ಕುಶಾಲನಗರ, ಮೇ ೨೧: ಕುಶಾಲನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ತಾ. ೨೨ ರಿಂದ (ಇಂದಿನಿAದ) ಐದು ದಿನಗಳ ಕಾಲ ಶ್ರೀ ಶತ ಚಂಡಿಕಯಾಗ ಕಾರ್ಯಕ್ರಮ ನಡೆಯಲಿದೆ. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾ. ೨೨ ರಂದು (ಇಂದು) ಬೆಳಿಗ್ಗೆ ೭.೩೦ ರಿಂದ ದೇವತಾ ಪ್ರಾರ್ಥನೆ ನಡೆದು ಗಣಪತಿ ಪೂಜೆ ನಂತರ ಹೋಮ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ನಡೆಯಲಿದೆ.
ಸಂಜೆ ೫.೩೦ ರಿಂದ ಸಂಘದ ವತಿಯಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಗಣಪತಿ ದೇವಾಲಯ ತನಕ ಮೆರವಣಿಗೆ, ನಂತರ ಯಾಗ ಶಾಲೆಗೆ ಪ್ರವೇಶ ಮಾಡುವ ಕಾರ್ಯಕ್ರಮ ಜರುಗಲಿದೆ. ಭರತನಾಟ್ಯ ಕಾರ್ಯಕ್ರಮ, ನಂತರ ಪೂಜಾ ಕಾರ್ಯಕ್ರಮ ನಡೆದು ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ತಾ. ೨೩ ರಂದು ಚಂಡಿಕಾ ಪಾರಾಯಣ ನಂತರ ವಿಶೇಷ ಪೂಜಾ ಕಾರ್ಯಕ್ರಮ, ಸಂಜೆ ಕರಾವಳಿಯ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಆಚಾರ್ ಜನಸಾಲೆ ಸಂಗಡಿಗರಿAದ ಯಕ್ಷಗಾನ ವೈಭವ ಕಾರ್ಯಕ್ರಮ, ನಂತರ ಪೂಜಾ ಕಾರ್ಯಕ್ರಮ ನಡೆಯಲಿದೆ.
ತಾ. ೨೪ ರಂದು ಬೆಳಿಗ್ಗೆ ೭.೩೦ ರಿಂದ ಚಂಡಿಕಾ ಪಾರಾಯಣ, ಮಹಿಳಾ ಮಂಡಳಿ ವತಿಯಿಂದ ಸುಹಾಸಿನಿ ಪೂಜೆ, ಸಂಜೆ ಸುಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರಾದ ಕುಮಾರಿ ಮೇಘನಾ ಸಾಲಿಗ್ರಾಮ ಅವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ. ತಾ. ೨೫ ರಂದು ಬೆಳಿಗ್ಗೆ ಮಹಾ ಮೃತ್ಯುಂಜಯ ಹೋಮ ನಂತರ ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳಿಂದ ದಂಪತಿ ಪೂಜೆ ನಡೆಯುವುದು. ಸಂಜೆ ೫.೩೦ ರಿಂದ ವಿದ್ಯಾಭೂಷಣ್ ಅವರಿಂದ ಭಕ್ತಿ ಗೀತೆ ಕಾರ್ಯಕ್ರಮ, ತಾ. ೨೬ ರಂದು ಬೆಳಿಗ್ಗೆ ಶತಚಂಡಿಕಾ ಯಾಗ ಪ್ರಾರಂಭ ನಂತರ ಮಹಾಪೂರ್ಣಾಹುತಿ, ಮಂಗಳಾರತಿ ನಂತರ ಅನ್ನಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ
ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಕೇರಳದ ಪ್ರಸಿದ್ಧ ಚೆಂಡೆ ವಾದಕರಾದ ಚೇರುದಾರನ್ ಚಂದ್ರನ್ ಮಹಾರಾಜ್ ಸಂಗಡಿಗರಿAದ ಚೆಂಡೆ ಸೇವೆ ಮತ್ತು ನರ್ತನ ಸೇವೆ ನಡೆಯಲಿದೆ. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಗಿರೀಶ್ ಭಟ್ ಮತ್ತು ಯೋಗೇಶ್ ಭಟ್ ರಾಘವೇಂದ್ರ ಭಟ್ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.