ಪೊನ್ನಂಪೇಟೆ, ಮೇ ೧೮: ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದ ಶ್ರೀ ಚಾಮುಂಡಿ ದೇವಿಯ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವವನ್ನು ಕಿರುಗೂರು, ಮತ್ತೂರು, ಕೋಟೂರು, ಮುಗುಟಗೇರಿ, ಬೆಸಗೂರು, ನಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ದೇವಸ್ಥಾನದ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ತುಂತುರು ಮಳೆಯ ಸಿಂಚನದ ನಡುವೆ ವಿಜೃಂಭಣೆಯಿAದ ಆಚರಿಸಲಾಯಿತು. ಅರ್ಚಕ ಜನಾರ್ಧನ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ದೇವರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಾದಿಗಳ ಸಮುಖದಲ್ಲಿ ಶ್ರೀ ಚಾಮುಂಡಿ ದೇವರು ಹೊರಬರುವುದು, ಕರಿ ಚಾಮುಂಡಿ ತೆರೆ, ವಿಷ್ಣುಮೂರ್ತಿ ದೇವರ ತೆರೆ, ಭೈರವ ತೆರೆ, ಕುಟ್ಟಿಚಾತ ತೆರೆ, ಭಗವತಿ ತೆರೆ, ನುಚ್ಚುಟ್ಟಿ ತೆರೆ ಹಾಗೂ ಹುಲಿ ಚಾಮುಂಡಿ ತೆರೆ ನಡೆಯಿತು. ಚಾಮುಂಡಿ ದೇವರಿಗೆ ಉತ್ಸವದಲ್ಲಿ ಪಾಲ್ಗೊಂಡಿದ ಭಕ್ತರು ಹರಕೆ ಕಾಣಿಕೆಗಳನ್ನು ಒಪ್ಪಿಸಿ, ದೇವರ ತೀರ್ಥ ಪ್ರಸಾದ ಸ್ವೀಕರಿಸಿದರು.