ಸುಂಟಿಕೊಪ್ಪ, ಮೇ ೨೧: ಪಟ್ಟಣದಲ್ಲಿ ಗುಡುಗು ಸಹಿತ ಮಳೆಯಿಂದ ಉಲುಗುಲಿ ರಸ್ತೆಯಲ್ಲಿ ತುಂಬಿ ಹರಿದ ಕೆಸರು ನೀರು ಕೆಲವು ಅಂಗಡಿ ಹಾಗೂ ಮನೆಗಳಿಗೆ ನುಗ್ಗಿ ನಷ್ಟ ಸಂಭವಿಸಿದೆ. ಈ ರಸ್ತೆಯ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ಹರಿದು, ತಗ್ಗು ಭಾಗದಲ್ಲಿರುವ ಜನತಾ ಕಾಲೋನಿ ಮನೆಗಳಿಗೆ ಹಾಗೂ ಒಂದನೇ ವಿಭಾಗದ ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿ ವಾಸಿಸುವವರು ತೊಂದರೆ ಅನುಭವಿಸುವಂತಾಯಿತು.

ಸುಂಟಿಕೊಪ್ಪ ಪಟ್ಟಣದಲ್ಲಿ ಚರಂಡಿಯಲ್ಲಿ ತುಂಬಿರುವ ಕಸವನ್ನು ತೆಗೆಯದ ಪರಿಣಾಮ ಮಳೆಗಾದಲ್ಲಿ ನೀರು ತುಂಬಿ ರಸ್ತೆಯಲ್ಲಿ ಹೋಬಳಿಯ ಸುತ್ತಮುತ್ತ ಗುಡುಗು ಸಹಿತ ಸುರಿದ ಮಳೆಯಿಂದ ತೋಡು, ಕೊಳ್ಳ ತುಂಬಿ ಹರಿಯಿತು. ಹೋಬಳಿಯ ನಾಕೂರು ಶಿರಂಗಾಲ, ಕಾನ್ ಬೈಲು, ಅಂದಗೋವೆ ಕೊಡಗರ ಹಳ್ಳಿ, ಕಡೆಗಳಲ್ಲಿ ಉತ್ತಮ ಮಳೆ ಸುರಿಯಿತು.