ಮಡಿಕೇರಿ, ಮೇ ೨೦: ಬೆಂಗಳೂರಿAದ ಪ್ರಸಾರವಾಗುವ ರಾಜ್ಯಮಟ್ಟದ ಖಾಸಗಿ ವಾಹಿನಿ ಒಂದರಲ್ಲಿ ಮುಸಲ್ಮಾನರಿಗೆ ಅವಮಾನ ಮಾಡಲಾಗಿದೆ ಎಂದು ವಾಹಿನಿ ಮತ್ತು ಆ ಕಾರ್ಯಕ್ರಮವನ್ನು ನಿರೂಪಿಸಿದ ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಧರ್ಮಾಧಾರಿತ ಜನಸಂಖ್ಯೆ ವರದಿ ಕುರಿತ ಚರ್ಚೆಯಲ್ಲಿ ಹಿಂದೂಗಳ ಜನಸಂಖ್ಯೆಯನ್ನು ಸೂಚಿಸಲು ಭಾರತೀಯ ಧ್ವಜವನ್ನು ಮತ್ತು ಮುಸ್ಲಿಂ ಸಂಖ್ಯೆಗೆ ಪಾಕಿಸ್ತಾನದ ಧ್ವಜವನ್ನು ಬಳಸಿ ಮುಸಲ್ಮಾನರನ್ನು ಅವಮಾನಿಸಲಾಗಿದೆ ಹಾಗೂ ಆ ಮೂಲಕ ರಾಷ್ಟçದ್ರೋಹದ ಕೃತ್ಯ ಎಸೆಗಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಹಾಗೂ ಪದಾಧಿಕಾರಿಗಳು ಹೆಚ್ಚುವರಿ ಪೊಲೀಸ್ ಅಧಿಕಾರಿ ಸುಂದರ್ ರಾಜ್ ಅವರಿಗೆ ಲಿಖಿತ ಪುಕಾರು ಸಲ್ಲಿಸಿದ್ದಾರೆ. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸೈಯದ್ ಭಾವ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೋಲುಮಂಡ ರಫೀಕ್, ಡಿಸಿಸಿ ಪ್ರಮುಖರಾದ ಮೂಸ, ಮಜೀದ್ ಪದಾಧಿಕಾರಿಗಳಾದ ಬಶೀರ್, ಮಹಮ್ಮದ್ ಆಲಿ ಮೊದಲಾದವರು ಪಾಲ್ಗೊಂಡಿದ್ದರು.