ಕೂಡಿಗೆ, ಮೇ ೨೧: ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ತಡೆಗೋಡೆ ಜರಿದ ಪರಿಣಾಮ ಶಿಕ್ಷಕಿ ಶಾಂತಲಾ ಎಂಬವರ ಮನೆಗೆ ಅಪಾರ ಹಾನಿ ಉಂಟಾಗಿದೆ.
ಕುಶಾಲನಗರ ಉರ್ದು ಶಾಲಾ ಶಿಕ್ಷಕಿಯಾಗಿರುವ ಶಾಂತಲಾ ಅವರ ಮನೆಯ ಪಕ್ಕದಲ್ಲಿ ಖಾಸಗಿ ಜಮೀನಿನಿಂದ ಮಳೆ ನೀರು ಹರಿದು ಬರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ೫೭ ಅಡಿ ಉದ್ದದ ೯ ಅಡಿ ಎತ್ತರದಲ್ಲಿ ತಡೆಗೋಡೆ ನಿರ್ಮಿಸಿದ್ದರು. ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಎತ್ತರ ಪ್ರದೇಶದಿಂದ ತಗ್ಗು ಪ್ರದೇಶದತ್ತ ಹರಿದು ಬಂದ ಮಳೆ ನೀರಿನ ಒತ್ತಡಕ್ಕೆ ಬರೆ ಕುಸಿದಿದೆ. ಪರಿಣಾಮ ತಡೆಗೋಡೆ ಜರಿದು ಶಾಂತಲಾ ಅವರ ಮನೆಗೆ ಅಪ್ಪಳಿಸಿದೆ. ಘಟನೆಯಲ್ಲಿ ಮನೆಯ ಕೋಣೆ, ಅಡುಗೆ ಕೋಣೆ, ಡೈನಿಂಗ್ ರೂಂ ಗೋಡೆ ನೆಲಕಚ್ಚಿದೆ. ಮನೆಗೆ ಹೊಂದಿಕೊAಡAತೆ ಬೆಳೆಸಲಾಗಿದ್ದ ೧೦ ಅಡಿಕೆ ಮರಗಳು ಕೂಡ ಮುರಿದು ಬಿದ್ದಿದೆ. ಮನೆ ಮೇಲಿನ ಪ್ಯಾರಾಪಟ್‌ವಾಲ್ ಕೂಡ ಜಖಂಗೊAಡಿದೆ.
ತಡೆಗೋಡೆ ನಿರ್ಮಾಣಕ್ಕೆ ರೂ. ೧೦ ಲಕ್ಷದಷ್ಟು ಹಣ ವ್ಯಯಿಸಲಾಗಿದೆ. ಮನೆಯ ಕೋಣೆಗಳ ಗೋಡೆಗಳು ಜಖಂಗೊAಡಿದ್ದು ಎಲ್ಲವೂ ಹೊಸದಾಗಿ ನಿರ್ಮಿಸಬೇಕಿದೆ. ಘಟನೆಯಿಂದ ರೂ. ೧೫ ಲಕ್ಷದಷ್ಟು ಹಾನಿ ಉಂಟಾಗಿದೆ ಎಂದು ಶಿಕ್ಷಕಿ ಶಾಂತಲಾ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ, ಕೂಡುಮಂಗಳೂರು ಗ್ರಾಪಂ ಪಿಡಿಓ ಸಂತೋಷ್ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದಾರೆ.