ಐಗೂರು, ಮೇ ೨೦: ಸರಕಾರದಿಂದ ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕಾಗಿ ಹಲವಾರು ರಸ್ತೆ ಯೋಜನೆಗಳು ಬರುತ್ತಿದ್ದು, ಗುತ್ತಿಗೆದಾರರ ನಿರ್ವಹಣಾ ಕೊರತೆಯಿಂದ ಈ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಇದಕ್ಕೊಂದು ಉದಾಹರಣೆ ಹರದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಹೊಸತೋಟ, ಕುಂಬೂರು-ಮಾದಾಪುರ ರಸ್ತೆಯ ಕಾಮಗಾರಿ ಗಾಂಧಿ ಪಥ ಗ್ರಾಮ ಪಥ (ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ) ಎಂಬ ಕರ್ನಾಟಕ ಸರ್ಕಾರ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಈ ಕಾಮಗಾರಿಯು ೧೫-೯-೨೦೧೭ರಲ್ಲಿ ಪ್ರಾರಂಭವಾಗಿ ೩೧-೩-೨೦೨೦ರಲ್ಲಿ ಪೂರ್ಣಗೊಂಡಿದೆ. ರೂ.೮೭೫ ಲಕ್ಷ ವೆಚ್ಚದಲ್ಲಿ ಕುಂಬೂರು-ಮಾದಾಪುರ ವರೆಗೆ ೬.೦೪ ಕಿ.ಮೀ ರಸ್ತೆಯ ದುರಸ್ತಿ ಕಾಮಗಾರಿ ಇದಾಗಿತ್ತು. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯನ್ನು ಐದು ವರ್ಷಗಳ ಕಾಲ ರಸ್ತೆ ಕೆಲಸ ಪೂರ್ಣಗೊಳಿಸಿದ ಗುತ್ತಿಗೆದಾರರು ನಿರ್ವಹಣೆ ಮಾಡಬೇಕಾಗಿದ್ದು, ೬ನೇ ವರ್ಷ ಮರು ಡಾಂಬರೀಕರಣ ಮಾಡಬೇಕೆಂದು ಕಾಮಗಾರಿ ನಡೆದ ಸ್ಥಳದಲ್ಲಿ ಅಳವಡಿಸಿದ ನಾಮಫಲಕದಲ್ಲಿ ಮುದ್ರಿಸಲಾಗಿದೆ. ಆದರೆ ಈಗಾಗಲೇ ಸುರಿದ ಎರಡು ಮೂರು ಮಳೆಗೆ ರಸ್ತೆಯೆಲ್ಲ ಕೆಸರು ಮಯವಾಗಿ ರಸ್ತೆಯ ಗುಂಡಿಗಳಲ್ಲಿ ಮತ್ತು ಸೇತುವೆಯ ರಸ್ತೆಯ ಮೇಲೆ ಮಳೆಯ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಪಾದಚಾರಿಗಳ ಮೇಲೆ ಕೆಸರು ಹಾರಿಸಿಕೊಂಡೆ ವಾಹನ ಚಲಾಯಿಸುವಂತಾಗಿದೆ ಎಂದು ಗರಗಂದೂರು ಭಾಗದ ಕಾಫಿ ಬೆಳೆಗಾರ ಲಿಖಿತ್ ದಾಮೋದರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿನವರೆಗೆ ೪ ವರ್ಷಗಳ ಕಾಲ ರೂ. ೮೭೫ ಲಕ್ಷ ಮೊತ್ತದ ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಈ ರೀತಿಯಾಗಿ ನೀರು ನಿಂತು ರಸ್ತೆ ಕೆಸರುಮಯವಾಗುತ್ತಿರಲಿಲ್ಲ ಎಂದು ಹರದೂರು ಗ್ರಾಂ. ಪಂಚಾಯಿತಿ ಉಪಾಧ್ಯಕ್ಷ ನಿರ್ವಹಣಾ ಕೊರತೆಯಿಂದ ನಿರ್ವಹಣಾ ಕೊರತೆಯಿಂದ ನಿರ್ವಹಣಾ ಕೊರತೆಯಿಂದ ಸಲೀಂ ಹೊಸತೋಟ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ರಸ್ತೆ ಕಾಮಗಾರಿಯ ಕಡೆಗೆ ಸಂಬAಧಪಟ್ಟ ಅಭಿಯಂತರರು ಗಮನ ಹರಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. -ಸುಕುಮಾರ