ಶಾಲೆಯು ವಿದ್ಯಾರ್ಥಿಗಳಿಗೆ ಜೀವನದ ಮೂಲಭೂತ ಅಂಶಗಳನ್ನು ಕಲಿಸುವ ಸ್ಥಳವಾಗಿದೆ. ಜೊತೆಗೆ ಜೀವನದಲ್ಲಿ ಹೇಗೆ ಬೆಳೆಯಬೇಕು, ಹೇಗೆ ಬದುಕಬೇಕು ಎಂಬುದನ್ನು ಕಲಿಸುವ ಮಂದಿರ. ಮಗುವಿನ ಬೆಳವಣಿಗೆಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಮೌಲ್ಯಗಳು ಮತ್ತು ತತ್ವಗಳನ್ನು ತುಂಬುವ ಮನೆ. ಶಾಲೆಯು ನಮ್ಮ ಬಾಲ್ಯದ ಆರಂಭದಿAದ ಜೀವನದ ಅಂತ್ಯದವರೆಗೆ ನಮ್ಮೊಂದಿಗಿರುವ ಸ್ನೇಹಿತ.

ಶಾಲೆಯಲ್ಲಿ ಮಕ್ಕಳು ಎಲ್ಲ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳುವ ಮತ್ತು ನಿರಂತರವಾಗಿ ಒಬ್ಬರನ್ನೊಬ್ಬರು ಅವಲಂಬಿಸುವ ಅನಿವಾರ್ಯತೆ ಇದೆ. ಜೀವನದಲ್ಲಿ ಬರುವ ಕಷ್ಟಗಳನ್ನು ಸಲೀಸಾಗಿ ಜಯಿಸಲು, ಸಂತೋಷದ ಕ್ಷಣಗಳನ್ನು ಒಟ್ಟಿಗೆ ಹಂಚಿಕೊಳ್ಳಲು ಮತ್ತು ಹೊಸ ಮಾರ್ಗಗಳಿಗಾಗಿ ಎದುರು ನೋಡುವುದರಲ್ಲಿ ಮಕ್ಕಳಿಗೆ ಸಹಾಯ ಮಾಡುತ್ತದೆ. ಜ್ಞಾನ ಮತ್ತು ನೈತಿಕ ನಡವಳಿಕೆಯನ್ನು ನೀಡುವ ಶಿಕ್ಷಣದ ದೀಪ ಸ್ತಂಭವಾಗಿದೆ, ಮಕ್ಕಳು ಪರಸ್ಪರ ಭಾವನಾತ್ಮಕವಾಗಿ ಮೌಲ್ಯಯುತವಾಗಿ ಬೆಳೆಯಬೇಕಾದರೆ ಮಾತನಾಡುವ ಭಾಷೆಯು ಒಂದು ಕೊಂಡಿಯಾಗಿರುತ್ತದೆ. ಅದರೊಂದಿಗೆ ಸ್ವಾತಂತ್ರ‍್ಯವಾಗಿ, ಆತ್ಮವಿಶ್ವಾಸದೊಂದಿಗೆ ಮುನ್ನುಗುವ ಎದೆಗಾರಿಕೆಯನ್ನು ಮಕ್ಕಳಿಗೆ ಕಲಿಸಬೇಕಾದರೆ ಅದಕ್ಕೆ ಸೂಕ್ತವಾದ ಒತ್ತಡ ಮುಕ್ತ, ಆಕರ್ಷಕ ವಾತಾವರಣವನ್ನು ಕಲ್ಪಿಸಿ ಕೊಡಬೇಕಾಗುತ್ತದೆ. ಅಂತಹ ನಿರ್ಮಲವಾದ ಪರಿಸರ ನಮ್ಮ ಸರ್ಕಾರಿ ಶಾಲೆಗಳಲ್ಲಿದೆ .ಸರ್ಕಾರಿ ಶಾಲೆ ಎಂದ ಕೂಡಲೇ, ಮೊಗೆದಷ್ಟು ಮುಗಿಯದ ಮೂಲಭೂತವಾಗಿ ನಮ್ಮ ಮುಖದಲ್ಲಿ ನಗು ಮೂಡಿಸುವ ನೆನಪುಗಳ ಸಂಗ್ರಹವಾಗಿದೆ. ಅಂಗೈಯಲ್ಲಿ ಬುಗುರಿ ಆಡಿಸಿ ಜಗತ್ತನ್ನೇ ಗೆದ್ದಷ್ಟು ಖುಷಿಪಟ್ಟಿದ್ದೇವೆ. ಛತ್ರಿ ಇದ್ದರೂ ಮಳೆಯಲ್ಲಿ ನೆನೆಯುತ್ತಾ ಆಟ ಆಡಿ ವಿಶ್ವಕಪ್ ಗೆದ್ದಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಿ ಶಾಲೆಯು ಶ್ರೇಷ್ಠತೆಯ, ನಮ್ಮ ಸಂಸ್ಕೃತಿಯನ್ನು ರೂಪಿಸುವ, ಸಮಗ್ರ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬದ್ಧತೆಯನ್ನು ಒತ್ತಿ ಹೇಳುವ ಅಗತ್ಯ ಗುಣಗಳ ಉತ್ಪನ್ನವಾಗಿದೆ. ಸರಿಯಾದ ವ್ಯಕ್ತಿಯನ್ನು ಸರಿಯಾದ ಸ್ಥಾನದಲ್ಲಿ ಇರಿಸಲು ಆದ್ಯತೆ ನೀಡಿದೆ. ಶಾಲೆಯಲ್ಲಿ ಕಲಿತದ್ದೆಲ್ಲವನ್ನು ಮರೆತ ನಂತರವೂ ನಮ್ಮಲ್ಲಿ ಉಳಿಯಬೇಕಾದ ನಯ, ವಿನಯ, ಗುಣ, ಗಾಂಭೀರ್ಯದAತಹ ಜೀವನ ಮೌಲ್ಯವನ್ನು ಸರ್ಕಾರಿ ಶಾಲೆ ನೀಡಿದೆ. ಅಂದಿನಿAದ ಇಂದಿನ ತನಕವೂ ಸರ್ಕಾರಿ ಶಾಲೆಗಳ ಮತ್ತು ಇಲ್ಲಿ ಕಲಿಯುವ ವಿದ್ಯಾರ್ಥಿಗಳ ಮೌಲಿಕ ಗುಣಮಟ್ಟದ ಶಿಕ್ಷಣದಲ್ಲಿ ಖಾಸಗಿಯವರಿಗಿಂತ ನೂರು ಹೆಜ್ಜೆ ಮುಂದಿಟ್ಟಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಗೊಂಡು ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಕಲ ಸವಲತ್ತುಗಳು ದೊರೆಯುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸವಲತ್ತು ಸೌಲಭ್ಯಗಳನ್ನು ಗಮನಿಸಿದರೆ ಇದೇ ಶಾಲೆಗೆ ದಾಖಲಿಸಬೇಕೆಂಬ ಹಂಬಲ ಉಂಟಾಗುವುದು ಸಹಜ. ಅಷ್ಟರಮಟ್ಟಿಗೆ ಸೌಲಭ್ಯಗಳು ಅಲ್ಲಿವೆ. ಒಬ್ಬ ವಿದ್ಯಾರ್ಥಿ ಆ ಶಾಲೆಗೆ ದಾಖಲಾದ ಕೂಡಲೇ ಉಚಿತ ಪಠ್ಯಪುಸ್ತಕ ಸಿಗುತ್ತದೆ ಸಮವಸ್ತç ಸಿಗುತ್ತದೆ ಬ್ಯಾಗು, ಶೂ, ಮಧ್ಯಾಹ್ನ ಅಕ್ಷರ ದಾಸೋಹದ ಬಿಸಿ ಊಟ, ಹಾಲು, ಮೊಟ್ಟೆ, ಬಸ್ ಪಾಸು ಇತ್ಯಾದಿ ಸೌಲಭ್ಯಗಳು ಸಿಗುತ್ತದೆ. ಹಿಂದೆಲ್ಲಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಈಗ ಹಾಲು-ಮಾತ್ರೆಯಿಂದ ಹಿಡಿದು ಬಿಸಿ ಊಟದವರೆಗೆ ಶಾಲೆಯಲ್ಲಿ ಸಿಗುತ್ತಿರುವಾಗ ವಿದ್ಯಾರ್ಥಿಗಳ ಆರೋಗ್ಯವು ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ವ್ಯಾಸಂಗಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಇದರ ಜೊತೆಗೆ ಉಚಿತ ಸೈಕಲ್ ವಿತರಣೆ, ಪ್ರವಾಸಗಳು, ಜಿಲ್ಲಾ ದರ್ಶನ, ಕರ್ನಾಟಕ ರಾಜ್ಯ ದರ್ಶನ, ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪ್ರತಿಭಾ ಕಾರಂಜಿ, ವಿವಿಧ ವಿದ್ಯಾರ್ಥಿ ವೇತನಗಳು, ಹಾಜರಾತಿ, ಶಿಷ್ಯವೇತನ, ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್ ವಿತರಣೆ ಇಂತಹ ಅನೇಕ ಯೋಜನೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿವೆ. ವಿದ್ಯಾರ್ಥಿ ವೇತನಗಳು ಮಕ್ಕಳ ಇತರ ವೆಚ್ಚಗಳನ್ನು ಸರಿದೂಗಿಸಲು ಸಹಕಾರಿಯಾಗುತ್ತಿದೆ. ವಿಶೇಷವಾಗಿ ಇಂತಹ ಸವಲತ್ತುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು ಹೆಚ್ಚು ಅಂಕಗಳಿಸುವತ್ತ ಇವೆಲ್ಲವೂ ಪೂರಕ ವಾತಾವರಣ ಸೃಷ್ಟಿಸಿವೆ.

ಶಿಕ್ಷಕರಿಗೆ ತರಬೇತಿ

ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕರು ನಿಗದಿತ ವಿದ್ಯಾರ್ಹತೆಯೊಂದಿಗೆ ಕಾಲಕಾಲದ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಪದವಿ ಪಡೆದವರೆಲ್ಲ ಶಿಕ್ಷಕರಾಗಲು ಅರ್ಹರಾಗಿರುವುದಿಲ್ಲ ಪದವಿ ಜೊತೆಗೆ ಸರ್ಕಾರ ನಿಗದಿಪಡಿಸಿರುವ ಕೋರ್ಸ್ ಅಧ್ಯಯನ ಮಾಡಬೇಕು. ಟಿಇಟಿಯಲ್ಲಿ ರ‍್ಯಾಂಕ್ ಪಡೆದಿರಬೇಕು, ಸಿಇಟಿ ಉತ್ತೀರ್ಣರಾಗಿರಬೇಕು. ಪರೀಕ್ಷೆಗಳನ್ನು ದಾಟಿ ಬಂದ ನಂತರ ಅವರಿಗೆ ತರಬೇತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಲ್ಯಾಪ್ ಟಾಪ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.

ವಿಷಯವಾರು ತರಬೇತಿ ನೀಡಲು ಮಾಸ್ಟರ್ ಟ್ರೆöÊನರ್‌ಗಳನ್ನು ಆಯ್ಕೆ ಮಾಡಲಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಈ ಹಿಂದೆ ಇದ್ದಷ್ಟು ಬಿಡುವು ಈಗ ಇಲ್ಲ. ಜವಾಬ್ದಾರಿಗಳು ಹೆಚ್ಚು ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವುದರಿಂದ ಹಿಡಿದು ಆಡಳಿತಾತ್ಮಕ ವ್ಯವಸ್ಥೆಯ ಹಾಗೂ ಹೋಗುಗಳ ಬಗ್ಗೆ ಗಮನಹರಿಸಬೇಕಾದ ಹೊಣೆಗಾರಿಕೆ ಇದೆ, ಹೀಗಾಗಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುತ್ತಿರುವ ಶಿಕ್ಷಕ ಸಮೂಹಕ್ಕೆ ತನ್ನ ಶಾಲೆ ಮಾದರಿಯಾಗಬೇಕು, ಹೆಚ್ಚು ಫಲಿತಾಂಶ ಬರಬೇಕು ಎಂಬ ಆಸೆ ಸಹಜವಾಗಿ ಚಿಗುರೊಡೆಯುತ್ತಿದೆ. ಅದಕ್ಕೆ ಪೂರಕವಾಗಿಯೇ ಚಟುವಟಿಕೆಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮೂಲಕ ಕಾಲಕಾಲಕ್ಕೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ.

ವಿಷಯವಾರು ತರಬೇತಿಗಳಿಗೆ ಒತ್ತುನೀಡಲಾಗುತ್ತದೆ. ಇದಕ್ಕಾಗಿಯೇ ವಿಶೇಷ ಯೋಜನೆಗಳು ಸರ್ಕಾರದಿಂದ ರೂಪಿತಗೊಂಡಿವೆ. ಶಿಕ್ಷಕರಿಗೆ ತರಬೇತಿ ಕೊಡಲೆಂದೇ, ಡಯಟ್ ಹೆಚ್ಚು ಉತ್ಸುಕವಾಗಿದ್ದು ಅಲ್ಲಿ ನೀಡುವ ಬೋಧನಾ ಕ್ರಮಗಳು ತರಬೇತಿಗಳು ಸಹ ಶಿಕ್ಷಕರ ಕ್ರಿಯಾಶೀಲತೆಗೆ ಸಹಕಾರಿಯಾಗಿವೆ. ಸರ್ಕಾರದ ಮಾರ್ಗಸೂಚಿಗಳು, ಕಟ್ಟುನಿಟ್ಟಿನ ಆದೇಶಗಳು ಏನೆಲ್ಲ ಇರಬಹುದು. ಆದರೆ ಶಿಕ್ಷಕ ವರ್ಗದಲ್ಲಿ ಒಂದು ಬದ್ಧತೆಯಂತೂ ಇದ್ದೇ ಇದೆ. ತಾನು ಸರ್ಕಾರದ ಋಣದಲ್ಲಿದ್ದೇನೆ, ಸರ್ಕಾರದ ಅನ್ನ ತಿನ್ನುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಸರ್ಕಾರಿ ಶಾಲೆಯಲ್ಲಿ ಕಲಿಯಲು ಬರುವುದರಿಂದ ಆ ಮಗುವನ್ನು ಹೇಗಾದರೂ ಮುಖ್ಯ ವಾಹಿನಿಗೆ ತರಬೇಕೆಂಬ ತುಡಿತ ಕೂಡ ಇರುತ್ತದೆ ಚಟುವಟಿಕೆ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ನಲಿಕಲಿ ಎಂಬ ಶಿಕ್ಷಣ ವ್ಯವಸ್ಥೆ ಇದೆ.

ವಿಜ್ಞಾನ ಪ್ರಯೋಗಾಲಯ

ಬಾಲ್ಯದಲ್ಲಿ ವಿಜ್ಞಾನದತ್ತ ಪ್ರತಿಭೆಯನ್ನು ಆಕರ್ಷಿಸುವುದು ಮತ್ತು ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ನೆಲೆಯನ್ನು ಬಲಪಡಿಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹವನ್ನು ರಚಿಸುವ ಉದ್ದೇಶದಿಂದ ಭಾರತ ಸರ್ಕಾರವು ಎಸ್‌ಸಿ-ಎಟಿ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷವೂ ಇನ್ಸ್ಫೈರ್ ಅವಾರ್ಡ್ ನೀಡುತ್ತಿದೆ ಇದು ವಿದ್ಯಾರ್ಥಿಗಳು ಸಾಮಾನ್ಯ ಸಮಸ್ಯೆಗಳನ್ನ ಪರಿಹರಿಸಬಹುದಾದ ಮೂಲ ಮತ್ತು ಸೃಜನಶೀಲ ತಾಂತ್ರಿಕ ಕಲ್ಪನೆಗಳು ಅಥವಾ ನಾವಿನ್ಯತೆಗಳನ್ನು ಕಳುಹಿಸಲು ಪ್ರೋತ್ಸಾಹಿಸುತ್ತದೆ. ವಿಜ್ಞಾನ ಚಟುವಟಿಕೆಗಳನ್ನು ನಡೆಸಲು ಶಾಲೆಗಳಲ್ಲಿ ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ ಕೂಡ ಇದೆ.

ಇಕೋ ಕ್ಲಬ್

ಭವಿಷ್ಯದ ಪೀಳಿಗೆಯಲ್ಲಿ ಪರಿಸರ ಜಾಗೃತಿ ಮೂಡಿಸಲು ಮರಗಳನ್ನು ನೆಡುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿಡಲು, ವಿದ್ಯಾರ್ಥಿಗಳನ್ನು ಪ್ರೇರೇಪಿಸಲು, ಉಸಿರಾಟ ಸಂಬAಧಿ ಕಾಯಿಲೆಗಳಿಗೆ ಕಾರಣವಾಗುವ ತ್ಯಾಜ್ಯವನ್ನು ವಿವೇಚನಾ ರಹಿತವಾಗಿ ಸುಡುವುದನ್ನು ನಿಲ್ಲಿಸಲು, ತ್ಯಾಜ್ಯ ಉತ್ಪಾದನೆ, ತ್ಯಾಜ್ಯದ ಮೂಲ ಬೇರ್ಪಡಿಸುವಿಕೆ ಮತ್ತು ತ್ಯಾಜ್ಯವನ್ನು ಹತ್ತಿರದ ಶೇಖರಣ ಕೇಂದ್ರಕ್ಕೆ ವಿಲೇವಾರಿ ಮಾಡಲು, ಅಭ್ಯಾಸಗಳು ಮತ್ತು ಜೀವನ ಶೈಲಿಯನ್ನು ಅಳವಡಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಶಾಲೆಗಳಲ್ಲಿ ಇಕೋ ಕ್ಲಬ್ ಚಟುವಟಿಕೆಗಳನ್ನು ಹಮ್ಮಿಕೊಂಡು ಶೈಕ್ಷಣಿಕ ಚಟುವಟಿಕೆಯೊಂದಿಗೆ ಪರಿಸರ ಕಾಳಜಿ ಮೂಡಿಸಲಾಗುತ್ತದೆ

ಕ್ರೀಡೆ

ಸ್ಪರ್ಧಾತ್ಮಕವಾದ ಶೈಕ್ಷಣಿಕ ಜಗತ್ತಿನಲ್ಲಿ ಪ್ರತಿ ಮಗು ಸರ್ವತೋಮುಖವಾಗಿ ಬೆಳೆಯಲು ಪ್ರೋತ್ಸಾಹಿಸಲ್ಪಡಬೇಕು .ಆಧುನಿಕ ಶೈಕ್ಷಣಿಕ ಭೂ ದೃಶ್ಯದಲ್ಲಿ ಕ್ರೀಡೆಯು ಮಗುವಿನ ಸಮಗ್ರ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಆಧುನಿಕ ಶ್ರೀಮಂತ ಆಟಗಳೊಂದಿಗೆ ಗ್ರಾಮೀಣ ಕ್ರೀಡೆಗಳಾದ ಖೋ-ಖೋ, ಕಬಡ್ಡಿ, ಬುಗುರಿ, ಗೋಲಿ, ಚಿನ್ನಿದಾಂಡು ಸರ್ಕಾರಿ ಶಾಲೆಯಲ್ಲಿ ಇನ್ನೂ ಜೀವಂತವಾಗಿವೆ. ಶಾಲೆಯಲ್ಲಿ ಶಿಕ್ಷಣವು ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ ಎಂದು ಗುರುತಿಸಿ ಸರ್ಕಾರವು ಮುಂದುವರಿದ ಯೋಜನೆ ಅಡಿಯಲ್ಲಿ ಸುಸಜ್ಜಿತ ಕ್ರೀಡಾ ಕೊಠಡಿ, ಉನ್ನತ ದರ್ಜೆಯ ಕ್ರೀಡಾ ಸಾಮಗ್ರಿಗಳು, ವಿಶಾಲವಾದ ಆಟದ ಮೈದಾನ ಮತ್ತು ಉತ್ಕೃಷ್ಟ ತರಬೇತಿ ಶಿಕ್ಷಕರನ್ನು ನೇಮಿಸುತ್ತಿದೆ.

ಶಾಲಾ ಗ್ರಂಥಾಲಯ

ಜಾಗತೀಕರಣಗೊAಡ, ಬಹು ಸಾಂಸ್ಕೃತಿಕ ಮತ್ತು ಅನಿಶ್ಚಿತ ಜಗತ್ತಿನಲ್ಲಿ ವಿದ್ಯಾರ್ಥಿಗಳ ಅರಿವಿನ ಸಾಂಕೃತಿಕ, ಸಾಮಾಜಿಕ, ಪರಿಣಾಮಕಾರಿ ತಾಂತ್ರಿಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನು ಮೌಲಿಕರಿಸುವ ಕಲಿಕೆಯ ಕಾರ್ಯಕ್ರಮಕ್ಕೆ ಅಗತ್ಯವಾದ ಬಲವಾದ ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಶಾಲೆಗಳಲ್ಲಿ ವಿಶಾಲವಾದ ಗ್ರಂಥಾಲಯಗಳು ಇವೆ.

ಮಕ್ಕಳ ಆರೋಗ್ಯ ತಪಾಸಣೆ

ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ವಯಸ್ಸಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಲು ಪಿಹೆಚ್‌ಸಿಗಳು ಮತ್ತು ಆಸ್ಪತ್ರೆಗಳಿಗೆ ಸೂಕ್ತ ರೆಫ್ರರಲ್‌ಳೊಂದಿಗೆ ಅಪೌಷ್ಟಿಕತೆ ಮತ್ತು ರಕ್ತಹೀನತೆಯ ಮಕ್ಕಳನ್ನು ಗುರುತಿಸುವುದು ಸೇರಿದಂತೆ ಹದಿಹರೆಯದವರಲ್ಲಿ ಆರಂಭಿಕ ರೋಗಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಮಕ್ಕಳಿಗೆ ಉತ್ತಮ ಆರೋಗ್ಯ ಒದಗಿಸಲು ಪಣತೊಟ್ಟಿದೆ.

ಮೌಲ್ಯಮಾಪನ

ವಿದ್ಯಾರ್ಥಿಯ ಬೆಳವಣಿಗೆ ನಿರಂತರ ಪ್ರಕ್ರಿಯೆಯಾಗಿದೆ ಅದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪಡೆಯುವ ಅಂಕಗಳಿಗೆ ಪ್ರಾಮುಖ್ಯತೆ ಕೊಡುವ ಪದ್ಧತಿಯನ್ನು ಅನುಸರಿಸದೇ ಅವರ ಬೆಳವಣಿಗೆಯ ಬಹುತೇಕ ಎಲ್ಲಾ ಅಂಶಗಳಾದ ಸ್ಪಷ್ಟ ಓದು, ಶುದ್ಧ ಬರಹ, ತಪ್ಪಿಲ್ಲದ ಗಣಿತದ ಮೂಲ ಕ್ರಿಯೆಗಳು, ಗಣಕಯಂತ್ರ, ವಿಜ್ಞಾನ, ಜೈವಿಕ ತಂತ್ರಜ್ಞಾನ, ಜೀವನ ಕೌಶಲ್ಯ, ಸೃಜನಶೀಲತೆ, ಪರಸ್ಪರ ಹೊಂದಾಣಿಕೆ, ನಾವಿನ್ಯತೆ, ತಂಡದ ಕೆಲಸ, ನಡವಳಿಕೆ, ಅನುಭವದ ಕೌಶಲ್ಯ, ನಾಯಕತ್ವ, ಕಲೆ, ನೃತ್ಯ, ಸಂಗೀತ, ಕ್ರೀಡೆ, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಮತ್ತು ಇತರ ವಿವಿಧ ಕ್ಷೇತ್ರಗಳಲ್ಲಿ ತೋರಿದ ಪ್ರತಿಭೆ, ಒಟ್ಟಾರೆಯಾಗಿ ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಮುಗ್ಧ ಮನಸ್ಸಿಗೆ ನೋವಾಗದಂತೆ ಮೌಲ್ಯಮಾಪನ ಮಾಡಿ ಮಗುವನ್ನು ಹುರಿದುಂಬಿಸಿ ಪ್ರೋತ್ಸಾಹಿಸುವ ಅವಕಾಶ ಸರ್ಕಾರಿ ಶಾಲೆಯಲ್ಲಿದೆ.

ಸ್ಮಾರ್ಟ್ ಕ್ಲಾಸ್

ಮಗುವಿನ ತಂತ್ರಜ್ಞಾನ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಪ್ರತಿ ಶಾಲೆಯಲ್ಲೂ ಸ್ಮಾರ್ಟ್ ಕ್ಲಾಸ್ ಚಾಲ್ತಿಯಲ್ಲಿದೆ. ಹೀಗೆ ಸರ್ಕಾರಿ ಶಾಲೆಯಲ್ಲಿ ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕವಾಗಿ ಸದೃಢಗೊಳಿಸಲು ದೊರೆಯುವ ಸವಲತ್ತುಗಳು ಹತ್ತು ಹಲವು. ಹೀಗಿದ್ದು ಸಹ ಮಗುವಿನಲ್ಲಿರುವ ಮೌಲ್ಯಗಳನ್ನು ಮಾನ್ಯ ಮಾಡದೆ ಉರುವಲು ಹೊಡೆದು ಗಳಿಸಿದ ಅಂಕಗಳಿಗೆ ಬೆಲೆ ಕೊಡುವ ಪೋಷಕರು, ಆಂಗ್ಲ ಭಾಷಾ ವ್ಯಾಮೋಹ ಮತ್ತು ಖಾಸಗಿ ಶಾಲೆಗಳ ಭ್ರಮೆಯಲ್ಲಿರುವವರ ಅಪಪ್ರಚಾರದಿಂದ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಮತ್ತು ಅವರ ಪೋಷಕರೇ ವಾಸ್ತು ಸ್ಥಿತಿಯನ್ನು ಇತರರಿಗೆ ತಿಳಿಸಿ ಸರ್ಕಾರಿ ಶಾಲೆಗೆ ಮಕ್ಕಳು ಬರುವಂತೆ ಮಾಡಬೇಕು.

- ಅಲಿಮ ಪಿ.ಹೆಚ್., ದೈಹಿಕ ಶಿಕ್ಷಣ-ಯೋಗ ಶಿಕ್ಷಕಿ ಸ.ಹಿ.ಪ್ರಾ. ಶಾಲೆ ಕುಟ್ಟ. ಮೊ. ೯೭೪೧೬೬೪೧೭೩, ಜhಚಿಟಿushsಠಿ೨೦೦೨@gmಚಿiಟ.ಛಿom