ಗೋಣಿಕೊಪ್ಪ ವರದಿ, ಮೇ ೧೯: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆದ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ ನೆರವಂಡ, ಮಹಿಳೆಯರ ವಿಭಾಗದಲ್ಲಿ ಮಣವಟ್ಟೀರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಅಚ್ಚಪಂಡ ಪುರುಷರ ವಿಭಾಗದಲ್ಲಿ ಹಾಗೂ ಮುಕ್ಕಾಟೀರ (ಹರಿಹರ-ಬೆಳ್ಳೂರು) ತಂಡ ಮಹಿಳೆಯರ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಅಲಂಕರಿಸಿತು.
ಪುರುಷರಲ್ಲಿ ಚೆಕ್ಕೇರಕ್ಕೆ ಮೂರನೇ ಸ್ಥಾನ, ಕಳಕಂಡಕ್ಕೆ ನಾಲ್ಕನೇ ಸ್ಥಾನ, ಮಹಿಳೆಯರಲ್ಲಿ ಕೆದಮುಳ್ಳೂರು ಮಾಳೇಟಿರ ತಂಡಕ್ಕೆ ಮೂರನೇ ಸ್ಥಾನ, ಆತಿಥೇಯ ಅರಮಣಮಾಡ ತಂಡಕ್ಕೆ ನಾಲ್ಕನೇ ಸ್ಥಾನ ದೊರಕಿದೆ. ಭಾನುವಾರ ಫೈನಲ್ ಪಂದ್ಯಗಳು ನಡೆದವು.
ಪುರುಷರ ನೆರವಂಡ ತಂಡವು ಅಚ್ಚಪಂಡ ತಂಡವನ್ನು ೯ ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಅಚ್ಚಪಂಡ ನಿಗದಿತ ೬ ಓವರ್ಗಳಿಗೆ ೭ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿತು. ನೆರವಂಡ ೩.೪ ಓವರ್ಗಳಲ್ಲಿ ಕೇವಲ ೧ ವಿಕೆಟ್ ಕಳೆದುಕೊಂಡು ಗೆದ್ದುಕೊಂಡಿತು. ನೆರವಂಡ ಪ್ರಶಾಂತ್ ೨೨ ರನ್, ಪ್ರವೀಣ್ ಪೆಮ್ಮಯ್ಯ ೧೨, ವರುಣ್ ೪ ರನ್ ಗಳಿಸಿದರು. ಬೋಪಣ್ಣ ೧೦ ರನ್, ಮಂಜು ಮಾಚಯ್ಯ ೧೦ ರನ್ ಗಳಿಸಿದರು. ನೆರವಂಡ ಪ್ರಶಾಂತ್ ೩ ವಿಕೆಟ್ ಕಿತ್ತು ಸಣ್ಣ ಮೊತ್ತದ ಗುರಿಗೆ ಕಟ್ಟಿ ಹಾಕಿದರು. ವರುಣ್ ೨ ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಅಚ್ಚಪಂಡ ಮಿಥುನ್ ೧ ವಿಕೆಟ್ ಪಡೆದರು.
ಮಹಿಳೆಯರ ಫೈನಲ್ನಲ್ಲಿ ಮಣವಟ್ಟೀರ ತಂಡವು ಮುಕ್ಕಾಟೀರ (ಹರಿಹರ-ಬೆಳ್ಳೂರು) ತಂಡವನ್ನು ೨೫ ರನ್ಗಳಿಂದ ಸೋಲಿಸಿತು. ಮಣವಟ್ಟೀರ ನಿಗದಿತ ೬ ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೬೦ ರನ್ ಪೇರಿಸಿತು. ಮುಕ್ಕಾಟೀರ ೩ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಸೋಲಿಗೆ ಶರಣಾಯಿತು. ಮಣವಟ್ಟೀರ ಸಂಗೀತಾ ೩೦ ರನ್, ಅರ್ಪಿತಾ ೨೦ ರನ್ ಸಿಡಿಸಿದರು. ಮಣವಟ್ಟೀರ ಬೌಲಿಂಗ್ನಲ್ಲಿ ಮುಕ್ಕಾಟೀರವನ್ನು ಕಟ್ಟಿ ಹಾಕಿತು. ಭಾರತಿ ಶುಭ ೧೧ ರನ್, ಮಿಂತು ಸಂದೀಪ್ ೫ ರನ್, ತೀಶ್ಮ ೬ ರನ್ ಗಳಿಸಿದರು. ಮಣವಟ್ಟೀರ ಶೃತಿ ೨ ವಿಕೆಟ್ ಪಡೆದರು.
ವಿಶೇಷ : ನೆರವಂಡ ಪ್ರಶಾಂತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಪುರುಷರಲ್ಲಿ ಕೊಟ್ಟ್ಕತ್ತೀರ ಲೋಕೇಶ್ ತಿಮ್ಮಯ್ಯ ಭವಿಷ್ಯದ ಆಟಗಾರ, ಜಮ್ಮಡ ತಶಿನ್ ತಮ್ಮಯ್ಯ ಉತ್ತಮ ಕ್ಷೇತ್ರ ರಕ್ಷಕ, ಅಚ್ಚಪಂಡ ನಿರೋಶ್ ಉತ್ತಮ ಬೌಲರ್, ಅಚ್ಚಪಂಡ ಮಿಥುನ್ ಬೆಸ್ಟ್ ಬ್ಯಾಟರ್, ಚೆಕ್ಕೇರ ಆಕರ್ಶ್ ಬೆಸ್ಟ್ ಆಲ್ರೌಂಡರ್, ಕುಂಜಿಲಗೇರಿ ಮುಕ್ಕಾಟೀರ ತಂಡ ಶಿಸ್ತಿನ ತಂಡ ಪ್ರಶಸ್ತಿ ಪಡೆದುಕೊಂಡಿತು. ಮಹಿಳೆಯರಲ್ಲಿ ಮಣವಟ್ಟೀರ ಸಂಗೀತಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಓಡಿಯಂಡ ರೋಹಿಣಿ ಭವಿಷ್ಯದ ಅಟಗಾರ್ತಿ, ಅರಮಣಮಾಡ ಟೀನಾ ಬೆಸ್ಟ್ ಆಲ್ರೌಂಡರ್, ಅಜ್ಜಿಕುಟ್ಟೀರ ಉತ್ತಮ ತಂಡ, ಮುಕ್ಕಾಟೀರ ಅಂಜನ ಬೆಸ್ಟ್ ಬ್ಯಾಟರ್, ಮಣವಟ್ಟೀರ ಶೃತಿ ಬೆಸ್ಟ್ ಬೌಲರ್, ಮಾಳೇಟೀರ ಪಲ್ಲವಿ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಸ್ವೀಕರಿಸಿದರು.
ನೆರವಂಡ ಪ್ರಶಾಂತ್, ಅಚ್ಚಪಂಡ ಬೋಪಣ್ಣ, ಮಣವಟ್ಟೀರ ಸಂಗೀತಾ, ಮುಕ್ಕಾಟೀರ ಭಾರತಿ ಶುಭ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಪುರುಷರ ಕ್ರಿಕೆಟ್ ವಿಜೇತರಿಗೆ ೨.೫ ಲಕ್ಷ ರೂ. ನಗದು ಬಹುಮಾನ ನೀಡಲಾಯಿತು. ಪ್ರಥಮ ತಂಡಕ್ಕೆ ೧ ಲಕ್ಷ, ದ್ವಿತೀಯ ತಂಡಕ್ಕೆ ೭೫ ಸಾವಿರ, ೩ ನೇ ಸ್ಥಾನಕ್ಕೆ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ೫೦ ಸಾವಿರ, ೪ ನೇ ಸ್ಥಾನಕ್ಕೆ ೨೫ ಸಾವಿರ ನಗದು ನೀಡಲಾಯಿತು. ಉತ್ತಮ ಬ್ಯಾಟಿಂಗ್, ಬೌಲರ್, ಕೀಪರ್, ಅಲ್ರೌಂಡರ್, ಅಪ್ ಕಮಿಂಗ್ ಆಟಗಾರ ಪ್ರಶಸ್ತಿಯೊಂದಿಗೆ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ೨.೫ ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಪ್ರಶಸ್ತಿಯಾಗಿ ನೀಡÀಲಾಯಿತು. ವಿಜೇತ ತಂಡದ ಆಟಗಾರರಿಗೆ ೮೨ ಸಾವಿರ ಮೌಲ್ಯದ ಬೆಳ್ಳಿಯ ಕೊಕ್ಕೆತಾತಿ, ದ್ವಿತೀಯ ತಂಡಕ್ಕೆ ೪೮ ಸಾವಿರ ಮೌಲ್ಯದ ಕೊಕ್ಕೆತಾತಿ, ೩ ನೇ ತಂಡಕ್ಕೆ ಪೀಚೆಕತ್ತಿಯ ಬ್ರೋಷ್, ೪ ನೇ ತಂಡಕ್ಕೆ ಪೀಚೆಕತ್ತಿ ಬ್ರೋಷ್ ನೀಡಲಾಯಿತು.
ಮಳೆಯಲ್ಲಿ ಮುಳುಗಿದ ಮೈದಾನ : ಮಹಿಳೆಯರ ಫೈನಲ್ ಸಂದರ್ಭ ಧಾರಾಕಾರ ಮಳೆ ಬಂತು. ತಾಂತ್ರಿಕ ಸಮಿತಿ ಮಳೆ ನಿಂತ ಮೇಲೆ ಪಂದ್ಯ ನಡೆಸಲು ಹರಸಾಹಸಪಟ್ಟಿತು. ನಿರಂತರ ೨ ಗಂಟೆಗಳ ಕಾರ್ಯದಿಂದ ಮೈದಾನವನ್ನು ಪಂದ್ಯ ನಡೆಸಲು ಸಜ್ಜುಗೊಳಿಸಲಾಯಿತು. ಪಿಚ್ ಭಾಗದಲ್ಲಿ ತೇವಾಂಶ ಹೀರಿಕೊಳ್ಳಲು ಪೆಟ್ರೋಲ್ ಬಳಸಿ ಪಿಚ್ ಮೇಲೆ ಬೆಂಕಿ ಕಾಯಿಸಿ ಒಣಗಿಸಲಾಯಿತು.
ಚೆಕ್ಕೇರ ಆತಿಥ್ಯ : ಮುಂದಿನ ವರ್ಷ (೨೩ ನೇ ವರ್ಷದ) ಚೆಕ್ಕೇರ ಒಕ್ಕ ಕೊಡವ ಕೌಟುಂಬಿಕ ಕ್ರಿಕೆಟ್ ಆತಿಥ್ಯ ವಹಿಸಲಿದ್ದು, ಸಮಾರೋಪದಲ್ಲಿ ಧ್ವಜ ಸ್ವೀಕರಿಸಿತು. ಈ ಸಂದರ್ಭ ಚೆಕ್ಕೇರ ಕುಟುಂಬದ ಅಧ್ಯಕ್ಷ ಕಾಶಿ ಕಾಳಯ್ಯ, ಹಿರಿಯರಾದ ವಾಸು ಕುಟ್ಟಪ್ಪ, ಸೂರಿ ಅಯ್ಯಪ್ಪ, ಬಿಪಿನ್ ಸೇರಿದಂತೆ ಕುಟುಂಬಸ್ಥರು ಇದ್ದರು.
ಕೊಡವ ಕೌಟುಂಬಿಕ ಕ್ರಿಕೆಟ್ನಲ್ಲಿ ಲೆದರ್ ಬಾಲ್ ಕ್ರಿಕೆಟ್ ಹೆಚ್ಚು ಸಹಕಾರಿ ಎಂದು ರಿಪಬ್ಲಿಕ್ ಟಿವಿ ನೆಟವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಅಭಿಪ್ರಾಯಪಟ್ಟರು. ಈಗಾಗಲೇ ಕೊಡವ ಜನಾಂಗದ ಸಾಕಷ್ಟು ಟೂರ್ನಿ ಲೆದರ್ಬಾಲ್ನಲ್ಲಿ ನಡೆಸಲಾಗಿದೆ. ಭವಿಷ್ಯದ ದೃಷ್ಟಿಯಿಂದ ಲೆದರ್ ಬಾಲ್ ಉತ್ತಮ ಎಂದು ಅಂತಿಮ ಪಂದ್ಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಕ್ರಿಕೆಟ್ ನಮ್ಮೆಯು ಅಚ್ಚುಕಟ್ಟಾಗಿ ನಡೆದಿದ್ದು, ಕ್ರಿಕೆಟ್ ಕ್ರೀಡೆಯ ಮೇಲೆ ಅಭಿಮಾನ ಹೆಚ್ಚಾಗಿ ಜಿಲ್ಲೆಯಿಂದ ಒಂದು ತಂಡ ಭಾರತ ದೇಶವನ್ನು ಪ್ರತಿನಿಧಿಸುವಂತಾಗಲಿ ಎಂದು ಹಾರೈಸಿದರು. ಒಲಿಂಪಿಯನ್ ಅಶ್ವಿನಿ ನಾಚಪ್ಪ ಮಾತನಾಡಿ, ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರಿಗೂ ಅವಕಾಶ ನೀಡಿರುವುದು ವಿಶೇಷವಾಗಿದೆ. ಇದರಿಂದ ಮಹಿಳಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಎಂದರು.