ಗೋಣಿಕೊಪ್ಪ ವರದಿ, ಮೇ ೧೭: ಬಸವೇಶ್ವರ ಯುತ್ ಕ್ಲಬ್ ವತಿಯಿಂದ ಕಾಕೂರು ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕಾಕೂರು ಕ್ರಿಕೆಟ್ ಪ್ರೀಮಿಯರ್ ಲೀಗ್ ಕಪ್ ಅನ್ನು ಗೋಣಿಕೊಪ್ಪ ರಾಯಲ್ ಕ್ರಿಕೆಟರ್ಸ್ ಗೆದ್ದು ಕೊಂಡಿದೆ. ಡಿ. ಕೋಚ್ ತಂಡ ರನ್ನರ್ ಅಪ್ ಸ್ಥಾನ ಅಲಂಕರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಡಿ ಕೋಚ್ ೨ ವಿಕೆಟ್ ನಷ್ಟಕ್ಕೆ ೧೧ ರನ್ ಗುರಿ ನೀಡಿತು. ರಾಯಲ್ ಕ್ರಿಕೆಟರ್ಸ್ ಗುರಿ ಬೆನ್ನಟ್ಟಿ ಚಾಂಪಿಯನ್ ಸ್ಥಾನ ಅಲಂಕರಿಸಿತು. ಆರ್‌ವಿಎಂ ತಂಡಕ್ಕೆ ಮೂರನೇ ಸ್ಥಾನ, ಕಾವೇರಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.

೫ ದಿನಗಳ ಟೂರ್ನಿಯಲ್ಲಿ ೨೦ ತಂಡಗಳು ಟೂರ್ನಿಯಲ್ಲಿ ಸೆಣೆಸಾಟ ನಡೆಸಿದವು. ಭಗವತಿ ತಂಡ ಉತ್ತಮ ತಂಡ ಪ್ರಶಸ್ತಿ ಪಡೆದುಕೊಂಡಿತು. ಆಶಿಕ್ ಬೆಸ್ಟ್ ಬ್ಯಾಟ್ಸ್ಮ್ಯಾನ್, ಕೊಡವ ಟ್ರೆöÊಬ್ ತಂಡದ ಬೋಪಣ್ಣ ಬೆಸ್ಟ್ ಕೀಪರ್, ವಿನೀಶ್ ಬೆಸ್ಟ್ ಬೌಲರ್, ನೀತು ಆಳ್ವ ಸರಣಿ ಶ್ರೇಷ್ಠ, ಶಶಾಂಕ್ ಭವಿಷ್ಯದ ಅಟಗಾರ, ನೀತು ಆಳ್ವ ಅಂತಿಮ ಪಂದ್ಯದ ಶ್ರೇಷ್ಠ ಪ್ರಶಸ್ತಿ, ಆರ್.ಎ. ಸೊಹೈಲ್ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದುಕೊಂಡರು.