ಸೋಮವಾರಪೇಟೆ, ಮೇ ೧೯: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ಸೋಮವಾರಪೇಟೆ ಕಚೇರಿ ಹಾಗೂ ತಾಲೂಕು ಆಡಳಿತ ಸೌಧಕ್ಕೆ ಒತ್ತಿಕೊಂಡAತೆ ಇರುವ ಸೋಮ ವಾರಪೇಟೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಮೇಜರ್ ಸರ್ಜರಿಯ ಅವಶ್ಯಕತೆ ಎದುರಾಗಿದೆ.

ಈ ಕಚೇರಿಯಲ್ಲಿ ಇರುವ ಕೆಲವೊಂದು ಸಿಬ್ಬಂದಿ- ಅಧಿ ಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುತ್ತಿಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಮಧ್ಯೆ, ಸರ್ವೆ ಸೂಪರ್‌ವೈಸರ್‌ಗಾಗಿ ಸಾರ್ವ ಜನಿಕರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಈ ಕಚೇರಿಯಲ್ಲಿ ಸಮಯ ಪಾಲನೆ ಎಂಬುದು ದೂರದ ಮಾತಾಗಿದ್ದು, ನಿಗದಿತ ಸಮ ಯಕ್ಕೆ ಯಾರೊಬ್ಬರ ಕೆಲಸವೂ ಇಲ್ಲಿ ಮುಕ್ತಾಯಗೊಂಡಿಲ್ಲ. ಪ್ರತಿದಿನ ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟಕ್ಕೆ ತೆರಳುವ ಸರ್ವೆ ಸೂಪರ್‌ವೈಸರ್, ವಾಪಸ್ ಆಗುವ ಸಮಯ ಮಾತ್ರ ಹೇಳುವಂತಿಲ್ಲ.

ಆಕಾರ ಬಂಧು, ನಕಾಶೆ ಸೇರಿದಂತೆ ಸರ್ವೆ ಇಲಾಖೆಗೆ ಸೇರಿದ ಇತರ ಕೆಲಸ ಕಾರ್ಯಗಳಿಗೆ ಮಧ್ಯಾಹ್ನದ ಊಟವನ್ನೂ ಬಿಟ್ಟು ಈ ಕಚೇರಿಯ ಎದುರು ಸಾರ್ವಜನಿಕರು ಕಾಯುತ್ತಿರುತ್ತಾರೆ. ಇಡೀ ಸರ್ವೆ ಇಲಾಖೆಗೆ ಮುಖ್ಯಸ್ಥರಾಗಿರುವ ಎಡಿಎಲ್‌ಆರ್ ಅವರು ಸರಿಯಾದ ಸಮಯಕ್ಕೆ ಕಚೇರಿಯಲ್ಲಿ ಲಭ್ಯವಿರುತ್ತಾರೆ. ಆದರೆ ಸರ್ವೆ ಸೂಪರ್‌ವೈಸರ್ ಮಾತ್ರ ಬೇಕಾಬಿಟ್ಟಿ ಕೆಲಸಕ್ಕೆ ಆಗಮಿಸುತ್ತಿದ್ದಾರೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.

ನಿನ್ನೆ ಮಧ್ಯಾಹ್ನ ೧.೩೦ಕ್ಕೆ ಊಟಕ್ಕೆಂದು ತೆರಳಿದ ಸರ್ವೆ ಸೂಪರ್ ವೈಸರ್ ೩.೩೦ಕ್ಕೆ ವಾಪಸ್ಸಾದರು. ಬೇಕಾಬಿಟ್ಟಿ ಸಮಯದಲ್ಲಿ ಕಚೇರಿಗೆ ವಾಪಸ್ಸಾಗುವುದು ಎಷ್ಟು ಸರಿ? ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಸಮಯಕ್ಕೆ ಸರಿಯಾಗಿ ಆಗಮಿಸಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಲಿ. ನಾವುಗಳು ಗ್ರಾಮೀಣ ಭಾಗದಿಂದ ಬಸ್‌ನಲ್ಲಿ ಬಂದು ಇಲ್ಲಿ ಗಂಟೆಗಟ್ಟಲೆ ಕಾಯಬೇಕು. ಸಂಜೆ ವೇಳೆ ವಾಪಸ್ ತೆರಳಲು ಬಸ್ ಸೌಕರ್ಯಗಳೂ ಇರುವುದಿಲ್ಲ. ಈ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅವರು ಗಂಭೀರ ವಾಗಿ ಗಮನ ಹರಿಸಬೇಕು’ ಎಂದು ಶಾಂತಳ್ಳಿಯ ಸುರೇಶ್ ಆಗ್ರಹಿಸಿದರು.

ಒಟ್ಟಾರೆ ಗ್ರಾಮೀಣ ಭಾಗ ವಾಗಿರುವ ಸೋಮವಾರಪೇಟೆಯಲ್ಲಿ ಭೂ ದಾಖಲೆಗಳ ಸಮಸ್ಯೆ ಹೇಳತೀರದಷ್ಟಿದೆ. ಸರ್ವೆ ಇಲಾಖೆ ಸದಾ ಚಟುವಟಿಕೆಯಲ್ಲಿರಬೇಕಾದ ಪ್ರಮುಖ ಇಲಾಖೆಯಾಗಿದೆ. ಜಾಗಕ್ಕೆ ಸಂಬAಧಿಸಿದ ಪ್ರತಿಯೊಂದು ಕೆಲಸ ಕಾರ್ಯಗಳೂ ಇಲ್ಲಿಂದಲೇ ಆಗ ಬೇಕಿದೆ. ಸರ್ವೆಯರ್‌ಗಳ ಉಸ್ತುವಾರಿ ವಹಿಸಿರುವ ಸರ್ವೆ ಸೂಪರ್‌ವೈಸರ್ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಿದೆ.

ಇನ್ನಾದರೂ ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇರೆ ನಿರ್ವಹಿಸಲಿ, ಅದಕ್ಕೂ ಮೊದಲು ಶಾಸಕರು ಇತ್ತ ಗಮನ ಹರಿಸಿ ಇಲಾಖೆಗೆ ಮೇಜರ್ ಸರ್ಜರಿಯ ಅವಶ್ಯಕತೆ ಇದೆಯೇ..ಇಲ್ಲವೇ? ಎಂಬ ನಿರ್ಧಾರಕ್ಕೆ ಬರಲಿ!