ಕಣಿವೆ, ಮೇ ೨೦: ಮಳೆಯ ಆರ್ಭಟದಿಂದ ತುಂಬಿ ಹರಿದ ಚರಂಡಿಯ ನೀರು ಕಾಫಿ ಸಂಸ್ಕರಣಾ ಘಟಕದೊಳಗೆ ನುಗ್ಗಿದ ಪರಿಣಾಮ ಕಾಫಿ ಫಸಲು ಹಾನಿಯಾದ ಘಟನೆ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆಯಿತು.
ಕೂಡ್ಲೂರು ಕೈಗಾರಿಕಾ ಪ್ರದೇಶದ ಎತ್ತರ ಪ್ರದೇಶದಿಂದ ಹರಿದ ಮಳೆ ನೀರು ಅಮೃತ ಕಾಫಿ ಘಟಕದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯ ನೀರು ಸಂಪೂರ್ಣವಾಗಿ ಕಾಫಿ ಘಟಕದ ಒಳಗೆ ಹರಿದ ಪರಿಣಾಮ ಕಾಫಿ ಬೀಜ ತುಂಬಿದ್ದ ಚೀಲಗಳು ನೀರಿನಲ್ಲಿ ಮುಳುಗಿ ನಷ್ಟವಾಗಿದೆ ಎಂದು ಕಾಫಿ ಘಟಕದ ವ್ಯವಸ್ಥಾಪಕ ಕಣ್ಣನ್ ದೂರಿದ್ದಾರೆ.