ಕುಶಾಲನಗರ, ಮೇ ೨೦: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮ ವ್ಯಾಪ್ತಿಯಲ್ಲಿ ಸಂಜೆ ಭಾರಿ ಪ್ರಮಾಣದ ಮಳೆ ಸುರಿದಿದೆ. ನಿರಂತರ ಮಳೆಯಿಂದ ಸಂಚಾರ ವ್ಯವಸ್ಥೆ ಕೂಡ ಏರುಪೇರು ಉಂಟಾದ ದೃಶ್ಯ ಕಂಡು ಬಂತು.

ಕುಶಾಲನಗರ ಸಮೀಪ ಕೈಗಾರಿಕಾ ಬಡಾವಣೆಯಲ್ಲಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಮರದ ಮಿಲ್ಲೊಂದು ಸಂಪೂರ್ಣ ನೀರಿನಿಂದ ಆವೃತಗೊಂಡು ಕೆಲಸ ಕಾರ್ಯಗಳು ಸ್ಥಗಿತಗೊಂಡವು. ಕಾರ್ಮಿಕರು ಹೊರ ಬರಲು ಆಗದೆ ಪರದಾಡುತ್ತಿದ್ದ ದೃಶ್ಯ ಕಂಡುಬAತು.

ಮೇಲ್ಭಾಗದಿAದ ಹರಿದು ಬರುವ ನೀರು ಅಲ್ಲಿನ ಮರದ ಮಿಲ್ ಆವರಣಕ್ಕೆ ನುಗ್ಗಿ ಐದು ಅಡಿಗಿಂತಲೂ ಎತ್ತರದಲ್ಲಿ ನೀರು ನಿಂತು ಆತಂಕ ಸೃಷ್ಟಿಯಾಯಿತು. ಈ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಸಂಬAಧಿ ಸಿದ ಕೈಗಾರಿಕಾ ಬಡಾವಣೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಮರದ ಮಿಲ್ ಮಾಲೀಕ ಎಂ.ಎA. ಸಾಹಿರ್ ಆರೋಪಿಸಿದ್ದಾರೆ.

ಆವರಣದಲ್ಲಿದ್ದ ವಾಹನಗಳು ಸಂಪೂರ್ಣ ನೀರಿನಿಂದ ತುಂಬಿ ಕೆಟ್ಟು ನಿಂತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ನೀರು ತುಂಬಿದ ಹಿನ್ನೆಲೆಯಲ್ಲಿ ಮಿಲ್ ಯಂತ್ರೋಪಕರಣಗಳು ಕೆಟ್ಟು ನಿಂತಿದ್ದು, ಇದರೊಂದಿಗೆ ವಿದ್ಯುತ್ ಅಪಾಯದ ಆತಂಕ ಕೂಡ ಎದುರಾಗಿದೆ ಎಂದು ಹೇಳಿದ್ದಾರೆ. ಮಿಲ್ ಹೊರಭಾಗದ ಸಂಪರ್ಕ ರಸ್ತೆಯ ಮೇಲೆ ಮೂರು ಅಡಿಗಿಂತ ಎತ್ತರದಲ್ಲಿ ನೀರು ನಿಂತು ಕಚೇರಿ ಕಾರ್ಮಿಕರು ಮತ್ತು ಯಾವುದೇ ವಾಹನಗಳು ಸಂಚರಿಸಲು ಅನಾನುಕೂಲ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.