ಶನಿವಾರಸಂತೆ, ಮೇ ೨೦: ಮಾನಸಿಕ ಸಮಸ್ಯೆ ಅನುಭವಿಸುತ್ತಿರುವ ಯುವಕನನ್ನು ರಕ್ಷಣೆ ಮಾಡಿ, ಮಡಿಕೇರಿಯ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇ ಗೌಡರ ಬಣ) ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮಾನವೀಯತೆ ಮೆರೆದಿದ್ದಾರೆ.

ಸೋಮವಾರಪೇಟೆ ಪಟ್ಟಣದ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಅನಾಥ ಯುವಕನ ಬಗ್ಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ವೃತ್ತ ನಿರೀಕ್ಷಕ ಪ್ರಹ್ಲಾದ್ ಅವರ ಗಮನಕ್ಕೆ ತಂದಿದ್ದರು. ಪೊಲೀಸ್ ಸಿಬ್ಬಂದಿ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಆತನಿಗೆ ಮಾನಸಿಕ ಸಮಸ್ಯೆ ಇರುವುದು ತಿಳಿದು ಬಂದಿದೆ. ತನ್ನ ಹೆಸರು ಹೇಮಂತ್, ತಂದೆ ಬೆಂಗಳೂರಿನ ಲಗ್ಗೆರೆ ನಿವಾಸಿಯಾದ ವೆಂಕಟಪ್ಪ ಹಾಗೂ ತಾಯಿ ಪವಿ ಎಂದು ತಿಳಿಸಿದ್ದಾರೆ. ಆದರೆ, ಯುವಕನ ಕಡೆಯವರು ಬಾರದ ಕಾರಣ, ವೃತ್ತನಿರೀಕ್ಷಕರು ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಯುವಕನನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಕೋರಿದ್ದರು. ಸ್ಪಂದಿಸಿದ ಫ್ರಾನ್ಸಿಸ್ ಡಿಸೋಜ ಮಡಿಕೇರಿಯ ಶಕ್ತಿ ಅನಾಥಾಶ್ರಮದ ವ್ಯವಸ್ಥಾಪಕ ಸತೀಶ್ ಅವರನ್ನು ಸಂಪರ್ಕಿಸಿ, ಅವರ ಅನುಮತಿ ಪಡೆದು ಯುವಕನನ್ನು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಯುವಕನ್ನು ಕರೆದೊಯ್ಯಲು ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊವರ್ ಅಸೋಸಿಯೇಶನ್ ಅಧ್ಯಕ್ಷ ರವಿ ಉಚಿತ ವಾಹನ ವ್ಯವಸ್ಥೆ ಮಾಡಿದರು. ಅಲ್ಲದೇ ಯುವಕನ ಬಗ್ಗೆ ಯಾರಾದರೂ ತಿಳಿದವರು ಇದ್ದರೆ ೯೬೮೬೦೯೫೮೩೧ ಸಂಖ್ಯೆಯನ್ನು ಸಂಪರ್ಕಿಸುವAತೆ ಫ್ರಾನ್ಸಿಸ್ ತಿಳಿಸಿದ್ದಾರೆ.