ಕೂಡಿಗೆ, ಮೇ ೨೧: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಶಿರಂಗಾಲ ಹಳೆ ಬೀದಿಯ ವಾಸದ ಮನೆಯ ಮೇಲೆ ಮರ ಬಿದ್ದ ಘಟನೆ ನಡೆದಿದೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರೀ ಗಾಳಿ ಮಳೆಗೆ ಶಿರಂಗಾಲ ಗ್ರಾಮದ ಶ್ಯಾಮ್ ಎಂಬವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದ ಪರಿಣಾಮವಾಗಿ ಮನೆಯ ೧೦ ಕ್ಕೂ ಹೆಚ್ಚು ಸಿಮೆಂಟ್ ಶೀಟ್‌ಗಳು ಹಾನಿಯಾಗುವುದರ ಜೊತೆಗೆ ಶ್ಯಾಂ ಅವರ ಪತ್ನಿ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುವಿಗೆ ಶಿರಂಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.