ಮಡಿಕೇರಿ, ಮೇ ೧೯: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಅರೆಭಾಷೆ ಗೌಡ ಕುಟುಂಬಗಳ ನಡುವಿನ ಗೌಡ ಫುಟ್ಬಾಲ್‌ನಲ್ಲಿ ಅಯ್ಯಂಡ್ರ, ಮುಕ್ಕಾಟಿ, ಬೈಲೋಳಿ, ಕಲ್ಲುಮುಟ್ಲು, ಕೂಡಕಂಡಿ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾಟದಲ್ಲಿ ಮುಕ್ಕಾಟಿ ಹೊಸೋಕ್ಲು ವಿರುದ್ಧ ೪-೦ ಅಂತರದಲ್ಲಿ ಜಯ ಸಾಧಿಸಿತು. ಅಯ್ಯಂಡ್ರ ಪೊಡನೋಳನ ವಿರುದ್ಧ ೧-೦ ಅಂತರದಲ್ಲಿ ಗೆಲುವು ಸಾಧಿಸಿತು. ಕಲ್ಲುಮುಟ್ಲು ಮುಕ್ಕಾಟಿ (ಕಡಿಯತ್ತೂರು) ವಿರುದ್ಧ ೨-೦ ಗೋಲುಗಳ ಗೆಲುವು ದಾಖಲಿಸಿತು. ದಂಬೆಕೋಡಿ ಚೆಟ್ಟಡ್ಕ ವಿರುದ್ಧ ೨-೦ ಅಂತರದಲ್ಲಿ ಗೆಲುವು ಸಾಧಿಸಿತು. ಬೈಲೋಳಿ ಕಡ್ಲೇರ ವಿರುದ್ಧ ೩-೨ ಗೋಲುಗಳ ಜಯ ಲಭಿಸಿತು. ಅಯ್ಯಂಡ್ರ ಚೆಟ್ಟಿಮಾಡ ವಿರುದ್ಧ ೪-೨ ಗೋಲುಗಳ ಗೆಲುವು ದಾಖಲಿಸಿತು. ಮುಕ್ಕಾಟಿಗೆ ತೇನನ ವಿರುದ್ಧ ೩-೦ ಗೋಲುಗಳ ಗೆಲುವು ಲಭಿಸಿತು. ಪೂಳಕಂಡ ವಿರುದ್ಧ ಕೂಡಕಂಡಿಗೆ ಟ್ರೆöಬ್ರೇಕರ್‌ನಲ್ಲಿ ೨-೧ ಗೋಲು ಜಯ ಲಭಿಸಿತು. ಕಲ್ಲುಮುಟ್ಲುಗೆ ದಂಬೆಕೋಡಿ ವಿರುದ್ಧ ೨-೧ ಗೋಲುಗಳ ಜಯ ಲಭಿಸಿತು.