ಮೇ ೨೦: ಐಗೂರು ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಮಳೆ ಬೀಳದಿದ್ದು, ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ವ್ಯಾಪ್ತಿಯ ರೈತರು ಮತ್ತು ಕಾಫಿ ಬೆಳೆಗಾರರು ಹರ್ಷವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಸುಮಾರು ೪ ಇಂಚು ಮಳೆಯಾಗಿದ್ದು, ಒಣಗಿ ಬಾಗಿ ಹೋಗಿದ್ದ ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ಮಳೆಯ ಸಿಂಚನದಿAದ ಎದ್ದು ನಿಂತಿವೆ. ನೀರಿನ ತೇವಾಂಶದಿAದ ಒಣಗಿ ಹೋಗಿದ್ದ ಹುಲ್ಲುಗಳು ಚಿಗುರಿದ್ದು ದನ ಕರುಗಳಿಗೆ ಮೇವಿನ ಸೌಲಭ್ಯವಾಗಿದೆ. ಚೋರನ ಹೊಳೆಯಲ್ಲಿ ಸಣ್ಣದಾಗಿ ನೀರಿನ ಹರಿವು ಶುರುವಾಗಿ ಜನರಿಗೆ ಬಟ್ಟೆ ಒಗೆಯಲು ಮತ್ತು ದನ ಕರುಗಳಿಗೆ ಕುಡಿಯಲು ನೀರಿನ ಸೌಲಭ್ಯ ದೊರಕಿದ್ದು, ಈ ಭಾಗದ ಜನರು ಮಳೆಗಾಲದಲ್ಲಿ ಉರಿಸಲು ಬೇಕಾದ ಸೌದೆಯ ಶೇಖರಣೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂದಿದೆ. ಕಾಫಿ ತೋಟದಲ್ಲಿ ಬಾಕಿ ಉಳಿದಿರುವ ಮರ ಕಪಾತು ಕೆಲಸ ಪ್ರಾರಂಭಿಸಬೇಕೆAದು ಕಾಫಿ ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.