ಪೊನ್ನಂಪೇಟೆ, ಮೇ ೧೮: ಕೇರಳದ ಕ್ಯಾಲಿಕಟ್‌ನಲ್ಲಿ ಜಪಾನ್ ಶೋಟಕಾನ್ ಕರಾಟೆ ಸಂಸ್ಥೆ (ಜೆ.ಎಸ್.ಕೆ.ಎ) ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟಿçÃಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.

ಪೊನ್ನಂಪೇಟೆ ಸಂತ ಅಂತೋಣಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪಿ.ಹೆಚ್.ಸ್ವಾಗತ್ ಕಥ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ, ಸಂತ ಅಂಥೋಣಿ ಪ್ರೌಢಶಾಲೆಯ ವಿದ್ಯಾರ್ಥಿ ಬಿ. ಎಸ್. ಆಕರ್ಷ್ ಕುಮಿತೆಯಲ್ಲಿ ಪ್ರಥಮ, ಕಥ ದ್ವಿತೀಯ, ಪಿ.ಎಸ್.ಗೌರವ್ ಕಥ ಮತ್ತು ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ಐ.ಎಸ್.ಇಶಾನ್ ಪ್ರಥಮ, ಪಿ. ಕೆ. ಅಪ್ಪಚ್ಚು, ಎ ಎನ್.ದ್ರುವಿಕ್ ದ್ವಿತೀಯ, ಪಿ.ಎ.ಕೃದಯ್ ತೃತೀಯ, ಅರ್ವತೊಕ್ಕಲು ಸರ್ವದೈವತಾ ಶಾಲೆಯ ವಿದ್ಯಾರ್ಥಿ ಲಿರನ್ ಬೋಪಣ್ಣ ಕಥ ಮತ್ತು ಕುಮಿತೆಯಲ್ಲಿ ಪ್ರಥಮ, ಗೋಣಿಕೊಪ್ಪ ಕಾಪ್ಸ್ ಶಾಲೆಯ ಸಿ.ಬಿ. ನಿಹಾನ್ ಐಯಣ್ಣ ಕಥ ಪ್ರಥಮ, ಕುಮಿತೆಯಲ್ಲಿ ತೃತೀಯ ಸ್ಥಾನ.

ಚಿಲ್ಕುಂದ ಐಕಾನ್ ಇಂಟರ್‌ನ್ಯಾಷನಲ್ ವಿದ್ಯಾಸಂಸ್ಥೆ ವಿದ್ಯಾರ್ಥಿ ಅಕ್ಷಿತ್ ಗೌಡ ಕಥ ದ್ವಿತೀಯ, ಕುಮಿತೆಯಲ್ಲಿ ತೃತೀಯ, ಗಣೇಶ್ ಶ್ಯಾಮ್ ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪೊನ್ನAಪೇಟೆ ಕರಾಟೆ ತರಬೇತಿ ಕೇಂದ್ರದ ತರಬೇತುದಾರ ಬಿ.ಎಸ್. ಸಂತೋಷ್ ಕುಮಾರ್ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ್ದಾರೆ.