ಗೋಣಿಕೊಪ್ಪ ವರದಿ, ಮೇ ೧೮: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರ ಹಾಗೂ ಪುರುಷರ ಫೈನಲ್ ಪಂದ್ಯ ತಾ. ೧೯ರಂದು (ಇಂದು) ನಡೆಯಲಿದೆ.
ಮಹಿಳೆಯರ ವಿಭಾಗದಲ್ಲಿ ಮುಕ್ಕಾಟಿರ (ಹರಿಹರ-ಬೆಳ್ಳೂರು) ಮತ್ತು ಮಣವಟ್ಟೀರ ಹೋರಾಟ ನಡೆಸಲಿದ್ದು, ಪುರುಷರ ವಿಭಾಗದಲ್ಲಿ ನೆರವಂಡ, ಅಚ್ಚಪಂಡ ಸೆಣಸಲಿದೆ. ಶನಿವಾರ ನಡೆದ ಸೆಮಿಫೈನಲ್ನಲ್ಲಿ ಎರಡು ತಂಡಗಳು ಫೈನಲ್ ಪ್ರವೇಶಿಸಿದವು. ಚೆಕ್ಕೇರ ಮೂರನೇ ಸ್ಥಾನ, ಕಳಕಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆಕ್ಕೇರವನ್ನು ನೆರವಂಡ ೬ ವಿಕೆಟ್ ಗಳಿಂದ ಮಣಿಸಿ ಸಾಧನೆ ಮಾಡಿತು. ಚೆಕ್ಕೇರ ನಿಗದಿತ ೧೦ ಓವರ್ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೭೬ ರನ್ಗಳ ಗುರಿ ನೀಡಿತು. ನೆರವಂಡ ೪ ವಿಕೆಟ್ ಕಳೆದುಕೊಂಡು ೮.೫ ಓವರ್ಗಳಲ್ಲಿ ಗುರಿ ಮುಟ್ಟಿತು. ನೆರವಂಡ ಪ್ರವೀಣ್ ಪೆಮ್ಮಯ್ಯ ೪೬ ರನ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ದಂತಾಯಿತು. ವರುಣ್, ಅರುಣ್ ತಲಾ ೧೩ ರನ್ ಗಳಿಸಿದರು. ಚೆಕ್ಕೇರ ಆಕರ್ಶ್ ೪೬ ರನ್, ಕಾರ್ಯಪ್ಪ ೧೨ ರನ್ ದಾಖಲಿಸಿದರು.
(ಮೊದಲ ಪುಟದಿಂದ) ನೆರವಂಡ ವರುಣ್, ಕವನ್ ತಲಾ ೧ ವಿಕೆಟ್, ಚೆಕ್ಕೇರ ಕಾರ್ಯಪ್ಪ ೨, ಆಕರ್ಶ್, ಶಾನ್ ತಲಾ ೧ ವಿಕೆಟ್ ಕಬಳಿಸಿದರು.
ಎರಡನೇ ಸೆಮಿ ಫೈನಲ್ನಲ್ಲಿ ಅಚ್ಚಪಂಡ ತಂಡವು ಕಳಕಂಡವನ್ನು ೭ ವಿಕೆಟ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಕಳಕಂಡ ೫ ವಿಕೆಟ್ ಕಳೆದುಕೊಂಡು ೬೦ ರನ್ ದಾಖಲಿಸಿತು. ಅಚ್ಚಪಂಡ ೭. ೧ ಓವರ್ಗಳಲ್ಲಿ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಅಚ್ಚಪಂಡ ಬಿಗಿ ದಾಳಿಯಿಂದ ಕಳಕಂಡ ರನ್ಗಳಿಸಿಲು ಪರದಾಡಿತು. ನಿರೋಶ್ ೪ ವಿಕೆಟ್ ಕಿತ್ತು ಕಡಿಮೆ ಮೊತ್ತಕ್ಕೆ ಇಳಿಸಿದರು. ಮಂಜು ಮಾಚಯ್ಯ ೧ ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಕಳಕಂಡ ಭರತ್ ೨೭ ರನ್, ಬಬ್ಲಿ ೧೦ ರನ್ಗಳಿಸಿದರು. ಅಚ್ಚಪಂಡ ಪರ ಅಯ್ಯಪ್ಪ ಮತ್ತು ಮಿಥುನ್ ತಲಾ ೨೨ ರನ್,. ಕಳಕಂಡ ಭರತ್ ೩ ವಿಕೆಟ್ ಪಡೆದರು. ಚೆಕ್ಕೇರಕ್ಕೆ ಮೂರನೇ ಸ್ಥಾನ, ಕಳಕಂಡಕ್ಕೆ ನಾಲ್ಕನೇ ಸ್ಥಾನ ದೊರೆಯಿತು. ನಿಗದಿತ ೬ ಓವರ್ಗಳಿಗೆ ಚೆಕ್ಕೇರ ೫೭ ರನ್ಗಳಿಂದ ಕಳಕಂಡವನ್ನು ಮಣಿಸಿ ಸಾಧನೆ ಮಾಡಿತು. ಚೆಕ್ಕೇರ ಮೊದಲು ಬ್ಯಾಟ್ ಮಾಡಿ, ೩ ವಿಕೆಟ್ ನಷ್ಟಕ್ಕೆ ೧೧೭ ರನ್ ದಾಖಲಿಸಿತು. ಕಳಕಂಡ ೮ ವಿಕೆಟ್ ಕಳೆದುಕೊಂಡು ೬೦ ರನ್ಗಳಿಗೆ ಕುಸಿಯಿತು. ಚೆಕ್ಕೇರ ಕಾರ್ಯಪ್ಪ ೮೧ ರನ್ ಸಿಡಿಸಿದರು. ಸಾನ್ ೨೯ ರನ್, ಕಳಕಂಡ ಮಧು ೧೩, ಕಾರ್ಯಪ್ಪ ೧೨ ರನ್, ಪ್ರಸನ್ನ ೨ ವಿಕೆಟ್, ಚೆಕ್ಕೇರ ಬೋಪಣ್ಣ ೩ ವಿಕೆಟ್ ಪಡೆದರು. ಚೆಕ್ಕೇರ ಆಕರ್ಶ್, ಕಳಕಂಡ ಭರತ್ ಪಂದ್ಯ ಶ್ರೇಷ್ಠ ಗೌರವ ಪಡೆದರು.