ಮಡಿಕೇರಿ, ಮೇ ೨೧: ಅದ್ವೆöÊತ್ ಹ್ಯುಂಡಯ್ ಸಂಸ್ಥೆ ವತಿಯಿಂದ ತಾ. ೨೨ರಂದು (ಇಂದು) ಮತ್ತು ೨೩ರಂದು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ರಾಮೀಣ ಉತ್ಸವದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಳಿಗ್ಗೆ ೧೦ ರಿಂದ ರಾತ್ರಿ ೧೦ ಗಂಟೆವರೆಗೆ ಎರಡು ದಿನಗಳ ಕಾಲ ಗ್ರಾಮೀಣ ಉತ್ಸವ ನಡೆಯುವ ಸಂದರ್ಭ ಮಕ್ಕಳಿಗೆ ಗೇಮ್ಸ್, ಡಾನ್ಸ್, ಆಹಾರ ಮೇಳ, ಮನೋರಂಜನಾ ಕಾರ್ಯಕ್ರಮಗಳು, ಮೋಜಿನ ಆಟಗಳನ್ನು ಏರ್ಪಡಿಸಲಾಗಿದೆ. ಜನರ ಆಕರ್ಷಣೆಗೆ ವಿಂಟೇಜ್ ಕಾರುಗಳ ಪ್ರದರ್ಶನ ಕೂಡಾ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರಾದ ಕರ್ನಾಟಕದ ಹ್ಯುಂಡಯ್ ಕಾರುಗಳ ಡೀಲರ್‌ಗಳಲ್ಲಿ ಮೊದಲ ಸ್ಥಾನದಲ್ಲಿರುವ ಅದ್ವೆöÊತ್ ಹ್ಯುಂಡಯ್ ಪ್ರಕಟಣೆಯಲ್ಲಿ ತಿಳಿಸಿದೆ. ತಾ. ೨೨ರಂದು ಬೆಳಿಗ್ಗೆ ೧೦ ಗಂಟೆಗೆ ಗ್ರಾಮೀಣ ಉತ್ಸವವನ್ನು ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಉದ್ಘಾಟಿಸಲಿದ್ದಾರೆ.

ಹ್ಯುಂಡಯ್ ಸಂಸ್ಥೆಯ ಎಲ್ಲ ವಿಭಾಗದ ಕಾರುಗಳ ಪ್ರದರ್ಶನ ಮತ್ತು ಉಚಿತ ವಾಹನ ತಪಾಸಣೆ ನಡೆಸಲಾಗುವುದು.