ಗೋಣಿಕೊಪ್ಪ ವರದಿ, ಮೇ ೨೦ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ಸ್ಥಾನ ಪಡೆದ ಕಾಟಿಮಾಡ ಡಿ. ಭಾಷಿತಾ ಅವರನ್ನು ಕ್‌ಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆಯಿಂದ ಸನ್ಮಾನಿಸಲಾಯಿತು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾಗಿ ಬೆಳೆಯುವಷ್ಟು ಶ್ರಮ ವಹಿಸಬೇಕು ಖಾಸಗಿ ಉದ್ಯೋಗಕ್ಕಿಂತ ಭಾರತ ದೇಶವನ್ನು ಪ್ರತಿನಿಧಿಸುವ ಸೇವೆ ಅವಶ್ಯ. ಸ್ಥಳೀಯ ಭಾಷೆ, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕಿದೆ. ಉನ್ನತ ಶಿಕ್ಷಣದ ನಂತರ ವೃತ್ತಿ ನಡುವೆ ಸಂಸ್ಕೃತಿ ಪಾಲನೆ ಕೂಡ ಅವಶ್ಯವಾಗಿದೆ. ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ಬದುಕಿಗೆ ಮುಖ್ಯ ಎಂದು ವೇದಿಕೆಯ ಹಿರಿಯರು ಹೇಳಿದರು.

ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಅಧ್ಯಕ್ಷ ಕೊಟ್ಟ್ಕತ್ತೀರ ಸೋಮಣ್ಣ, ಉಪಾಧ್ಯಕ್ಷ ಮಂಡೆಚAಡ ಪಿ. ಗಣಪತಿ, ಕಾರ್ಯದರ್ಶಿ ಚೇಂದೀರ ಎಂ. ಬೋಪಣ್ಣ, ನಿರ್ದೇಶಕರಾದ ಎಚ್. ಬಿ. ಬೋಜಮ್ಮ, ಕೇಟೀಟಿರ ಕಾಮುಣಿ ಪೂಣಚ್ಚ, ಕಳ್ಳಿಚಂಡ ಶಂಭು ಪೂವಯ್ಯ, ಮದ್ರೀರ ಸಿ. ಕರುಂಬಯ್ಯ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಮಲ್ಲಂಡ ರಾಜಾ ಸುಬ್ಬಯ್ಯ, ನೆರೆಯಂಡಮ್ಮನ ಎಸ್. ಸುಬ್ರಮಣಿ, ಕೊಳ್ಳಿಮಾಡ ಎಂ. ಸೋಮಯ್ಯ, ಕೋದೇಂಗಡ ಕೆ. ರವಿ, ಕೊಳ್ಳಿಮಾಡ ಎಂ. ಕಾರ್ಯಪ್ಪ, ಕಾಳಿಮಾಡ ಶಂಭು, ಕಾಟಿಮಾಡ ಲೀಲಾ ಅಣ್ಣಯ್ಯ, ರೀನಾ ಕಾವೇರಮ್ಮ, ಬೊವ್ವೇರಿಯಂಡ ಮೊಣ್ಣಪ್ಪ, ಅಚ್ಚಿಯಂಡ ಜನಾರ್ಧನ್, ಸಿಬ್ಬಂದಿ ಛಾಯಾ ಇದ್ದರು.