ವೀರಾಜಪೇಟೆ, ಮೇ ೧೯: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಐಕ್ಯೂಎಸಿ ಘಟಕ, ದೈಹಿಕ ಶಿಕ್ಷಣ ವಿಭಾಗ ಮತ್ತು ಬಿಬಿಎ ವಿಭಾಗದ ಸಹಯೋಗದಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ಹಾಕಿ ಪಂದ್ಯಾವಳಿಯು ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ತಾ.೨೧ ಮತ್ತು ೨೨ರಂದು ನಡೆಯಲಿದೆ.

ತಾ.೨೧ ರಂದು ಬೆಳಿಗ್ಗೆ ಪಂದ್ಯಾಟದ ಉದ್ಘಾಟನೆ ಜರುಗಲಿದ್ದು, ಒಡಿಸ್ಸಾದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಕಿ ಕೋಚ್ ಬಿ.ಜೆ. ಕಾರ್ಯಪ್ಪ, ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಸಂಚಾಲಕರಾದ ಹೇಮ ಬಿ.ಡಿ., ಬಿ.ವಿ. ರಾಜ ರೈ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಹದಿನೈದಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳಲಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.