ಹೆಲಿಕಾಪ್ಟರ್ ಅವಘಡದಲ್ಲಿ ಇರಾನ್ ರಾಷ್ಟçಪತಿ ಸಾವು
ಇರಾನ್, ಮೇ ೨೦: ಇರಾನ್ ರಾಷ್ಟçದ ರಾಷ್ಟçಪತಿ ಇಬ್ರಾಹಿಂ ರೈಸಿ ಅವರು ಹಲಿಕಾಪ್ಟರ್ ಅವಘಡದಲ್ಲಿ ಸಾವನ್ನಪ್ಪಿದ್ದು, ಅವರೊಂದಿಗಿದ್ದ ಇರಾನ್ ವಿದೇಶಾಂಗ ಸಚಿವ ಹೊಸೇನ್ ಅಮಿರ್ ಅಬ್ದೊಲ್ಲಾಹಿಯಾನ್ ಅವರು ಕೂಡ ಕೊನೆಯುಸಿರೆಳಿದಿದ್ದಾರೆ. ರಾಷ್ಟçಪತಿ, ವಿದೇಶಾಂಗ ಸಚಿವ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೋಮಿನಿಯವರ ಪ್ರತಿನಿಧಿ ಅವರನ್ನೊಳಗೊಂಡ ಹೆಲಿಕಾಪ್ಟರ್ ತಾ. ೧೯ ರಂದು ಅಜರ್‌ಬೈಜಾನ್ ರಾಷ್ಟçದ ರವಿವಾ ಪರ್ವತಗಳ ನಡುವೆ ಮಂಜು ಕವಿದ ವಾತಾವರಣದಲ್ಲಿ ಕಾಣೆಯಾಗಿ ನಿಯಂತ್ರಣಾ ಕೇಂದ್ರದೊAದಿಗೆ ಎಲ್ಲ ಸಂಪರ್ಕಗಳನ್ನು ಕಳೆದುಕೊಂಡಿತು. ತೀವ್ರ ಚÀಳಿಯ ಮಂಜು ಮುಸುಕಿದ ವಾತಾವರಣದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ತಾ. ೨೦ ರಂದು ಹೆಲಿಕಾಪ್ಟರ್ ಅವಶೇಷಗಳು ಪತ್ತೆಯಾದವು. ಅವಶೇಷಗಳ ನಡುವೆ ಇರಾನ್ ಪ್ರಧಾನಿ ರೈಸಿ, ವಿದೇಶಾಂಗ ಸಚಿವ ಹೊಸೇನ್ ಸೇರಿದಂತೆ ಒಟ್ಟು ೪ ಮಂದಿಯ ಮೃತದೇಹ ಪತ್ತೆಯಾಗಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಜರ್‌ಬೈಜಾನ್ ದೇಶದ ರಾಷ್ಟçಪತಿ ಇಲ್ಹಾಮ್ ಅಲಿಯೇವ್ ಅವರನ್ನು ಭೇಟಿಯಾಗಿ ಅಜರ್‌ಬೈಜಾನ್‌ನಿಂದ ಇರಾನ್‌ಗೆ ಹಿಂತಿರುಗುತ್ತಿದ್ದ ವೇಳೆ ಹೆಲಿಕಾಪ್ಟರ್ ಉಡಾವಣೆಗೊಂಡು ಅರ್ಧ ಗಂಟೆ ಕಳೆದ ಬಳಿಕ ನಿಯಂತ್ರಣಾ ಕೇಂದ್ರದೊAದಿಗೆ ಸಂಪರ್ಕ ಕಡಿತಗೊಂಡಿತು. ಇದಾದ ಸುಮಾರು ೧೬ ತಾಸುಗಳ ಬಳಿಕ ಹೆಲಿಕಾಪ್ಟರ್ ಅವಶೇಷಗಳು ಹಾಗೂ ಸ್ಥಳದಲ್ಲಿ ಸುಟ್ಟು ಬಹುತೇಕ ಕರಕಲಾದ ಮೃತ ದೇಹಗಳು ಪತ್ತೆಯಾದವು. ರಾಷ್ಟçಪತಿಯ ಹೆಲಿಕಾಪ್ಟರ್‌ನೊಂದಿಗೆ ಉಡಾವಣೆಗೊಂಡ ಇನ್ನೆರಡು ಬೆಂಗಾವಲು ಹೆಲಿಕಾಪ್ಟರ್‌ಗಳು ಸುರಕ್ಷಿತವಾಗಿ ಇರಾನ್‌ಗೆ ವಾಪಸ್ಸಾದವು. ರಾಷ್ಟçಪತಿ ಅಗಲಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಇತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಉಪರಾಷ್ಟçಪತಿ ಮಹಮದ್ ಮೊಖ್‌ಬೆರ್ ಸದ್ಯದ ಮಟ್ಟಿಗೆ ದೇಶವನ್ನು ಮುನ್ನಡೆಸಲಿದ್ದಾರೆ.
ಇರಾನ್ ಅಧ್ಯಕ್ಷರಾಗಿ ಮೊಹಮ್ಮದ್ ಮೋಖ್ಬರ್
ಇರಾನ್, ಮೇ ೨೦: ಹೆಲಿಕಾಪ್ಟರ್ ಅವಘಡದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟ ಬೆನ್ನಲ್ಲೇ, ಉಪಾಧ್ಯಕ್ಷ ಮೊಹಮ್ಮದ್ ಮೊಬ್ಬರ್ ಅವರನ್ನು ಇರಾನ್‌ನ ಹಂಗಾಮಿ ಅಧ್ಯಕ್ಷರಾಗಿ ಸೋಮವಾರ ನೇಮಿಸಲಾಗಿದೆ. ರೈಸಿ ಅವರ ಸಾವಿಗೆ ಸಂತಾಪ ಸೂಚಿಸಿ ಬರೆದ ಸಂದೇಶದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹಂಗಾಮಿ ಅಧ್ಯಕ್ಷರ ಹೆಸರನ್ನು ಘೋಷಿಸಿದ್ದಾರೆ. ಅಲ್ಲದೇ ಐದು ದಿನಗಳ ಶೋಕಾಚರಣೆಗೆ ಕರೆ ನೀಡಿದ್ದಾರೆ.
ಹೆಚ್.ಡಿ. ರೇವಣ್ಣಗೆ ಜಾಮೀನು ಮಂಜೂರು
ಬೆAಗಳೂರು, ಮೇ ೨೦: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಸಂಬAಧಿಸಿದ ಪ್ರಕರಣದಲ್ಲಿ ಹೆಚ್.ಡಿ. ರೇವಣ್ಣ ಅವರಿಗೆ ನಗರದ ೨೪ನೇ ಎಸಿಎಂಎA ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ಈ ಕುರಿತು ಕಾಯ್ದಿರಿಸಲಾಗಿದ್ದ ಆದೇಶವನ್ನು ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ವಿಚಾರಣೆಯ (೪೨ನೇ ಎಸಿಎಂಎA ಕೋರ್ಟ್) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ. ಪ್ರೀತ್ ಅವರು ಪ್ರಕಟಿಸಿದರು. ರೂ. ೫ ಲಕ್ಷ ಮೊತ್ತದ ಬಾಂಡ್ ಹಾಗೂ ಇಷ್ಟೇ ಮೊತ್ತದ ಒಬ್ಬರ ಶ್ಯೂರಿಟಿ ಒದಗಿಸುವುದು ಸೇರಿದಂತೆ ಮತ್ತಿತರ ಷರತ್ತುಗಳನ್ನು ವಿಧಿಸಲಾಗಿದೆ.
ಸಮುದ್ರ ಮಧ್ಯೆ ಸಿಲುಕಿದ ಬೋಟ್-ಪ್ರಯಾಣಿಕರ ರಕ್ಷಣೆ
ಪಣಜಿ, ಮೇ ೨೦: ಗೋವಾದ ಮೊರ್ಮುಗಾವ್ ಬಂದರಿನ ಬಳಿ ಪ್ರತಿಕೂಲ ಹವಾಮಾನದಲ್ಲಿ ಸಿಲುಕಿ ಇಂಧನ ಖಾಲಿಯಾದ ಪ್ರವಾಸಿ ಬೋಟ್‌ನಲ್ಲಿ ಸಿಲುಕಿದ್ದ ೨೪ ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ರಕ್ಷಿಸಿದೆ. ‘ನೆರುಲ್ ಪ್ಯಾರಡೈಸ್' ಎಂಬ ಬೋಟ್ ಮೂರು ಮೀಟರ್‌ಗಿಂತಲೂ ಹೆಚ್ಚು ಎತ್ತರದ ಅಲೆಗಳೇಳುವ ಪ್ರದೇಶದಲ್ಲಿ ಭಾನುವಾರ ಇಂಧನ ಖಾಲಿಯಾಗಿ ಸಿಲುಕಿತ್ತು ಎಂದು ಕರಾವಳಿ ಕಾವಲು ಪಡೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿ-೧೪೮ ಶಿಪ್ ಮೂಲಕ ಬೋಟ್ ಸಿಲುಕಿದ್ದ ಜಾಗಕ್ಕೆ ತೆರಳಿದ್ದ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಲ್ಲಿದ್ದ ಸಿಬ್ಬಂದಿಗೆ ಧೈರ್ಯ ತುಂಬಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ನಿತ್ರಾಣರಾಗಿದ್ದ ಪ್ರವಾಸಿಗರು ಮತ್ತು ಬೋಟ್ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಐಸಿಜಿ ವಕ್ತಾರರು ತಿಳಿಸಿದ್ದಾರೆ.
ವಿಧಾನ ಪರಿಷತ್‌ನ ೧೧ ಸ್ಥಾನಗಳಿಗೆ ಚುನಾವಣೆ
ಬೆಂಗಳೂರು, ಮೇ ೨೦: ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕ ವಿಧಾನ ಪರಿಷತ್‌ನ ೧೧ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಜೂನ್ ೧೩ ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ ೩ ಕೊನೆಯ ದಿನವಾಗಿದ್ದು, ಜೂನ್ ೪ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮತದಾನ ದಿನ ಸಂಜೆ ಐದು ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಅರವಿಂದ ಕುಮಾರ್ ಅರಳಿ, ಎನ್.ಎಸ್. ಬೋಸರಾಜು, ಕೆ. ಗೋವಿಂದರಾಜ್, ಡಾ. ತೇಜಸ್ವಿನಿ ಗೌಡ, ಮುನಿರಾಜುಗೌಡ ಪಿ.ಎಂ., ಕೆ.ಪಿ. ನಂಜುAಡಿ, ಬಿ.ಎಂ. ಫಾರೂಕ್, ರಘುನಾಥ ರಾವ್ ಮಲ್ಕಾಪುರೆ, ಎನ್. ರವಿಕುಮಾರ್, ಎಸ್. ರುದ್ರೇಗೌಡ, ಕೆ. ಹರೀಶ್ ಕುಮಾರ್ ಅವರ ಅವಧಿ ಕೊನೆಗೊಳ್ಳಲಿದೆ.