ಕಣಿವೆ, ಮೇ ೧೭ : ಭಾರೀ ಮಳೆಯಿಂದಾಗಿ ಚರಂಡಿಯಲ್ಲಿ ಹರಿದ ನೀರು ತಗ್ಗು ಪ್ರದೇಶದಲ್ಲಿನ ಮನೆಯೊಳಗೆ ನುಗ್ಗಿ ಹಾನಿಯಾಗಿರುವ ಘಟನೆ ತೊರೆನೂರು ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಮಳೆಯ ನೀರು ಗ್ರಾಮದ ಸರ್ಕಾರಿ ಶಾಲೆ ಹಾಗೂ ಗ್ರಾಮ ಪಂಚಾಯಿತಿ ಕಡೆಯಿಂದ ತಗ್ಗು ಪ್ರದೇಶದ ಟಿ.ಎಲ್. ಪುಟ್ಟಸ್ವಾಮಿ ಎಂಬವರ ಮನೆಯೊಳಗೆ ವ್ಯಾಪಕವಾಗಿ ನುಗ್ಗಿ ಮನೆಯೊಳಗಿನ ಪೀಠೋಪಕರಣಗಳು ಹಾನಿಯಾಗಿವೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಓ ಶ್ಯಾಂ ಹಾಗೂ ಪಂಚಾಯಿತಿ ಸದಸ್ಯ ಟಿ.ಆರ್. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ದೂರು ಹೇಳಿಕೊಂಡ ಟಿ.ಎಲ್. ಪುಟ್ಟಸ್ವಾಮಿ, ಸೂಕ್ತ ಚರಂಡಿ ಇಲ್ಲದ ಕಾರಣ ಮಳೆಯ ನೀರು ಪ್ರತೀ ಮಳೆಯ ಸಂದರ್ಭ ಮನೆಯೊಳಗೆ ನುಗ್ಗಿ ಹಿಂಸೆಯಾಗುತ್ತಿದೆ.

ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಮನೆಯೊಳಗೆ ನೀರು ಹರಿಯದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.