ಮಡಿಕೇರಿ, ಮೇ ೨೧: ೨೦೨೪-೨೫ನೇ ಸಾಲಿನಲ್ಲಿ ಸೋಮವಾರಪೇಟೆ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಹಾಗೂ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಯಾವುದೇ ಶುಲ್ಕವಿಲ್ಲದೇ ಸರ್ಕಾರದ ವತಿಯಿಂದ ಊಟ, ವಸತಿ, ಸಮವಸ್ತç, ಶೂ, ಸಾಕ್ಸ್, ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಶುಚಿ ಸಂಭ್ರಮ ಕಿಟ್ (ಸೋಪು, ಎಣ್ಣೆ, ಬ್ರಶಸ್, ಪೇಸ್ಟ್, ಪೌಡರ್), ಕಂಪ್ಯೂಟರ್ ಲ್ಯಾಬ್, ಆಟೋಪಕರಣಗಳು ಹಾಗೂ ಇತರೆ ಸೌಲಭ್ಯಗಳು ಮತ್ತು ನುರಿತ ಬೋಧಕರಿಂದ ಬೋಧನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಉಚಿತ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕುಶಾಲನಗರ ತಾಲೂಕು ನಂಜರಾಯಪಟ್ಟಣ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, (೬೩೬೨೫೫೫೩೨೦), ಕುಶಾಲನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ (೯೪೮೧೧೪೩೪೯೧), ಸೋಮವಾರಪೇಟೆ ತಾಲೂಕಿನ ಮಾಲಂಬಿ ವಾಲ್ಮೀಕಿ ಆಶ್ರಮ ಶಾಲೆ (೬೩೬೨೫೫೫೩೨೦), ಯಡವನಾಡು ವಾಲ್ಮೀಕಿ ಆಶ್ರಮ ಶಾಲೆ (೮೬೧೮೫೪೬೦೦೯), ಕುಶಾಲನಗರ ಬಸವನಹಳ್ಳಿ ವಾಲ್ಮೀಕಿ ಆಶ್ರಮ ಶಾಲೆ (೮೨೭೭೨೭೭೬೫೦) ಈ ಸಂಸ್ಥೆಗಳಲ್ಲಿ ದಾಖಲು ಮಾಡಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೋರಲಾಗಿದೆ ಎಂದು ಸೋಮವಾರ ಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.