ಕಣಿವೆ, ಮೇ ೨೦: ಆನೆಕಾಡು ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ತಪ್ಪದ ಜಾನುವಾರುಗಳ ಗೋಳು ಈಗ ಕುಶಾಲನಗರದ ರಾಜ್ಯ ಹೆದ್ದಾರಿಗೂ ಕಾಲಿಟ್ಟಿದೆ. ಬೀಡಾಡಿ ಜಾನುವಾರುಗಳು ಹೆದ್ದಾರಿಯ ಮಧ್ಯೆಯಲ್ಲೇ ಠಿಕಾಣಿ ಹೂಡುತ್ತಿರು ವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಐದಾರು ಹಸುಗಳಿರುವ ಈ ಗುಂಪಿನಲ್ಲಿ ಗೂಳಿಯೊಂದಿದ್ದು ಹಸುಗಳನ್ನು ಹೈರಾಣುಗೊಳಿಸುತ್ತಿದೆ. ಹಸುಗಳನ್ನು ಕಂಡರೆ ಅವುಗಳ ಮೈಮೇಲೆ ಎರಗಲು ಯತ್ನಿಸುವು ದರಿಂದ ಗೂಳಿಯಿಂದ ತಪ್ಪಿಸಿ ಕೊಳ್ಳಲು ಯತ್ನಿಸುವ ಬೀಡಾಡಿ ಹಸುಗಳು ಹೆದ್ದಾರಿಯಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು ವಾಹನ ಸವಾರರನ್ನು ಧೃತಿಗೆಡಿಸಿವೆ.
ಹಾಗಾಗಿ ಕುಶಾಲನಗರ ಪುರಸಭೆಯವರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಮತ್ತು ಹೆದ್ದಾರಿಯಲ್ಲೇ ಮಲಗುವ ಈ ಬೀಡಾಡಿ ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸ ಬೇಕೆಂಬುದು ವಾಹನ ಚಾಲಕರ ಒತ್ತಾಯವಾಗಿದೆ.