ಮಡಿಕೇರಿ, ಮೇ ೨೧: ಸುನ್ನಿ ಮುಸ್ಲಿಂ ಜುಮಾ ಮಸೀದಿ ಹಾಗೂ ನುಶ್ರತುಲ್ ಇಸ್ಲಾಂ ಅಸೋಸಿಯೇಷನ್ ಕೊಯನಾಡು ವತಿಯಿಂದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆಯ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು. ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳಿಸಿದ ಆಫೀದಾ ಫಾತಿಮಾ (೫೨೭), ಮೊಹಮ್ಮದ್ ಅಜಿನಾಸ್ (೫೧೩), ಶಿಫಾನ (೫೧೦), ತಸ್ನಿಮಾ (೫೦೪), ಮೊಹಮ್ಮದ್ ರಾಝಿ (೪೯೪), ಆಯಿಷತುಲ್ ಆಝ್ಮೀಯಾ (೪೯೧), ಎಸ್.ಎಸ್.ಎಲ್.ಸಿ.ಯಲ್ಲಿ ಫಾತಿಮಾತ್ ಸುಮ್ಮಯ್ಯ (೪೮೯), ಆರ್ಫಾಜ್ ಕೆ.ಎ. (೪೮೭) ಇವರುಗಳಿಗೆ ಪ್ರತಿಭಾ ಪುರಸ್ಕರ ನೀಡಲಾಯಿತು.

ಈ ಸಂದರ್ಭ ಮಸೀದಿ ಖತೀಬ್ ಉಸ್ತಾದ್ ಮಹಮ್ಮದ್ ಸಖಾಫಿ ಅಲ್ ಹೀಕಮಿ, ಸದರ್ ಉಸ್ತಾದ್ ನೌಶದ್ ಫಾಳಿಲಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಎಸ್.ಎ., ನುಶ್ರತುತ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ನಝೀರ್ ಮಾಡಶೇರಿ, ಮಸೀದಿ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಲವಿ ಕುಟ್ಟಿ, ಮೊಯಿದಿನ್ ಕುಂಞÂ, ಸಲಹಾ ಸಮಿತಿ ಸದಸ್ಯರಾದ ಹನೀಫ್ ಎಸ್.ಪಿ., ಎನ್.ಐ.ಎ. ಕಾರ್ಯದರ್ಶಿಯಾದ ಜುಹೈಲ್, ಸದಸ್ಯ ರುನೈಝ್, ಯು.ಎ.ಇ. ಸಮಿತಿ ಸದಸ್ಯ ನಝೀರ್ ಟಿ.ಕೆ. ಹಾಗೂ ಮತ್ತಿತರರು ಹಾಜರಿದ್ದರು.