ಕುಶಾಲನಗರ, ಮೇ ೧೭: ಕಳೆದ ಕೆಲವು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.

ಜಲಾಶಯಕ್ಕೆ ೨೦೩ ಕ್ಯೂಸೆಕ್ಸ್ ಪ್ರಮಾಣದ ಒಳಹರಿವು ಬರುತ್ತಿದೆ. ನದಿಗೆ ೨೦೦ ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಹರಿಸಲಾಗಿದೆ. ಪ್ರಸಕ್ತ ಜಲಾಶಯದಲ್ಲಿ ೨೮೨೨.೯ ಅಡಿಗಳಷ್ಟು ಮತ್ತು ೨.೯೩ ಟಿಎಂಸಿ ನೀರಿನ ಸಂಗ್ರಹ ಇದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ ೮.೫ ಟಿಎಂಸಿ ಅಡಿಗಳು.

ಕಳೆದ ಸಾಲಿನಲ್ಲಿ ಜಲಾಶಯಕ್ಕೆ ಒಟ್ಟು ೨೮.೪೬ ಟಿಎಂಸಿ ನೀರು ಹರಿದು ಬಂದಿದ್ದು ನದಿಗೆ ೧೯.೯ ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.