ಕುಶಾಲನಗರ, ಮೇ ೨೧: ಕೊಡಗು ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳವಣಿಗೆ ಕಂಡ, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಕುಶಾಲನಗರ ಹೋಬಳಿ, ತಾಲೂಕಾಗಿ ಪರಿವರ್ತನೆಗೊಂಡ ಬೆನ್ನಲ್ಲೇ ಪಟ್ಟಣದ ಹೊರವಲಯದ ಹಳ್ಳಕೊಳ್ಳ ಜಾಗಗಳು ಅವೈಜ್ಞಾನಿಕವಾಗಿ ಬೆಳವಣಿಗೆ ಕಾಣ ತೊಡಗಿವೆ. ಸುತ್ತಮುತ್ತಲ ಬೆಟ್ಟಗಳನ್ನು ಅಗೆದು, ಹಳ್ಳ ಕೊಳ್ಳಗಳನ್ನು ಮುಚ್ಚಿ ಬಡಾವಣೆಗಳ ನಿರ್ಮಾಣವಾಗುತ್ತಿವೆ.
ಇದಕ್ಕೆ ವ್ಯತಿರಿಕ್ತವಾಗಿ ಸುತ್ತಮುತ್ತಲ ವ್ಯಾಪ್ತಿಯ ತಗ್ಗು ಪ್ರದೇಶಗಳ ಬಡಾವಣೆಗಳಲ್ಲಿ ನಿರ್ಮಾಣಗೊಂಡ ಮನೆಗಳು ಆರಂಭದ ಮಳೆಯಲ್ಲಿಯೇ ಜಲಾವೃತಗೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಬಹುತೇಕ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ.
ಆರಂಭದಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ೩೦ ರಿಂದ ೩೫ ಬಡಾವಣೆಗಳು ಕೇವಲ ೧೬ ವಾರ್ಡ್ðಗಳಲ್ಲಿ ಕಂಡು ಬಂದಿದ್ದವು. ಇವುಗಳಲ್ಲಿ ಬಹುತೇಕ ಬಡಾವಣೆಗಳಲ್ಲಿ ಮೂಲಸೌಕರ್ಯದ ಕೊರತೆ ಎದ್ದು ಕಂಡುಬರುತ್ತಿದೆ.
ಬೆಟ್ಟವನ್ನು ಅಗೆದು ತಗ್ಗು ಪ್ರದೇಶಗಳನ್ನು ತುಂಬಿ ಬಡಾವಣೆ ಮಾಡಿ ನಿವೇಶನ ಮಾಡುವ ಹುನ್ನಾರ ನಿರಂತರವಾಗಿ ನಡೆಯುತ್ತಿದ್ದು ಕುಶಾಲನಗರ ತಗ್ಗು ಪ್ರದೇಶದ ಕೆಲವು ಬಡಾವಣೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸತೊಡಗಿದೆ.
೨೦೦೯ರಲ್ಲಿ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಆರಂಭಗೊAಡ ನಂತರ ಹೆಚ್ಚುವರಿಯಾಗಿ ಸುಮಾರು ೩೦ ಬಡಾವಣೆಗಳು ನಿರ್ಮಾಣಗೊಂಡಿವೆ. ಹಲವು ಬಡಾವಣೆಗಳು ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ನಾಗರಿಕರಿಗೆ ನಿವೇಶನಗಳನ್ನು ಒದಗಿಸುವ ಕಾಯಕದಲ್ಲಿ ತಲ್ಲೀನವಾಗಿವೆ. ವ್ಯವಹಾರದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಭೂ ಮಾಫಿಯಾ ದಂಧೆಗಳು ಜನರನ್ನು ವಂಚಿಸುವ ಕಾಯಕದಲ್ಲಿ ತೊಡಗಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಬಡಾವಣೆಗಳ ಪೂರ್ವಾಪರ ತಿಳಿಯದೆ ನಿವೇಶನಗಳನ್ನು ಖರೀದಿಸಿ ಕೈ ಸುಟ್ಟುಕೊಳ್ಳುತ್ತಿರುವ ಮಂದಿಯ ಸಂಖ್ಯೆ ಕುಶಾಲನಗರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ.
ಬಡಾವಣೆಗಳಲ್ಲಿ ನಿರ್ಮಾಣಗೊಂಡ ಮನೆಗಳು ಆರಂಭದ ಮಳೆಯಲ್ಲಿಯೇ ಜಲಾವೃತಗೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಬಹುತೇಕ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ.
ಆರಂಭದಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ೩೦ ರಿಂದ ೩೫ ಬಡಾವಣೆಗಳು ಕೇವಲ ೧೬ ವಾರ್ಡ್ðಗಳಲ್ಲಿ ಕಂಡು ಬಂದಿದ್ದವು. ಇವುಗಳಲ್ಲಿ ಬಹುತೇಕ ಬಡಾವಣೆಗಳಲ್ಲಿ ಮೂಲಸೌಕರ್ಯದ ಕೊರತೆ ಎದ್ದು ಕಂಡುಬರುತ್ತಿದೆ.
ಬೆಟ್ಟವನ್ನು ಅಗೆದು ತಗ್ಗು ಪ್ರದೇಶಗಳನ್ನು ತುಂಬಿ ಬಡಾವಣೆ ಮಾಡಿ ನಿವೇಶನ ಮಾಡುವ ಹುನ್ನಾರ ನಿರಂತರವಾಗಿ ನಡೆಯುತ್ತಿದ್ದು ಕುಶಾಲನಗರ ತಗ್ಗು ಪ್ರದೇಶದ ಕೆಲವು ಬಡಾವಣೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸತೊಡಗಿದೆ.
೨೦೦೯ರಲ್ಲಿ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಆರಂಭಗೊAಡ ನಂತರ ಹೆಚ್ಚುವರಿಯಾಗಿ ಸುಮಾರು ೩೦ ಬಡಾವಣೆಗಳು ನಿರ್ಮಾಣಗೊಂಡಿವೆ. ಹಲವು ಬಡಾವಣೆಗಳು ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ನಾಗರಿಕರಿಗೆ ನಿವೇಶನಗಳನ್ನು ಒದಗಿಸುವ ಕಾಯಕದಲ್ಲಿ ತಲ್ಲೀನವಾಗಿವೆ. ವ್ಯವಹಾರದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಭೂ ಮಾಫಿಯಾ ದಂಧೆಗಳು ಜನರನ್ನು ವಂಚಿಸುವ ಕಾಯಕದಲ್ಲಿ ತೊಡಗಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಬಡಾವಣೆಗಳ ಪೂರ್ವಾಪರ ತಿಳಿಯದೆ ನಿವೇಶನಗಳನ್ನು ಖರೀದಿಸಿ ಕೈ ಸುಟ್ಟುಕೊಳ್ಳುತ್ತಿರುವ ಮಂದಿಯ ಸಂಖ್ಯೆ ಕುಶಾಲನಗರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ.
ಬಡಾವಣೆಗಳಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲ. ರಸ್ತೆ, ಸಂಪರ್ಕ ಸಮಸ್ಯೆ ಎಲ್ಲದಕ್ಕಿಂತಲೂ ಮಿಗಿಲಾಗಿ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಆಗದೆ ಸಂಪೂರ್ಣ ಕಲುಷಿತ ತ್ಯಾಜ್ಯ ನದಿ ಒಡಲು ಅಥವಾ ಅರಣ್ಯಕ್ಕೆ ಸೇರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
(ಮೊದಲ ಪುಟದಿಂದ) ಕುಶಾಲನಗರ ಸಮೀಪ ಹಾರಂಗಿ ರಸ್ತೆ ಬದಿಯಲ್ಲಿರುವ ಬಡಾವಣೆಯೊಂದು ಕಲುಷಿತ ನೀರು ಹಾಗೂ ತ್ಯಾಜ್ಯ ವಸ್ತುಗಳನ್ನು ಚಿಕ್ಲಿ ಹೊಳೆಗೆ ಸಂಬAಧಿಸಿದ ಕಾಲುವೆಗೆ ಹರಿಸುತ್ತಿರುವ ದೃಶ್ಯ ಕಾಣಬಹುದು.
ಇದೀಗ ಸುಮಾರು ನೂರಾರು ಎಕರೆ ವ್ಯಾಪ್ತಿಯ ಮಳೆ ನೀರು ಹರಿಯಲು ಪ್ರಾಕೃತಿಕವಾದ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ರಸ್ತೆ ಮೇಲೆ ಮನೆ ನುಗ್ಗಿ ಹರಿಯುವ ದೃಶ್ಯ ಕಂಡು ಬಂದಿದೆ.
ಕೆರೆಗಳ ಒತ್ತುವರಿ ಜಲಮೂಲಗಳ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬುವುದು ಈ ಮೂಲಕ ಕೆರೆಗಳು ಸಂಪೂರ್ಣ ಕಲುಷಿತವಾಗುವುದರೊಂದಿಗೆ ಮಳೆಗಾಲದಲ್ಲಿ ಹರಿಯುವ ನೀರು ದಿಕ್ಕಾ ಪಾಲಾಗಿ ಹರಿಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಕುಶಾಲನಗರದ ತಾವರೆಕೆರೆ, ಸೋಮದೇವನಕೆರೆ ವ್ಯಾಪ್ತಿಯಲ್ಲಿ ಜಲ ಮೂಲಗಳಿಗೆ ಸಂಪೂರ್ಣ ಅಡ್ಡಿ ಮಾಡುವ ಮೂಲಕ ಕೆಲವು ಕಡೆ ಬಡಾವಣೆಗಳು ನಿರ್ಮಾಣಗೊಂಡಿವೆ. ಇದರಿಂದ ಮನೆ ಕಟ್ಟುವ ಮಾಲೀಕರು ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಅನಾಹುತವನ್ನು ಎದುರಿಸುವ ಕಾಲ ಬಂದೊದಗಲಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.
ನೂತನ ಬಡಾವಣೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಬೇಕಾದ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ನೆರೆಯ ಕೊಪ್ಪ ಆವರ್ತಿ, ಮುತ್ತಿನ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯಲ್ಲಿ ಸಾವಿರಾರು ಲೋಡುಗಳಷ್ಟು ಮಣ್ಣು ತುಂಬಿ ಬಡಾವಣೆ ನಿರ್ಮಾಣ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು ಇದರಿಂದ ಕುಶಾಲನಗರದ ತಗ್ಗು ಪ್ರದೇಶಗಳು ಸಂಪೂರ್ಣ ನಾಶಗೊಳ್ಳÀಲಿದೆ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಸ್ ರಾಜೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ಕೆಳಗಡೆ ತಗ್ಗು ಪ್ರದೇಶಗಳಿಗೆ ಹತ್ತರಿಂದ ಹದಿನೈದು ಅಡಿಗಳಷ್ಟು ಎತ್ತರಕ್ಕೆ ಮಣ್ಣು ತುಂಬುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಈ ನಿಟ್ಟಿನಲ್ಲಿ ಎರಡು ಜಿಲ್ಲೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ಹಿರಿಯರು ಯಾವುದೇ ಸೌಕರ್ಯಗಳು ಆರ್ಥಿಕ ವ್ಯವಸ್ಥೆ ಇಲ್ಲದಿದ್ದರೂ ಊರುಗುಪ್ಪೆ ಜಾಗದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿದ್ದು ಕುಶಾಲನಗರದ ಮಾದಪಟ್ಟಣ ಬೈಚನಹಳ್ಳಿ ಮುಳ್ಳು ಸೋಗೆ ಗ್ರಾಮಗಳಲ್ಲಿ ಕಾಣಬಹುದು. ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಕೃತಿ ದುರಂತಗಳು ಇದುವರೆಗೂ ಕಂಡು ಬಂದಿಲ್ಲ.
ಕುಶಾಲನಗರ ಪುರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ಪ್ರಸಕ್ತ ೬೧ ಬಡಾವಣೆಗಳು ನಿರ್ಮಾಣವಾಗಿದ್ದು, ಇವುಗಳಲ್ಲಿ ನಿಯಮ ಬಾಹಿರವಾಗಿ ನಿರ್ಮಾಣವಾಗಿರುವ ಬಡಾವಣೆಗಳು ಅಧಿಕವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ವಿಶೇಷ ಟಾಸ್ಕ್ ಪೋಸ್ಟ್ ರಚಿಸಿ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಆಸಿಫ್ ಆಗ್ರಹಿಸಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ನಡುವೆ ಕುಶಾಲನಗರದ ಹೊರವಲಯವಾದ ಗುಮ್ಮನಕೊಲ್ಲಿ ಮತ್ತಿತರ ತಗ್ಗು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ನೀರು ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸಿರುವುದು ಇವೆಲ್ಲ ವಿಷಯಗಳಿಗೆ ಪುಷ್ಟಿ ನೀಡುತ್ತಿದೆ.
ಬಡಾವಣೆಗಳ ನಿರ್ಮಾಣ ಸಂದರ್ಭ ಜಲಮೂಲಗಳ ಪ್ರದೇಶಗಳಿಗೆ ಮಣ್ಣು ತುಂಬುವುದು, ಕಡಂಗ ಒತ್ತುವರಿ ಮಾಡುವುದು, ನದಿ ತಟ ರಾಜ ಕಾಲುವೆಗಳ ಒತ್ತುವರಿ ಮಾಡುವ ಮೂಲಕ ಹಾಗೂ ಪಟ್ಟಣ ಮತ್ತಿತರ ಗ್ರಾಮಗಳ ರಸ್ತೆಗಳು ಬಹುತೇಕ ಕಾಂಕ್ರೀಟಿಕರಣವಾಗಿರುವ ಹಿನ್ನೆಲೆಯಲ್ಲಿ ನೀರು ಭೂಮಿಗೆ ಸೇರುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಜಲಪ್ರಳಯ ನಿರಂತರವಾಗಿ ಕಾಡಬಹುದು. ಬಹುತೇಕ ವಾರ್ಡ್ಗಳಲ್ಲಿ ಮತ್ತು ಬಡಾವಣೆಗಳಲ್ಲಿ ಚರಂಡಿಗಳು ಸುಸ್ಥಿತಿಯಲ್ಲಿದ್ದರೂ ಬೆಟ್ಟಗಳ ಕಡೆಯಿಂದ ಬರುತ್ತಿರುವ ಮಳೆ ನೀರು ನೇರವಾಗಿ ಬಡಾವಣೆಗಳ ಮೂಲಕ ಹರಿದು ರಸ್ತೆ ಮೇಲೆ ನಂತರ ಮನೆಗಳಿಗೆ ಮುನ್ನುಗುತ್ತಿರುವುದು ಕಂಡುಬAದಿದೆ ಎನ್ನುತ್ತಾರೆ ಕುಶಾಲನಗರ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್. ನಿರ್ವಹಣೆ ಆಗದಿರುವ ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನದಿ ತಟಗಳಲ್ಲಿ ಮಣ್ಣು ತುಂಬಿ ನಿರ್ಮಾಣ ಗೊಂಡಿರುವ ಪ್ರವಾಸಿ ಕೇಂದ್ರಗಳು ಮತ್ತಿತರ ವಾಣಿಜ್ಯ ಕಟ್ಟಡಗಳು ಸರಾಗವಾಗಿ ಮಳೆ ನೀರು ಹರಿಯಲು ಅಡ್ಡಿಯುಂಟು ಮಾಡಿದೆ ಎಂದು ಕುಶಾಲನಗರದ ಸಮಾಜಸೇವಕ ಕೆ.ಜಿ. ಮನು ಹೇಳುತ್ತಾರೆ.
ಮಾದಾಪಟ್ಟಣ ಗೊಂದಿಬಸವನಹಳ್ಳಿ ಬೈಚನಹಳ್ಳಿ ಮುಳ್ಳುಸೋಗೆ ಕೂಡ್ಲೂರು ಕೂಡ ಮಂಗಳೂರು ವ್ಯಾಪ್ತಿಯಲ್ಲಿ ೨೫ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬಹುತೇಕ ಬಡಾವಣೆಗಳು ಸುಸ್ಥಿತಿಯಲ್ಲಿ ಕಂಡುಬAದಿದ್ದು ಹೆಚ್ಚುವರಿಯಾಗಿ ಅಕ್ರಮ ಮತ್ತು ನಿಯಮ ಬಾಹಿರವಾಗಿ ಕೆಲವೆಡೆ ಬಡಾವಣೆಗಳು ನಿರ್ಮಾಣಗೊಂಡಿದ್ದು, ಇದರಿಂದ ತಗ್ಗು ಪ್ರದೇಶದಲ್ಲಿ ನೆಲೆಸಿರುವ ಜನತೆ ಸಂಕಷ್ಟಕ್ಕೆ ಈಡಾಗುವಂತಾಗಿದೆ.
ಈ ಸಂಬAಧ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಕೂಡಲೇ ಗಮನಹರಿಸಿ ಮುಂದಿನ ದಿನಗಳಲ್ಲಿ ಉಂಟಾಗಲಿರುವ ಜನರ ಆತಂಕಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
ವಿಶೇಷ ವರದಿ -ಚಂದ್ರಮೋಹನ್