ಮಡಿಕೇರಿ, ಮೇ ೨೦: ಸಿ.ಬಿ.ಎಸ್.ಇ. ಬೋರ್ಡ್ ಇತ್ತೀಚೆಗೆ ಹತ್ತು ಮತ್ತು ಹನ್ನೆರಡನೇ ತರಗತಿಯ ಫಲಿತಾಂಶ ಪ್ರಕಟಿಸಿದೆ. ಕೊಡಗು ಜಿಲ್ಲೆಯ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯವು ಅತ್ಯುತ್ತಮ ಫಲಿತಾಂಶ ಗಳಿಸಿದೆ. ಹತ್ತು ಮತ್ತು ಹನ್ನೆರಡನೆಯ ತರಗತಿಗಳಲ್ಲಿ ಶೇ.೧೦೦ ಫಲಿತಾಂಶ ಲಭಿಸಿದೆ.
ಹತ್ತನೆಯ ತರಗತಿಯಲ್ಲಿ ಕೀರ್ತನಾ ಎ. ಶೇ. ೯೫ ಮತ್ತು ತನುಷಾ ಎಂ. ಎಂ. ಶೇ. ೯೫ (ಪ್ರಥಮ), ಅಮೋಘರಾಜ್ ಎಂ. ಶೇ. ೯೪.೪ (ದ್ವಿತೀಯ) ಹಾಗೂ ಐಸಿರಿ ಹೆಚ್. ಶೇ. ೯೩.೬ (ತೃತೀಯ) ಸ್ಥಾನ ಪಡೆದಿದ್ದಾರೆ.
ಹನ್ನೆರಡನೇ ತರಗತಿ ವಿಜ್ಞಾನ- ಅಂಕಿತಾ ಜಿ. ಎ. ಶೇ. ೯೪.೪ (ಪ್ರÀಥಮ), ಸಮನ್ವಿತಾ ಶೇ. ೯೨ (ದ್ವಿತೀಯ) ಹಾಗೂ ಭೂಮಿ ಮಂಜುನಾಥ ಶೇ. ೯೦.೪ (ತೃತೀಯ) ಸ್ಥಾನ ಪಡೆದಿದ್ದಾರೆ. ಹನ್ನೆರಡನೇ ತರಗತಿ ವಾಣಿಜ್ಯ ವಿಭಾಗದಲ್ಲಿ ರಚನಾ ಶೇ. ೯೨.೨ (ಪ್ರಥಮ), ಪ್ರಥಮ್ ಹೆಬ್ಬಾರ್ ಶೇ. ೯೦.೪ (ದ್ವಿತೀಯ) ಹಾಗೂ ರೋಹಿತ್ ಕೆ.ಎಸ್. ಶೇ. ೮೭.೨ (ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಒ.ಎಂ. ಪಂಕಜಾಕ್ಷನ್ ಅಭಿನಂದಿಸಿದ್ದಾರೆ.