ಮಾನ್ಯರೆ, ೧೮೪೦ ರಲ್ಲಿ ಹಾಕಿಯನ್ನು ಇಂಗ್ಲೆAಡಿನಲ್ಲಿ ಪಯೋನಿಯರ್ ಕ್ಲಬ್ ಪ್ರಾರಂಭ ಮಾಡಿತು. ಅಂದರೆ ಇಂದಿಗೆ ೧೮೪ ವರ್ಷಗಳ ಹಿಂದಿನ ಕಥೆ ಇದು. ಬ್ರಿಟಿಷರು ಭಾರತಕ್ಕೆ ಬರುವಾಗ ಹಾಕಿ ಆಟವನ್ನು ಜೊತೆಯಲ್ಲಿ ಕರೆತಂದರು.

ಕನ್ಸಾಲಿಡೇಟೆಡ್ ಕಾಫಿಯ ಮುಖ್ಯಸ್ಥ ಐವರಿ ಬುಲ್ ಬಹಳಷ್ಟು ಒಳ್ಳೆಯ ಹಾಕಿ ಆಟಗಾರ. ಪಾಲಿಬೆಟ್ಟದಲ್ಲಿ ಸಿ.ಸಿ. ಮಾಚಯ್ಯ ಪಂದ್ಯಾವಳಿಯನ್ನು ನಡೆಸಿದರು. ಹಾಕಿಗೆ ಬಹಳಷ್ಟು ಪ್ರೋತ್ಸಾಹ ನೀಡಿದ ವ್ಯಕ್ತಿ.

ಕೊಡಗಿನಲ್ಲಿ ಹಿಂದಿನ ಕಾಲದಲ್ಲಿ ನಮ್ಮ ಅಜ್ಜ-ಅಜ್ಜಿಯಂದಿರಿಗೆ ೧೦ ರಿಂದ ೧೨ ಮಕ್ಕಳು. ಮನೆಯಲ್ಲಿ ಗಲಾಟೆ ತಡೆಯಲಾರದೆ ಇಬ್ಬರು ಮಕ್ಕಳನ್ನು ಗದ್ದೆ ಕೆಲಸಕ್ಕೆ, ಇಬ್ಬರನ್ನು ಸೈನ್ಯಕ್ಕೆ ಹಾಗೂ ಇನ್ನೂ ಕೆಲವರನ್ನು ಆಡಲು ಕಳಿಸುತ್ತಿದ್ದರು. ಇದರಿಂದ ಹಾಕಿಯೂ ಕೊಡಗಿನಲ್ಲಿ ಬಹಳಷ್ಟು ಬೆಳೆಯಿತು.

ಹಾಕಿ ಸ್ಟಿಕ್: ಅಂದಿನ ಕಾಲದಲ್ಲಿ ಹಾಕಿ ಸ್ಟಿಕ್ ಸಿಗುತ್ತಿರಲಿಲ್ಲ. ಕಡಂಗದಲ್ಲಿ ಬ್ರೂನೆ ಮರದ ಬೇರುಗಳು ಹಾಕಿ ಸ್ಟಿಕ್‌ಅನ್ನು ಹೊಲುತ್ತಿದ್ದವು. ಈಗಲೂ ಇಂತಹ ಮರಗಳು ಇವೆ. ಮಕ್ಕಳು ಇದನ್ನು ಕಡಿದು, ಮರದ ಚೆಂಡಿನಲ್ಲಿ ಹಾಕಿ ಆಡುತ್ತಿದ್ದರು.

ಬಹಳಷ್ಟು ಅಂದಿನ ಯುವಕರು ಬರಿಗಾಲಿನಲ್ಲಿ ಬ್ರೂನೆ ಮರದ ಸ್ಟಿಕ್‌ನಲ್ಲಿ ೬ ತಿಂಗಳ ಕಾಲ ಪ್ರತಿನಿತ್ಯ ಹಾಕಿ ಆಡುತ್ತಿದ್ದರು. ಬಹಳಷ್ಟು ಪುರಾತನ ಪಂದ್ಯಾವಳಿಗಳು ನಡೆದು ಬಂದವು. ಒಳ್ಳೆಯ ಆಟಗಾರರು ಇದರಿಂದ ಹೊರಬಂದರು. ಪೊನ್ನಂಪೇಟೆಯಲ್ಲಿ ಚೆಪ್ಪುಡಿರ ಕಪ್ ೨ನೇ ಪಂದ್ಯಾವಳಿಯಾಗಿ ಹೊರಹೊಮ್ಮಿತು. ಆಗಲೂ ಕೂಡ ಪುಚ್ಚಿಮಾಡ ಹಾಗೂ ಕೋಳೇರ ಕುಟುಂಬಗಳು ಪಂದ್ಯಾಟ ಆಯೋಜಿಸುತ್ತಾ ಬಂದರು.

ಅAದಿನ ಕಾಲದಲ್ಲಿ ಆರ್ಥಿಕ ಸ್ಥಿತಿ ಬಹಳ ಕಠಿಣವಾಗಿದ್ದ ಕಾರಣ ಮೈಸೂರು, ಬೆಂಗಳೂರಿಗೆ ಹಾಕಿ ಆಡಲು ತೆರಳಲಾಗುತ್ತಿರಲಿಲ್ಲ. ಸೈನ್ಯಕ್ಕೆ ಸೇರುವುದೊಂದೇ ಮಾರ್ಗವಾಗಿತ್ತು.

ಕೌಟುಂಬಿಕ ಹಾಕಿ ಹಬ್ಬ: ಪಾಂಡAಡ ಕುಟ್ಟಪ್ಪ ಹಾಗೂ ಕಾಶಿ ಅವರು ಇದನ್ನೆಲ್ಲಾ ಅರಿತು. ೬೦ ಕುಟುಂಬಗಳನ್ನು ಒಳಗೊಂಡ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದರು. ಅಲ್ಲಿಂದ ಬಹಳಷ್ಟು ಜನ ಹಾಕಿಗೆ ಶ್ರಮಿಸಿ, ಒಂದೊAದು ಕುಟುಂಬವೂ ತಮ್ಮ ಶಕ್ತಿಗೆ ಮೀರಿ ಪಂದ್ಯಾವಳಿಯನ್ನು ಆಯೋಜಿತ್ತಲೇ ಬಂದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್: ೨೦೦೧ರಲ್ಲಿ ನೆಲ್ಲಮಕ್ಕಡ, ತದನಂತರ ಕುಪ್ಪಂಡ ಹಾಗೂ ಶಾಂತೆಯAಡ ಕುಟುಂಬಗಳು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದವು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್: ೨೦೨೪ರ ಕುಂಡ್ಯೋಳAಡ ಕುಟುಂಬವು ನಡೆಸಿದ ಹಾಕಿ ಹಬ್ಬವು ಗಿನ್ನಿಸ್ ದಾಖಲೆಯತ್ತ ಮುನ್ನುಗ್ಗಿತು. ಇದು ಕೊಡಗಿನ ಜನತೆಗೆ ಬಹಳ ಸಂತಸದ ಸುದ್ದಿ. ಇದಕ್ಕೆ ಶುಭಾಶಯಗಳು ಹರಿದು ಬಂದವು. ವಿಶ್ವದ ಹಾಕಿ ಭೂಪಟದಲ್ಲಿ ಕೊಡಗನ್ನು ಗುರುತಿಸುವಂತಾಯಿತು.

ಹಾಕಿಯ ಬೆಳವಣಿಗೆಗೆ ಏನು ಮಾಡಬೇಕು ?: ಇತ್ತೀಚಿನ ದಿನಗಳಲ್ಲಿ ಭಾರತ ತಂಡಕ್ಕೆ ಕೊಡಗಿನ ಆಟಗಾರರು ಇಲ್ಲವೆಂಬ ಕೂಗು ಕೇಳಿ ಬರುತ್ತಿದೆ. ಆದುದರಿಂದ ಕೌಟುಂಬಿಕ ಹಾಕಿ ಮುಗಿದ ನಂತರ, ಮೇ ತಿಂಗಳಿನಲ್ಲಿ ಹಾಕಿಯ ಶಿಬಿರವನ್ನು ಆಯೋಜಿಸಲೇಬೇಕು.

ಕೌಟುಂಬಿಕ ಪಂದ್ಯಾವಳಿ ಮುಗಿದ ಮರುದಿನವೇ ಅದೇ ಮೈದಾನದಲ್ಲಿ ಶಿಬಿರವನ್ನು ಅಂರ‍್ರಾಷ್ಟಿçÃಯ ಆಟಗಾರರನ್ನು ಬಳಸಿಕೊಂಡು ಆಯೋಜಿಸಬೇಕು. ಏಕೆಂದರೆ ಆಟಗಾರರಲ್ಲಿ ಹಾಕಿಯ ಜ್ವರ ಇನ್ನೂ ಬಿಟ್ಟಿರುವುದಿಲ್ಲ. ಒಳ್ಳೆಯ ಅಂತರಾಷ್ಟ್ರೀಯ ತರಬೇತಿದಾರರನ್ನು ಕರೆಸಿ ಮೈದಾನದಲ್ಲಿ ತರಬೇತಿ ನೀಡಬೇಕು. ಪಂದ್ಯಾವಳಿಯ ನಂತರ ೩ ಮೈದಾನವು ಸಿದ್ಧವಿರುತ್ತದೆ. ಶಿಬಿರ ನಡೆಸುವುದು ಬಹಳಷ್ಟು ಸುಲಭ.

ಡಿ.ವೈ.ಇ.ಎಸ್. ಹಾಗೂ ಸಾಯಿ ಆಟಗಾರರಿಗೆ ತರಬೇತಿ ಸಿಗುತ್ತದೆ. ಆದರೆ ಗ್ರಾಮೀಣ ಮಟ್ಟ ಹಾಗೂ ಸರಕಾರಿ ಶಾಲೆಯಲ್ಲಿ ಓದಿದ ಆಟಗಾರರಿಗೆ ಯಾರು ತರಬೇತಿ ಕೊಡುತ್ತಾರೆ. ಈ ವರ್ಷವಂತೂ ಅಂತಹ ಪ್ರತಿಭಾವಂತ ಆಟಗಾರರು ನೋಡಲು ಸಿಕ್ಕರು. ಆದರೆ ಇವರಿಗೆ ತರಬೇತಿ ಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ದಯವಿಟ್ಟು ಈ ಚಿಂತನೆಯನ್ನು ಸಂಘ-ಸAಸ್ಥೆಗಳು ಹಾಗೂ ಕೊಡಗಿನ ಮಹಾಜನತೆ ಮಾಡಬೇಕು. ಇದಕ್ಕೆ ಬಹಳಷ್ಟು ಹಣ ಖರ್ಚಾಗುವುದಿಲ್ಲ. ಇಂತಹ ತರಬೇತಿ ಶಿಬಿರಗಳನ್ನು ಆಯೋಜಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಕೊಡಗಿನ ಆಟಗಾರರು, ಭಾರತ ತಂಡದಲ್ಲಿ ಆಡುವುದು ಖಂಡಿತ. ಇಲ್ಲದಲ್ಲಿ ಪಂದ್ಯಾಟಗಳು ಮನೋರಂಜನೆಗೆ ಮಾತ್ರ ಸೀಮಿತವಾಗುತ್ತದೆ.

ಅಂರ‍್ರಾಷ್ಟಿçÃಯ ಆಟಗಾರರ ಸ್ನೇಹ ಮಿಲನ: ಈ ವರ್ಷ ಅಂರ‍್ರಾಷ್ಟಿçÃಯ ಆಟಗಾರರ ಸ್ನೇಹ ಮಿಲನ ಕಾರ್ಯಕ್ರಮವನ್ನು ಕುಂಡ್ಯೋಳAಡ ಹಾಕಿ ಹಬ್ಬದ ಸೆಮಿಫೈನಲ್ಸ್ನಲ್ಲಿ ಹಮ್ಮಿಕೊಳ್ಳಲಾಯಿತು. ಅಲ್ಲಿಯೂ ಕೂಡ ಒಳ್ಳೆಯ ತರಬೇತಿ ನೀಡಬೇಕೆಂಬ ಚರ್ಚೆ ನಡೆಯಿತು. ಮುಂದೆ ಏನು ಮಾಡಬೇಕೆಂಬ ಮೊದಲ ಸುತ್ತಿನ ಮಾತುಕತೆ ನಡೆಸಬೇಕೆಂದು ಬಯಸಿದರು.

ಮುಂಬರುವ ವರ್ಷಗಳಲ್ಲಿ ಇಂತಹ ಪ್ರಯತ್ನ ಮಾಡಿದರೆ ಬಹಳಷ್ಟು ಉದಯೋನ್ಮುಖ ಆಟಗಾರರು ಹೊರಹೊಮ್ಮಬಹುದು. ಆದರೆ ಎಲ್ಲದಕ್ಕೂ ಸಮಯವೇ ಉತ್ತರ ಕೊಡಬೇಕಾಗಿದೆ.

- ಚೆಪ್ಪುಡೀರ ಕಾರ್ಯಪ್ಪ, ವೀಕ್ಷಕ ವಿವರಣೆಗಾರರು, ನೊಕ್ಯ.