ಹೋಗುತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕೂಡಲೇ ಬಸ್ಸನ್ನು ಬಲಕ್ಕೆ ತಿರುಗಿಸಿಕೊಂಡಿದ್ದಾರೆ. ಆದರೆ, ವೇಗದಲ್ಲಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಜಿಗಿದಿದೆ.

೪೦ ಅಡಿ ಎತ್ತರದ ಫ್ಲೆöÊಓವರ್‌ನಲ್ಲಿ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಒಂದು ವೇಳೆ ಬಸ್ ಏನಾದರೂ ೪೦ ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರೆ, ಪ್ರಯಾಣಿಕರ ಜೀವಕ್ಕೆ ಹಾನಿ ಆಗುತಿದ್ದುದಲ್ಲದೆ, ಕೆಳಗಿನ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಸಾಧ್ಯತೆ ಇತ್ತು.

ಬೆಂಗಳೂರಿನ ಐದನೇ ಡಿಪೋಗೆ ಸೇರಿದ ಈ ಬಸ್ ನಲ್ಲಿ ೩೫ ಜನರು ಪ್ರಯಾಣಿಸುತಿದ್ದು ಗಾಯಾಳುಗಳನ್ನು ಸಮೀಪದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಅನ್ನು ಕ್ರೇನ್ ಮೂಲಕ ತೆರವುಗೊಳಿಸಿದ್ದಾರೆ. ಬಸ್‌ಗೆ ಹೆಚ್ಚಿನ ಹಾನಿ ಆಗಿದ್ದು ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿರುವುದು ವಿಶೇಷವಾಗಿದೆ.