ಕಡಂಗ, ಮೇ ೧೯: ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆ.ಸಿ.ಎಫ್ ದಶವಾರ್ಷಿಕ ಸಮ್ಮೇಳನವು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಸಂಸ್ಕೃತಿಯ ಸಂರಕ್ಷರಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿದ್ದು, ಅದರ ಪ್ರಚಾರಾರ್ಥ ಕೊಡಗು ಜಿಲ್ಲೆಯ ಪ್ರತಿಷ್ಟಿತ ವಿದ್ಯಾಸಂಸ್ಥೆ ಅನ್ವಾರುಲ್ ಹುದಾದಲ್ಲಿ ವಿದ್ಯಾರ್ಥಿಗಳ ಪ್ರಚಾರ ಜಾಥಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಕಮರುದ್ದೀನ್ ಅನ್ವಾರಿ ಸಖಾಫಿ ಸಮ್ಮೇಳನದ ಯಶಸ್ಸಿಗೆ ಕೈ ಜೋಡಿಸುವಂತೆ ಕರೆ ನೀಡಿದರು. ಅನ್ವಾರುಲ್ ಹುದಾ ದಅವಾ ಮುದರ್ರಿಸರೂ ವಾಣಿಜ್ಯ ವಿಭಾಗದ ಉಪನ್ಯಾಸಕ ಮುಹಮ್ಮದ್ ಶರೀಫ್ ಅನ್ವಾರಿ ಅಹ್ಸನಿ ಮುಖ್ಯ ಭಾಷಣ ಮಾಡಿ ಕೆ.ಸಿ.ಎಫ್ ಉದಯ ಹಾಗೂ ಅದರ ಸಮಾಜ ಸೇವೆ, ಕಾರ್ಯಕರ್ತ ತ್ಯಾಗಮಯ ಕೆಲಸಗಳ ಕುರಿತು ಮಾತಾಡಿದರು. ಕಾರ್ಯಕ್ರಮದಲ್ಲಿ ಅನ್ವಾರ್ ಜೂನಿಯರ್ ಅಕಾಡೆಮಿ ಪ್ರಾಧ್ಯಾಪಕ ಶಿಹಾಬುದ್ದೀನ್, ಎಸ್.ಎಸ್.ಎಫ್ ಅನ್ವಾರುಲ್ ಹುದಾ ದಅವಾ ವಿಂಗ್ ಅಧ್ಯಕ್ಷ ಜುನೈದ್ ಹಾಕತ್ತೂರು, ಅಲಿ ಉಸೈದ ಹಾಜರಿದ್ದರು.