ಮಡಿಕೇರಿ, ಮೇ ೧೭: ೨೦೧೮ರಿಂದ ಜಿಲ್ಲೆಯಲ್ಲಿ ಪ್ರತಿ ಮಳೆಗಾಲವೂ ಆತಂಕವನ್ನು ಸೃಷ್ಟಿಸುತ್ತಿದೆ. ಪ್ರಾಕೃತಿಕ ವಿಕೋಪ ಕರಿಛಾಯೆ ಕೊಡಗನ್ನು ಆಕ್ರಮಿಸಿಕೊಂಡು ಭಯ ಹೆಚ್ಚಿಸುತ್ತದೆ. ೨೦೧೮ ರಿಂದ ಸತತ ಮೂರು ವರ್ಷ ಜಿಲ್ಲೆಯನ್ನು ಕಾಡಿದ ಮಳೆಗಾಲ ಈ ಬಾರಿ ಯಾವ ರೀತಿ ಸಮಸ್ಯೆ ಹುಟ್ಟಿಸುತ್ತದೆ? ಎಂಬ ಭೀತಿಯೂ ಮೂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಮೇ ತಿಂಗಳ ಅಂತ್ಯಕ್ಕೆ ಅಗತ್ಯ ರಕ್ಷಣಾ ಪರಿಕರಗಳೊಂದಿಗೆ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ ಎನ್.ಡಿ.ಆರ್.ಎಫ್. ಒಂದು ಪಡೆ ಜಿಲ್ಲೆಗೆ ಆಗಮಿಸಲಿದ್ದು, ಈ ಸಂಬAಧ ಪತ್ರ ವ್ಯವಹಾರವನ್ನು ಜಿಲ್ಲಾಡಳಿತದಿಂದ ನಡೆದಿದೆ. ಮಳೆಗಾಲ ಮುಗಿಯುವ ತನಕ ಜಿಲ್ಲೆಯಲ್ಲಿಯೇ ಪಡೆ ನೆಲೆಯೂರಲಿದೆ. ಅನಂತರ ರಕ್ಷಣಾ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ಸೇರಿದಂತೆ ಸೂಕ್ಷö್ಮ ಪ್ರದೇಶಗಳಿಗೆ ತಂಡದ ಸದಸ್ಯರು ಭೇಟಿ ನೀಡಿ ವಾಸ್ತವ ಚಿತ್ರಣ ಅರಿಯಲಿದ್ದಾರೆ.

ಕಳೆದ ೩-೪ ವರ್ಷ ಪ್ರಾಕೃತಿಕ ವಿಕೋಪ ಘಟಿಸಿದ ಭಾಗಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ಇದರ ಭಾಗವಾಗಿ ಅಧಿಕಾರಿಗಳು ಸೂಕ್ಷö್ಮ, ಅತೀ ಸೂಕ್ಷö್ಮ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿದ್ದಾರೆ.

ಪ್ರಮುಖವಾಗಿ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಚರಂಡಿಗಳನ್ನು ಶುಚಿಗೊಳಿಸಿ ಕಸ, ಮಣ್ಣು ನಿಲ್ಲದಂತೆ ಕ್ರಮ ವಹಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜಂಗಲ್ ಕಟ್ಟಿಂಗ್ ಮಾಡಲು ಮುಂದಾಗ ಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ‘ಶಕ್ತಿ’ಗೆ ತಿಳಿಸಿದ್ದಾರೆ.

ಸೂಕ್ಷö್ಮ ಪ್ರದೇಶಗಳ ಮೇಲೆ ನಿಗಾ

ಈ ಹಿಂದೆ ೫೦ ಪ್ರವಾಹ, ೪೯ ಭೂಕುಸಿತ ಸಂಭವನೀಯ ಪ್ರದೇಶಗಳೆಂದು ಗುರುತು ಮಾಡಲಾಗಿತ್ತು. ಈ ಪ್ರದೇಶ ಗಳೊಂದಿಗೆ ಇನ್ನೂ ಕೆಲವು ಪ್ರದೇಶ ಒಳಗೊಂಡ ಸೂಕ್ಷö್ಮ, ಅತೀ ಸೂಕ್ಷö್ಮ ಪ್ರದೇಶದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.

ಮುಂಗಾರು ಇನ್ನೂ ಬಿರುಸು ಗೊಳ್ಳದ ಕಾರಣ ಅಪಾಯಕಾರಿ ಪ್ರದೇಶಗಳಲ್ಲಿ ವಾಸ ಮಾಡುವವರನ್ನು ಸ್ಥಳಾಂತರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದಲ್ಲಿ ಸ್ಥಳಾಂತರದAತಹ ಗಂಭೀರ ಭೂಕುಸಿತ ಸಂಭವನೀಯ ಪ್ರದೇಶಗಳೆಂದು ಗುರುತು ಮಾಡಲಾಗಿತ್ತು. ಈ ಪ್ರದೇಶ ಗಳೊಂದಿಗೆ ಇನ್ನೂ ಕೆಲವು ಪ್ರದೇಶ ಒಳಗೊಂಡ ಸೂಕ್ಷö್ಮ, ಅತೀ ಸೂಕ್ಷö್ಮ ಪ್ರದೇಶದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.

ಮುಂಗಾರು ಇನ್ನೂ ಬಿರುಸು ಗೊಳ್ಳದ ಕಾರಣ ಅಪಾಯಕಾರಿ ಪ್ರದೇಶಗಳಲ್ಲಿ ವಾಸ ಮಾಡುವವರನ್ನು ಸ್ಥಳಾಂತರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದಲ್ಲಿ ಸ್ಥಳಾಂತರದAತಹ ಗಂಭೀರ ಕ್ರಮಗಳಿಗೆ ಮುಂದಾಗಲಾಗುವುದು ಎಂದು ‘ಶಕ್ತಿ’ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ಭೂಕುಸಿತ ಸಂಭವಿಸಿದ್ದಲ್ಲಿ ಜೆಸಿಬಿ, ಹಿಟಾಚಿಯಂತಹ ವಾಹನಗಳು ಅವಶ್ಯಕತೆ ಇರುವ ಕಾರಣ ಪ್ರತಿ ಗ್ರಾಮಗಳಲ್ಲಿ ವಾಹನಗಳನ್ನು ಗುರುತಿಸಲು ಸೂಚಿಸಲಾಗಿದೆ. ಹೆದ್ದಾರಿ, ಗ್ರಾಮೀಣ ರಸ್ತೆ, ಸೇತುವೆಯ ಮೇಲೂ ಹೆಚ್ಚಿನ ನಿಗಾವಹಿಸಿರುವುದು ತಿಳಿದು ಬಂದಿದೆ.

-ಹೆಚ್.ಜೆ. ರಾಕೇಶ್