ಮಡಿಕೇರಿ, ಮೇ ೧೮: ಖಾತೆ ವರ್ಗಾವಣೆಗೆ ಲಂಚದ ಬೇಡಿಕೆ ಒಡ್ಡಿದ್ದ ಆರೋಪ ಹೊತ್ತಿರುವ ಮಡಿಕೇರಿ ಉಪ ನೋಂದಾಣಿ ಕಚೇರಿಯ ಉಪನೋಂದ ಣಾಧಿಕಾರಿ ಸೌಮ್ಯಲತಾ ಅವರನ್ನು ಅಮಾನತ್ತುಗೊಳಿಸಿ ಶಿಸ್ತು ಪ್ರಾಧಿಕಾರ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾಗಿರುವ ಡಾ.ಬಿ.ಆರ್. ಮಮತಾ ಆದೇಶಿಸಿದ್ದಾರೆ. ಮಾರ್ಚ್ ೨೦ ರಂದು ಲಂಚಕ್ಕೆ ಬೇಡಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಲೋಕಾಯುಕ್ತ ಅಧಿಕಾರಿಗಳು ಮಡಿಕೇರಿಯ ಕಚೇರಿಗೆ ದಾಳಿ ನಡೆಸಿದ್ದರು.
ಘಟನೆ ಹಿನ್ನೆಲೆ
ದೂರುದಾರ ಕೋರಂಗಾಲ ಗ್ರಾಮದ ಎನ್.ಎಸ್. ಕುಮಾರ್ ಅವರ ತಂದೆ ದಿ. ಸುಬ್ಬಯ್ಯ ಅವರ ಹೆಸರಿನಲ್ಲಿರುವ ೩.೮೦ ಎಕರೆ ಕಾಫಿ ತೋಟ ಹಾಗೂ ಖರೀದಿ ಮಾಡಿದ ೧.೮೦ ಎಕರೆ ಗದ್ದೆ ಇತ್ತು. ಪೌತಿ ಖಾತೆಯೂ ಆಗಿತ್ತು. ಕುಮಾರ್ ಅವರ ಸಹೋದರಿಯರು ಆಸ್ತಿಯನ್ನು ಕುಮಾರ್ ಅವರಿಗೆ ವರ್ಗಾವಣೆ ಮಾಡಲು ಇಚ್ಛಿಸಿದ್ದ ಕಾರಣ ಖಾತೆ ವರ್ಗಾವಣೆಗೆ ಹಕ್ಕು ಖುಲಾಸೆ ಪತ್ರದ ಅಗತ್ಯತೆ ಇದ್ದ ಹಿನ್ನೆಲೆ ಅಧಿಕಾರಿ ಸೌಮ್ಯಲತಾ ಅವರನ್ನು ಮಡಿಕೇರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭೇಟಿಯಾದ ಸಂದರ್ಭ ಸಹೋದರಿಯ ಪೈಕಿ ಒಬ್ಬರು ವಿಶೇಷಚೇತನರಾಗಿರುವ ಕಾರಣ ಮುಂದಿಟ್ಟು ವೈದ್ಯರ ದೃಢೀಕರಣ ನೀಡುವಂತೆ ಸೂಚಿಸಿದ್ದಾರೆ.
ನಂತರ ದೃಢೀಕರಣವನ್ನು ನೀಡಿದರೂ ಪ್ರಮಾಣ ಪತ್ರ ಸರಿಯಿಲ್ಲ ಎಂಬ ಸಬೂಬು ಹೇಳಿ ಸಹೋದರಿಯರ ಹೆಸರಿಗೆ ಪ್ರಸಂಟೇಷನ್ ಜಿಪಿಎ ಮಾಡಿಸಿ ಕೊಡುವುದಾಗಿ ಸಲಹೆ ನೀಡಿ ರೂ. ೫೦ ಸಾವಿರ ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಸ್ವಲ್ಪ ಕಡಿಮೆ ಮಾಡಿಕೊಳ್ಳುವಂತೆ ಕೋರಿದಾಗ ‘ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಷ್ಟವಿದ್ದರೆ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಇಷ್ಟ’ ಎಂದು ಸೌಮ್ಯಲತಾ ಹೇಳಿದ್ದರು.
ವಕೀಲರೊಂದಿಗೆ ಚರ್ಚಿಸಿದ ಕುಮಾರ್ ಪ್ರಸಂಟೇಷನ್ ಜಿಪಿಎ ಪತ್ರ ಮಾಡಿಸಲು ಸರಕಾರಿ ಶುಲ್ಕ ಪಾವತಿಸಿ ಸಬ್‌ರಿಜಿಸ್ಟಾçರ್ ಚೇಂಬರ್‌ಗೆ ತೆರಳಿ ಭೇಟಿ ಮಾಡಿದ್ದು, ಈ ವೇಳೆ ಹರಿದತ್ ಅವರೊಂದಿಗೆ ಮಾತನಾಡುವಂತೆ ಕಣ್‌ಸನ್ನೆ ಮೂಲಕ ತಿಳಿಸಿದ್ದಾರೆ. ನಂತರ ರೂ. ೫೦ ಸಾವಿರ ನೀಡುವಂತೆ ಮೊಬೈಲ್ ಮೂಲಕ ಕೇಳಿದ್ದಾನೆ. ಇದನ್ನು ರೆಕಾರ್ಡ್ ಮಾಡಿಕೊಂಡು ಇಬ್ಬರ ವಿರುದ್ಧ ಕುಮಾರ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ನಂತರ ದೂರುದಾರರು ಬ್ರೋಕರ್ ಹರಿದತ್ ಹೇಳಿದಂತೆ ಮಹಿಳೆಯೊಬ್ಬರಿಗೆ ಹಣ ನೀಡುವಾಗ ದಾಳಿ ನಡೆಸಿ ಹರಿದತ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಸೌಮ್ಯಲತಾ ಮಡಿಕೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಸಾಕ್ಷö್ಯನಾಶ, ತನಿಖೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುವುದರಿಂದ ಅಮಾನತ್ತು ಮಾಡಲಾಗಿದೆ ಎಂದು ಆದೇಶದಲ್ಲಿ ಡಾ. ಮಮತ ತಿಳಿಸಿದ್ದು, ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಿದ್ದಾರೆ.