ಶನಿವಾರಸಂತೆ, ಮೇ ೨೦: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ೨ ಗಂಟೆಯಿAದ ೩ ಗಂಟೆಯವರೆಗೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು.ಮಧ್ಯೆ ಸ್ವಲ್ಪ ಬಿಡುವು ನೀಡಿದರೂ ಪುನಃ ೪ ಗಂಟೆಯಿAದ ೫-೩೦ ರವರೆಗೂ ಬಿಡುವು ನೀಡದೇ ಜೋರಾಗಿ ಸುರಿದ ಮಳೆ ನಂತರವೂ ಜಿಟಿಜಿಟಿ ಸುರಿಯುತ್ತಿತ್ತು.

ಹೋಬಳಿಯಾದ್ಯಂತ ನಾಲ್ಕೆöÊದು ದಿನಗಳಿಂದ ಮಳೆಯಾಗುತ್ತಿದ್ದು ಬೆಳೆಗಾರರು ತೋಟಗಳ ಕೆಲಸಗಳತ್ತ ಮುಖ ಮಾಡಿದ್ದಾರೆ. ಕಾಫಿ ಗಿಡಗಳಿಗೆ ಗೊಬ್ಬರ ಹಾಕುವ, ಚಿಗುರು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.