ಕಣಿವೆ, ಮೇ ೨೧: ವ್ಯಾಪಕವಾದ ಮಳೆಯಿಂದ ರೈತರು ಕೈಗೊಂಡಿದ್ದ ಶುಂಠಿ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ತೊರೆನೂರು ಗ್ರಾಮದಲ್ಲಿ ಕೃಷಿಕ ಪ್ರೇಮಕುಮಾರ್ ಎಂಬವರು ಬೆಳೆದಿದ್ದ ಶುಂಠಿ ಫಸಲು ಕೊಚ್ಚಿಹೋಗಿದೆ.
ಇನ್ನು ಕೆಲವು ರೈತರು ಬೆಳೆದಿದ್ದ ಅಡಿಕೆ, ಕೆಸ, ಸಿಹಿ ಗೆಣಸು ಮೊದಲಾದ ಬೆಳೆಗಳು ಜಲಾವೃತಗೊಂಡಿವೆ.
ಎಕರೆಗೆ ನಾಲ್ಕು ಲಕ್ಷ ರೂಗಳಿಗೂ ಹೆಚ್ಚು ಖರ್ಚು ಮಾಡಿದ್ದ ಬೆಣಗಾಲು ಗ್ರಾಮದ ಪ್ರಸನ್ನಕುಮಾರ್ ಹಾಗೂ ಸೋಮಶೇಖರ್ ಎಂಬವರಿಗೆ ಸೇರಿದ ಶುಂಠಿ ಫಸಲು ಮಳೆಯ ನೀರಿನ ರಭಸಕ್ಕೆ ಶುಂಠಿಯ ಬುಡ ಸಮೇತ ಕಿತ್ತು ಕೊಚ್ಚಿ ಹೋಗಿವೆ.