ಕರಿಕೆ, ಮೇ ೧೭: ಪಡಿನಾಲ್ಕುನಾಡು ಮೀಸಲು ಅರಣ್ಯದ ಮುರುಕು ಮೊಟ್ಟೆ ಶಾಖೆಯ ತಲಕಾವೇರಿ ತಪ್ಪಲಿನ ಮುಂದಾರೆ ಮಲೆಯ ಖಾಸಗಿ ಎನ್ಲೊ÷್ಕ್ಲಸರ್ ಮತ್ತು ಪಡಿನಾಲ್ಕುನಾಡು ಮೀಸಲು ಅರಣ್ಯಕ್ಕೆ ಹೊಂದಿಕೊAಡಿರುವ ಪ್ರದೇಶಗಳಲ್ಲಿ ಅಕ್ರಮವಾಗಿ ಮರಕಡಿತ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಕರ್ತವ್ಯ ನಿರ್ಲಕ್ಷ್ಯತೆ, ಉದಾಸೀನ, ಬೇಜವಾಬ್ದಾರಿ ತೋರಿದ ಆರೋಪದಂತೆ ೨೦೨೧ರ ನಾಗರಿಕ ಸೇವಾ ನಿಯಮಾವಳಿಗಳ ಪ್ರಕಾರ ಸಿಪಿಟಿ ೫೨ ರ ಹೆಚ್ಚುವರಿ ಗಸ್ತು ವನಪಾಲಕ

(ಮೊದಲ ಪುಟದಿಂದ) ವಸಂತಕುಮಾರ ಟಿ. ಇವರನ್ನು ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಮತ್ತೋರ್ವ ಉಪ ವಲಯ ಅರಣ್ಯ ಅಧಿಕಾರಿ ಉಲ್ಲಾಸ ಪ್ರಕಾಶ ಮಾದಾರ, ಇವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿರುತ್ತದೆ.

ಈ ಪ್ರಕರಣಕ್ಕೆ ಸಂಬAಧಿಸಿದAತೆ ಕೆಲದಿನಗಳ ಹಿಂದೆ ಕೊಡಗು ಏಕೀಕರಣ ರಂಗದ ಪದಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರಿಗೆ ಲಿಖಿತ ದೂರು ನೀಡಿ ಗಮನ ಸೆಳೆದಿದ್ದರು. ಅಲ್ಲದೆ ಅರಣ್ಯ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಿನಾಂಕ ೧೬ ರಂದು ಕರ್ತವ್ಯ ಲೋಪ ಎಸಗಿದ ಅಧಿಕಾರಿ ಗಳ ಸೂಕ್ತ ಕ್ರಮಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದರು. -ಸುಧೀರ್ ಹೊದ್ದೆಟ್ಟಿ