ಗೋಣಿಕೊಪ್ಪ ವರದಿ, ಮೇ ೨೧: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮೈದಾನದಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಆರು ಬಾರಿ ಆತಿಥ್ಯ ವಹಿಸಿದ ದಾಖಲೆ ಮಾಡಿದೆ.

ಕಾಂಡೇರ, ಬಲ್ಲಿಮಾಡ, ಅಡ್ಡೇಂಗಡ, ಕೊಕ್ಕೇಂಗಡ, ಅಳಮೇಂಗಡ ಕುಟುಂಬಗಳು ಕ್ರಿಕೆಟ್ ನಮ್ಮೆ ನಡೆಸಿ ಯಶಸ್ವಿಯಾಗಿತ್ತು. ಅರಮಣಮಾಡ ಕುಟುಂಬವು ೩೧೩ ತಂಡಗಳನ್ನು ಸೇರಿಸಿಕೊಂಡು ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಕ್ರಿಕೆಟ್ ಆಯೋಜಿಸಿ ದಾಖಲೆ ಮಾಡಿದೆ. ಆರನೇ ಕುಟುಂಬ ಎಂಬ ಹೆಗ್ಗಳಿಕೆ ಪಡೆದುಕೊಂಡಿತು. ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹ ಯೋಗದಲ್ಲಿ ನಡೆದ ಅರಮಣಮಾಡ ಕ್ರಿಕೆಟ್ ನಮ್ಮೆಯ ಭಾನುವಾರ ಸಮಾರೋಪ ಗೊಂಡಿದ್ದು, ಪಂದ್ಯಾವಳಿ ಯಶಸ್ಸು ಕಂಡಿತು. (ಮೊದಲ ಪುಟದಿಂದ) ಉದ್ಯಮಿ, ಕೋಣೇರೀರ ಆದಿತ್ಯ ಉತ್ತಪ್ಪ, ಸೈಕಲ್ ಪ್ಯೂರ್ ಅಗರಬತ್ತಿ ಉದ್ಯಮದ ನಿರ್ದೇಶಕ ಅರ್ಜುನ್ ಎಂ. ರಂಗ, ಹಿರಿಯ ವೈದ್ಯ ಮಾಪಂಗಡ ಎಸ್. ಬೆಳ್ಯಪ್ಪ, ಅರಮಣಮಾಡ ಕ್ರಿಕೆಟ್ ಕಮಿಟಿ ಅಧ್ಯಕ್ಷ ಎ.ಕೆ. ಸುರೇಶ್, ಉಪಾಧ್ಯಕ್ಷ ಸುಗುಣ ಗಣಪತಿ, ಕಾರ್ಯದರ್ಶಿ ಅಜಯ್, ಖಜಾಂಚಿ ದಿನು ಬೆಳ್ಯಪ್ಪ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮತ್ತಿತರರು ಹಾಗೂ ಅರಮಣಮಾಡ ಕುಟುಂಬಸ್ಥರು ಪಾಲ್ಗೊಂಡಿದ್ದರು.