ಗೋಣಿಕೊಪ್ಪ ವರದಿ, ಮೇ ೧೭: ಮಾಯಮುಡಿ ಗ್ರಾಮದ ಬೋಡ್‌ನಮ್ಮೆ ಗುರುವಾರ ವಿವಿಧ ಆಚರಣೆ ಮೂಲಕ ಸಂಪನ್ನಗೊAಡಿತು. ಗುರುವಾರ ಕುದುರೆ ಹೊತ್ತು, ಮಾನಿಲ್ ಅಯ್ಯಪ್ಪ ದೈವನೆಲೆಯಲ್ಲಿ ಕುದುರೆ ಆಚರಣೆಯೊಂದಿಗೆ ತೆರೆ ಎಳೆಯಲಾಯಿತು. ಶುಕ್ರವಾರ ಮಾರಿಗುಡಿಯಲ್ಲಿ ಭಂಡಾರ ಕೆಟ್ಟುವೋ ಶಾಸ್ತç ಆಚರಿಸಲಾಯಿತು.

ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರ ಕಾಡಿನಲ್ಲಿರುವ ಮಾನಿಲ್ ದೈವನೆಲೆಯಲ್ಲಿ ನಾಪರೆ ತಾತುವೊ ಆಚರಣೆಯೊಂದಿಗೆ ಶನಿವಾರ ಹಬ್ಬಕ್ಕೆ ಚಾಲನೆ ದೊರೆಯಿತು. ಮೂರು ದಿನ ಅಂಬಲದಲ್ಲಿ ದೇವರ ಡೋಳು ಬಡಿದು ಪ್ರಾರ್ಥಿಸಲಾಯಿತು. ಬುಧವಾರ ಮಧ್ಯಾಹ್ನ ಭಂಡಾರ ಹೊತ್ತು ಮಾನಿಲ್ ಅಯ್ಯಪ್ಪ ದೈವನೆಲೆಯಲ್ಲಿ ಪೂಜೆ ಸಲ್ಲಿಸಲಾಯಿತು. ಭಕ್ತರು ಪಟ್ಟಣಿ ಆಚರಣೆ ನಡೆಸಿದರು. ರಾತ್ರಿ ಮನೆ ಮನೆಗೆ ತೆರಳಿ ಕಳಿ ಆಡುವೊ ಆಚರಣೆ ಮಾಡಲಾಯಿತು. ಚೂಳೆ ಕಳಿ, ವಡ್ಡಕಳಿ, ಜೋಗಿ ಪಾಟ್, ಜೋಗಿ ಆಟ್‌ನಲ್ಲಿ ಗ್ರಾಮಸ್ಥರು ಪಾಲ್ಗೊಂಡರು. ಭದ್ರಕಾಳಿ ದೇವಿ ಹಾಗೂ ಸಣ್ಣುವಂಡ ಕುಟುಂಬದ ಗುರು ಕಾರೋಣ ದರ್ಶನ ನೀಡಿತು.