ಕೋವರ್ ಕೊಲ್ಲಿ ಇಂದ್ರೇಶ್
ಮೈಸೂರು, ಮೇ ೧೯: ಶ್ರೀರಂಗಪಟ್ಟಣ- ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಭೂಮಿ ನೀಡುವ ರೈತರಿಗೆ ಎಕರೆಗೆ ಕನಿಷ್ಟ ೪೦ ಲಕ್ಷ ನೀಡಬೇಕು ಮತ್ತು ಕುಟುಂಬದ ಒರ್ವರಿಗೆ ಉದ್ಯೋಗ ಕಲ್ಪಿಸಲು ಆಗ್ರಹಿಸಿ ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ತಡೆ ಒಡ್ಡಿರುವ ಘಟನೆ ಹುಣಸೂರು ಸಮೀಪದ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರಕ್ಕೆ ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳನ್ನು ತಡೆದ ರೈತರು ಅವರನ್ನು ವಾಪಸ್ ಕಳುಹಿಸಿದ್ದು, ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ತೊಡಕಾಗಿದೆ. ಈ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಈಗಾಗಲೆ ೩.೫೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಗೊಳಿಸಿದ್ದು, ಖಾಸಗಿ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಈಗಾಗಲೇ ಸಾಮಾಗ್ರಿ ದಾಸ್ತಾನು ಮಾಡಿದ್ದಾರೆ. ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಬಹುತೇಕ ರೈತರು ಭೂಮಿಯನ್ನು ಬಿಟ್ಟುಕೊಟ್ಟು ಸೂಕ್ತ ಪರಿಹಾರವನ್ನೂ ಪಡೆದುಕೊಂಡಿದ್ದಾರೆ.
ಇನ್ನು ಕೆಲವಡೆಗಳಲ್ಲಿ ಭೂಸ್ವಾಧೀನ ಆಗಬೇಕಾಗಿದ್ದು ಈ ಉದ್ದೇಶಿತ ೪೧೩೦ ಕೋಟಿ ರೂಪಾಯಿಗಳ ೯೨ ಕಿಲೋಮೀಟರ್ ಉದ್ದದ ಹೆದ್ದಾರಿಯ ಕಾಮಗಾರಿ ೨೦೨೬ ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಅಗ್ರಹಾರ ಗ್ರಾಮದಲ್ಲಿ ಹೆದ್ದಾರಿಯು ಸುಮಾರು ೪.೯ ಕಿಲೋಮೀಟರ್ಗಳಷ್ಟು ಉದ್ದಕ್ಕೆ ಹಾದು ಹೋಗಲಿದ್ದು ೬೦ ಮೀಟರ್ ಅಗಲದವರೆಗೆ ಭೂಸ್ವಾಧೀನ ಮಾಡಿಕೊಳ್ಳಲು ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ನಿಗಮ ಉದ್ದೇಶಿಸಿದೆ. ಹೆದ್ದಾರಿ ನಿಗಮವು ಪರಿಹಾರ ನೀಡುವಾಗ ಸಬ್ರಿಜಿಸ್ಟಾçರ್ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಜಮೀನಿನ ಮಾರಾಟ ಮೌಲ್ಯಕ್ಕೆ ಅಷ್ಟೇ ಮೊತ್ತದ ಹಣವನ್ನು ಸೇರಿಸಿ ನಂತರ ಅದಕ್ಕೆ ಶೇಕಡಾ ೩೦ ರಷ್ಟು ಸೋಲೇಟಿಯಂ (Soಟಚಿಣium) ನಷ್ಟ ಪರಿಹಾರವನ್ನೂ ಸೇರಿಸಿ ದರ ನಿಗದಿ ಮಾಡುತ್ತದೆ. ಅಂದರೆ ಇದು ಸರ್ಕಾರ ನಿಗದಿಪಡಿಸಿರುವ ಮೌಲ್ಯಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ. ಈಗ ಸರ್ಕಾರ ಇಲ್ಲಿ ಎಕರೆಯೊಂದಕ್ಕೆ ಸುಮಾರು ೧೮ ಲಕ್ಷ ರೂಪಾಯಿಗಳವರೆಗೆ ದರ ನಿಗದಿ ಮಾಡಿದೆ.
ಆದರೆ ಕೆಲ ಮಧ್ಯವರ್ತಿಗಳು ಸೇರಿಕೊಂಡು ನಿಮಗೆ ಇನ್ನೂ ದುಪ್ಪಟ್ಟು ದರ ಸಿಗಬೇಕು ಎಂದು ರೈತರಿಗೆ ಆಮಿಷವೊಡ್ಡಿ ಪ್ರಚೋದನೆ ನೀಡಿ ಪ್ರತಿಭಟನೆಗೆ ಇಳಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ರೈತರು ೪೦ ಲಕ್ಷ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿ ಸರ್ಕಾರಿ ಕಾರ್ಯಕ್ಕೆ ತಡೆ ಒಡ್ಡಿದ್ದಾರೆ.
ಸರ್ವೆಗೆ ತಡೆ ಒಡ್ಡಿದ ನಂತರ ಸ್ಥಳಕ್ಕೆ ತೆರಳಿದ ಹುಣಸೂರು ತಹಶೀಲ್ದಾರ್ ಡಾ ನಯನಾ, ಬಿಳಿಕೆರೆ ಇನ್ಸ್ಪೆಕ್ಟರ್ ಲೋಲಾಕ್ಷಿ, ಕರ್ನಾಟಕ ರಾಜ್ಯ ಭೂ ಸ್ವಾಧೀನ ಅಧಿಕಾರಿ ಡಾ. ವೆಂಕಟರಾಜು ಅವರು ರೈತರ ಮನವೊಲಿಸಿ ಸರ್ವೆಗೆ ಮುಂದಾದರೂ ರೈತರು ಡಿಸಿ ಬರಬೇಕೆಂದು ಬಿಗಿ ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರೊಂದಿಗೆ ಕರೆ ಮಾಡಿಸಿ ಮಾತನಾಡಿದಾಗ ಜಿಲ್ಲಾಧಿಕಾರಿಗಳು ಚುನಾವಣೆ ಮುಗಿದ ನಂತರ ರೈತರೊಂದಿಗೆ ಸಭೆ ನಡೆಸಿ ಸರ್ಕಾರಿ ಮಾನದಂಡಗಳ ಪ್ರಕಾರ ಪರಿಹಾರ ನಿಗದಿಪಡಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಭೂಸ್ವಾಧೀನ ಅಧಿಕಾರಿ ಡಾ. ವೆಂಕಟರಾಜು ಅವರು ಈಗ ಸರ್ವೆ ಮಾಡಲು ಅವಕಾಶ ಕೊಡಿ , ಏಕೆಂದರೆ ಕೆಲಸ ಆರಂಭಗೊಳ್ಳಬೇಕಿದೆ, ಉದ್ದೇಶಿತ ರಸ್ತೆಯ ಒಂದು ಅಡಿ ವ್ಯಾಸ ೨೦ ಅಡಿ ಆಳದವರೆಗೂ ಮಣ್ಣನ್ನು ತೆಗೆದು ಪರೀಕ್ಷೆಗೆ ಕಳಿಸಬೇಕಿದೆ. ಭೂಮಿಯಲ್ಲಿ ಕಾಮಗಾರಿ ಆರಂಭಕ್ಕೂ ಮೊದಲೇ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಪರಿಹಾರವನ್ನು ಪಡೆದುಕೊಳ್ಳಿ ಎಂದು ವಿನಂತಿಸಿದರೂ ಮಣ್ಣು ತೆಗೆಯಲೂ ಬಿಡಲಿಲ್ಲ ಎಂದು ಹೇಳಿದರು. ೯೨ ಕಿಮೀ ಉದ್ದದ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಹೆದ್ದಾರಿಯು ಸಂಸದ ಪ್ರತಾಪ್ ಸಿಂಹ ಅವರ ಆಸಕ್ತಿಯಿಂದಾಗಿ ರಾಷ್ಟಿçÃಯ ಹೆದ್ದಾರಿ ನಿಗಮವು (ಓಚಿಣioಟಿಚಿಟ highತಿಚಿಥಿ ಚಿuಣhoಡಿiಣಥಿ oಜಿ Iಟಿಜiಚಿ) ಕೆಲಸವನ್ನು ಕೈಗೆತ್ತಿಕೊಂಡಿದೆ.
ಈ ನಾಲ್ಕು ಪಥದ ರಸ್ತೆಯ ಜೊತೆ ಸರ್ವೀಸ್ ರಸ್ತೆಗಳು ಇರಲಿವೆ. ಈ ಯೋಜನೆಗೆ ಒಟ್ಟು ೧,೩೫೧.೬೭ ಎಕರೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ೬೯೧.೮೯ ಎಕರೆ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ೪೭೭ ಕೋಟಿ ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ಒಟ್ಟು ಎರಡು ಪ್ಯಾಕೇಜ್ಗಳಲ್ಲಿ ಈ ಕಾಮಗಾರಿ ನಡೆಯುವ ನಿರೀಕ್ಷೆ ಇದ್ದು ಶ್ರೀರಂಗಪಟ್ಟಣ-ಹುಣಸೂರು, ಹುಣಸೂರು-ಕುಶಾಲನಗರ ಎಂದು ಕಾಮಗಾರಿಯನ್ನು ಎರಡು ಪ್ಯಾಕೇಜ್ ಮಾಡಲಾಗುತ್ತದೆ. ಮೊದಲ ಹಂತದ ಶ್ರೀರಂಗಪಟ್ಟಣ-ಹುಣಸೂರು ಕಾಮಗಾರಿ ಮೊದಲು ಆರಂಭವಾಗಲಿದೆ.
ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ನೂತನ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ಹೆದ್ದಾರಿ ಯೋಜನೆಯಲ್ಲಿ ಪಿರಿಯಾಪಟ್ಟಣ ಮತ್ತು ಕುಶಾಲನಗರ ಭಾಗದಲ್ಲಿ ೧೩೫ ಎಕರೆ ಅರಣ್ಯ ಭೂಮಿ ಇದ್ದು ಇಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಕಳೆದ ಜನವರಿ ೨೯ರಂದು ಅನುಮತಿಯೂ ಸಿಕ್ಕಿದೆ. ಯೋಜನಾ ವೆಚ್ಚ ೪,೧೩೦ ಕೋಟಿ ರೂಪಾಯಿ ಆಗಿದ್ದು ಇದರಲ್ಲಿ ಭೂ ಸ್ವಾಧೀನ ಪರಿಹಾರಕ್ಕೆ ೧,೧೦೦ ಕೋಟಿ ರೂ. ನೀಡಲಾಗುತ್ತದೆ. ಈ ಹೆದ್ದಾರಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಆರಂಭಗೊಳ್ಳಲಿದ್ದು ಕೊಡಗು ಜಿಲ್ಲೆಯಲ್ಲಿ ೨.೩ ಕಿ. ಮೀ., ಮೈಸೂರು ಜಿಲ್ಲೆಯಲ್ಲಿ ೭೫.೯ ಕಿ. ಮೀ. ಮತ್ತು ಮಂಡ್ಯದಲ್ಲಿ ೧೪ ಕಿ. ಮೀ. ಹಾದು ಹೋಗಲಿದೆ. ಈ ಹೆದ್ದಾರಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಗೆ ಸಂಪರ್ಕಗೊಳ್ಳಲಿದ್ದು ಪೂರ್ಣಗೊಂಡ ನಂತರ ಮಡಿಕೇರಿಯಿಂದ ಕೆಂಗೇರಿಯನ್ನು ಮೂರು ಗಂಟೆಗಳಲ್ಲಿ ತಲುಪಬಹುದಾಗಿದೆ.